ಚರಂಡಿಗಳಾದ ರಸ್ತೆಗಳು ಮೂಲಭೂತ ಸೌಕರ್ಯ ಕೊಡುವಲ್ಲಿ ಅಧಿಕಾರಿಗಳ ತಕರಾರು

ವರದಿ.ಹರೀಶ್ ದೊಡ್ಬಳ್ಳಾಪುರ

ರಾಜ್ಯ ಸುದ್ದಿಗಳು 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರುವಂತಹ ಕಾಡ ತಿಪ್ಪೂರು ಗ್ರಾಮದ ಎಸ್ ಟಿ ಕಾಲೋನಿ ಎಂದೇ ಕರೆಯಲ್ಪಡುವ ಕಾಲೋನಿಯಲ್ಲಿ ರಸ್ತೆಗಳು ಹದಗೆಟ್ಟಿದ್ದು ರಸ್ತೆಗಳು ಚರಂಡಿಗಳಾಗಿ ಮಾರ್ಪಾಡಾಗಿವೆ. ಮಳೆ ಬಂದರೆ ಚರಂಡಿಯ ನೀರು ಮನೆಗಳಿಗೆ ನುಗ್ಗುವುದು ಇಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಬಹುದಾಗಿದೆ ಇಲ್ಲಿ ರಸ್ತೆಯ ಬದಿಗಳಲ್ಲಿ ಯಾವುದೇ ರೀತಿಯಾದಂತಹ ಚರಂಡಿಯ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.

CHETAN KENDULI

ಈ ವಿಚಾರವಾಗಿ ಸ್ಥಳೀಯ ಪಂಚಾಯಿತಿಯ ಸದಸ್ಯರಾದ ಕೃಷ್ಣಮೂರ್ತಿ ರವರು ಮಾತನಾಡಿ ಈ ಹಿಂದೆ ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಕಾಲೋನಿಯ ಹಲವು ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡಿದ್ದು ಯಾವುದೇ ರೀತಿಯ ಚರಂಡಿ ವ್ಯವಸ್ಥೆಯನ್ನು ಮಾಡಿರುವುದಿಲ್ಲ ಸ್ಥಳೀಯ ಜನರು ಕೂಡ ಈ ವಿಚಾರವಾಗಿ ಪ್ರಶ್ನೆ ಮಾಡದೆ ಇರುವುದು ಈಗಿನ ಸಮಸ್ಯೆಗೆ ಕಾರಣವಾಗಿದೆ ಈ ಹಿಂದೆ ಇದ್ದಂತಹ ಪಂಚಾಯಿತಿಯ ಸದಸ್ಯರು ಈ ಕುರಿತಾಗಿ ಯೋಚಿಸಿಲ್ಲ , ತಾವು ಅಧಿಕಾರಕ್ಕೆ ಬಂದು 8 ತಿಂಗಳು ಕಳೆದಿದೆ 6 ತಿಂಗಳಿನಿಂದ ಈ ವಿಚಾರವಾಗಿ ತಾಲೂಕಿನ ದಂಡಾಧಿಕಾರಿಗಳಿಗೂ ಹಾಗೂ ಮಾನ್ಯ ಶಾಸಕರಿಗೂ ಈ ವಿಚಾರವಾಗಿ ಮನವಿ ಸಲ್ಲಿಸಿದ್ದು ಯಾರೊಬ್ಬರೂ ಸ್ಪಂದಿಸಿಲ್ಲ ಎಲ್ಲರೂ ಕೇವಲ ಭರವಸೆ ನೀಡುವುದರಲ್ಲೇ ಕಾಲ ಕಳೆದಿದ್ದಾರೆ ದಯಮಾಡಿ ತಾಲೂಕು ದಂಡಾಧಿಕಾರಿಗಳು ಹಾಗೂ ಶಾಸಕರು ಈ ವಿಚಾರವಾಗಿ ಧನಾತ್ಮಕ ಪ್ರತಿಕ್ರಿಯೆ ನೀಡಬೇಕು ಹಾಗೂ ಸ್ಥಳೀಯರ ಕಷ್ಟಗಳನ್ನು ಮನಗಂಡು ರಸ್ತೆಯ ಬದಿಗಳಲ್ಲಿ ಚರಂಡಿ ನಿರ್ಮಿಸಲು ವ್ಯವಸ್ಥೆಯನ್ನು ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿದ್ದಲಿಂಗಯ್ಯ ಬಿ ಆರ್ ರವರು ಮಾತನಾಡಿ ಮಾಧ್ಯಮಗಳು ವರದಿ ಮಾಡಲು ಮುಂದಾಗುತ್ತಿದ್ದಂತೆಯೇ ತಾಲೂಕಿನ ದಂಡಾಧಿಕಾರಿಗಳು ಅಧಿಕಾರಿಗಳು ಕರೆಮಾಡಿ ಕಾಡ ತಿಪ್ಪೂರು ಗ್ರಾಮದ ಜನತೆಯ ಕಷ್ಟಗಳಿಗೆ ಸ್ಪಂದಿಸುವುದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಒಂದು ವೇಳೆ ಭೇಟಿ ನೀಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಹಾಗೂ ತಾಲೂಕು ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.ಈಗಿನ ಪ್ರಸ್ತುತ ಕೊರೋನಾ ಸಂದರ್ಭದಲ್ಲಿ ಸ್ಥಳೀಯ ನಾಗರಿಕರಿಗೆ ಏನಾದರೂ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಮೃತಪಟ್ಟರೆ ಅವರ ಜೀವಕ್ಕೆ ಹೊಣೆ ಯಾರು ತಾಲ್ಲೂಕು ದಂಡಾಧಿಕಾರಿಗಳೇ, ಶಾಸಕರೇ ಅಥವಾ ಸ್ಥಳೀಯ ರಾಜಕಾರಣಿಗಳೇ ಸ್ಥಳೀಯ ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಇನ್ನಾದರೂ ನೀಡಲಿ….

Be the first to comment

Leave a Reply

Your email address will not be published.


*