ಯಶಸ್ವಿಯಾದ ಬೃಹತ್ ಲಸಿಕಾ ಮೇಳ:ಜಿಲ್ಲೆಯ ಜನತೆಯಿಂದ ಉತ್ತಮ ಸ್ಪಂದನೆ : ಡಿಸಿ, ಸಿಇಓ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಜಿಲ್ಲೆಯಾದ್ಯಂತ ಶುಕ್ರವಾರ ಹಮ್ಮಿಕೊಂಡ ಬೃಹತ್ ಕೋವಿಡ್-19 ಲಸಿಕಾ ಮೇಳಕ್ಕೆ ಜಿಲ್ಲೆಯ ಜನತೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮತ್ತು ಜಿ.ಪಂ ಸಿಇಓ ಟಿ.ಭೂಬಾಲನ್ ಜಂಟಿಯಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸೂಚನೆ ಮೇರೆಗೆ ಜಿಲ್ಲೆಯಾದ್ಯಂತ ನಡೆದ ಬೃಹತ್ ಲಸಿಕಾ ಮಹಾಮೇಳದಲ್ಲಿ ಬಾಗಲಕೋಟೆ ಜಿಲ್ಲೆಗೆ 75 ಸಾವಿರ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಬೆಳಿಗ್ಗೆಯಿಂದ ಸಂಜೆ 7ರ ಹೊತ್ತಿಗೆ 66,161 ಜನರಿಗೆ ಲಸಿಕೆ ನೀಡುವ ಮೂಲಕ ಶೇ.88 ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಜ್ಯದಲ್ಲಿ ಟಾಪ್ 15 ರಲ್ಲಿ ಬಾಗಲಕೋಟೆ ಜಿಲ್ಲೆ ಸಹ ಒಂದಾಗಿದೆ ಎಂದು ತಿಳಿಸಿದ್ದಾರೆ.

ಸಂಜೆ 5.30ರ ಹೊತ್ತಿಗೆ 55485 ಜನರಿಗೆ ಲಸಿಕೆ ನೀಡಲಾಗಿದೆ. ಬಾದಾಮಿ ತಾಲೂಕಿನಲ್ಲಿ 9924 ಜನ ಲಸಿಕೆ ಪಡೆದುಕೊಂಡರೆ, ಬಾಗಲಕೋಟೆ 8180, ಬೀಳಗಿ 5257, ಹುನಗುಂದ 11283, ಜಮಖಂಡಿ 14573 ಹಾಗೂ ಮುಧೋಳ ತಾಲೂಕಿನಲ್ಲಿ 6268 ಜನ ಲಸಿಕೆ ಪಡೆದುಕೊಂಡಿದ್ದು, ಪ್ರಾರಂಭದಲ್ಲಿ ಲಸಿಕಾ ಕೇಂದ್ರಕ್ಕೆ ಬರುವ ಸಂಖ್ಯೆ ಕಡಿಮೆ ಇದ್ದರೂ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಕಂಡುಬಂದಿತು. ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಲಸಿಕಾ ಮೇಳದಲ್ಲಿ 10.30 ಗಂಟೆಗೆ 2187 ಜನ ಲಸಿಕೆ ಪಡೆದುಕೊಂಡರೆ, 11.30ಕ್ಕೆ 10928, 1.30ಕ್ಕೆ 26088, 3.30ಕ್ಕೆ 40263, 4.30ಕ್ಕೆ 44077, 5.30ಕ್ಕೆ 55485, 6.30ರ ಹೊತ್ತಿಗೆ 58,610 ಹಾಗೂ ಸಂಜೆ 7ಕ್ಕೆ ಒಟ್ಟು 66161 ರಷ್ಟು ಜನ ಲಸಿಕೆ ಪಡೆದುಕೊಂಡಿದ್ದರು ಎಂದು ತಿಳಿಸಿದರು.

Be the first to comment

Leave a Reply

Your email address will not be published.


*