ಸಾವಿರಾರು ಅರಣ್ಯವಾಸಿ ಗಳಿಂದ ಜಿಲ್ಲಾಧಿಕಾರಿಗಳಿಗೆ ಜಿ.ಪಿ.ಎಸ್ ಪುನರ್ ಪರಿಶೀಲನೆಗೆ ಮೇಲ್ಮನವಿ ಅರ್ಜಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಮುಂಡಗೋಡ

ಅರ್ಜಿ ಸಲ್ಲಿಸಿ 8 ವರ್ಷವಾದರೂ ಜಿ.ಪಿ.ಎಸ್ ಕಾರ್ಯ ಪೂರ್ತಿಗೊಳ್ಳದಿರುವುದು, ಸಾಗುವಳಿ ಕ್ಷೇತ್ರದ ವ್ಯಾಪ್ತಿ ಜಿ.ಪಿ.ಎಸ್ ಸರ್ವೇ ಜರುಗಿಸದೇ ಒಕ್ಕಲೆಬ್ಬಿಸುತ್ತಿರುವದು, ಕಾನೂನು ಬದ್ಧ ಮಾನ್ಯತೆ ಹೊಂದಿರುವ ವಿಧಾನದಿಂದ ಜಿ.ಪಿ.ಎಸ್ ಗಡಿ ನಿರ್ದಿಷ್ಟ ಪಡಿಸದೇ ಇರುವದರಿಂದ ಸಾಗುವಳಿ ಕ್ಷೇತ್ರಕ್ಕೆ ಸಂಬಂಧಿಸಿ ಪುನಃ ಜಿ.ಪಿ.ಎಸ್ ಸರ್ವೇ ಮಾಡಲು ಆಗ್ರಹಿಸಿ ಜಿಲ್ಲಾ ಅರಣ್ಯ ಹಕ್ಕು ಸಮಿತಿಗೆ ಕಾರವಾರಕ್ಕೆ ಇಂದು ಸಾವಿರಾರು ಅರಣ್ಯವಾಸಿಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪುನರ್ ಹಕ್ಕು ಕಾಯಿದೆ ಅಡಿಯಲ್ಲಿ ಪುನರ್ ಪರಿಶೀಲಿಸಲು ಕೋರಿ ಸ್ಥಳೀಯ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಮೇಲ್ಮನವಿ ಸಲ್ಲಿಸಲಾಯಿತು.

CHETAN KENDULI

ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಜರುಗಿದ ಮೇಲ್ಮನವಿ ಅಭಿಯಾನದಲ್ಲಿ ತಾಲೂಕಾ ಅಧ್ಯಕ್ಷ ಶಿವಾನಂದ ಜೋಗಿ, ಶಿವಯ್ಯ ಹಿರೇಮಠ, ರಾಮು ಗೌಳಿ, ವೀರಭದ್ರ, ಮಲ್ಲಿಕಾರ್ಜುನ, ಅಬ್ದುಲ್ ತಿಳವಳ್ಳಿ ಮುಂತಾದವರು ಭಾಗವಹಿಸಿದ್ದರು.
ಅರಣ್ಯ ಹಕ್ಕು ಕಾಯಿದೆ ತಾಲೂಕಾ ಅಧಿಕಾರಿ ರಾಧಾಕೃಷ್ಣ ಪವರ್ ಅವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*