ಚಿಪ್ಪಿ ಗಣಿಗಾರಿಕೆಗೆ ಅವಕಾಶ ನೀಡಲು ಡಿ.ಸಿ ಗೆ ಮನವಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಕುಮಟಾ: ಚಿಪ್ಪಿ ಗಣಿಗಾರಿಕೆಗೆ ಅವಕಾಶ ನೀಡಬೇಕು ಹಾಗೂ ತಪ್ಪು ಮಾಹಿತಿ ನೀಡಿ ಮೀನುಗಾರರ ದಿಕ್ಕು ತಪ್ಪಿಸಿ ಗಲಾಟೆ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಘನಾಶಿನಿ ನದಿ ತಟದ ಮೀನುಗಾರರು ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

CHETAN KENDULI

ಅಘನಾಶಿನಿ ನದಿಯಲ್ಲಿ ಕಳೆದ 40 ವರ್ಷಗಳಿಂದ ಚಿಪ್ಪು ಗಣಿಕಾರಿಗೆ ನಡೆಯುತ್ತಿದ್ದು, ಗಾಂವಕರ ಮೈನ್ಸ್ 1972 ರಿಂದ 2012 ರವೆರೆಗೆ ಎರಡು ಬಾರಿ ಗಣಿ ಗುತ್ತಿಗೆ ನವೀಕರಿಸಿಕೊಂಡಿದ್ದಾರೆ. ಸರ್ಕಾರದ ಎಲ್ಲ ನಿಯಮ ಹಾಗೂ ಷರತ್ತುಗಳನ್ನು ಪಾಲಿಸಿ ಕಾನೂನು ಬದ್ಧವಾಗಿ ಲೈಸನ್ಸ್ ಪಡೆದಿದ್ದಾರೆ. ನಾವು ಅಘನಾಶಿನಿ ಮತ್ತು ತದಡಿ ಭಾಗದ ಎಲ್ಲ ಸಮುದಾಯದವರು ನದಿಯಿಂದ ಚಿಪ್ಪಿ ತೆಗೆದು ಗಾಂವಕರ ಮೈನ್ಸ್‍ನವರಿಗೆ ಮಾರಿ ಯೋಗ್ಯ ದರ ಪಡೆದು ಇಲ್ಲಿಯವರೆಗೆ ಜೀವನ ಸಾಗಿಸುತ್ತ ಬಂದಿದ್ದೇವೆ ಎಂದು ಕೋರಿ ಮನವಿ ಸಲ್ಲಿಸಿದರು.


ಈ ವೇಳೆ ತದಡಿ ಮೀನುಗಾರರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಗೋಪಾಲ ಹೊಸ್ಕಟ್ಟಾ,” ಮಾತನಾಡಿ ಮೀನುಗಾರಿಕೆ ದೊಡ್ಡ ಪ್ರಮಾಣದಲ್ಲಿ ಲಾಭದಾಯಕವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿಯೂ ಚೆಪ್ಪಿ ಉದ್ಯಮಕ್ಕೆಯಾವುದೇತೊಂದರೆಯಾಗುವುದಿಲ್ಲ. ಆದರೆ ತದಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಉಮಾಕಾಂತ ಹೊಸ್ಕಟ್ಟಾ ಅಮಾಯಕ ಮೀನುಗಾರರಿಗೆ ಚಿಪ್ಪು ಉದ್ಯಮದಿಂದ ಮೀನುಗಾರಿಕೆ ನಶಿಸುತ್ತದೆ ಎಂದು ತಪ್ಪು ತಿಳುವಳಿಕೆ ನೀಡಿ ನಮ್ಮ ಜೀವನಾಧಾರವಾದ ಚಿಪ್ಪಿ ತೆಗೆಯುವ ಉದ್ಯಮಕ್ಕೆ ಕಲ್ಲು ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಚಿಪ್ಪು ಗಣಿಗಾರಿಕೆ ಬೇಕು ಎನ್ನುವ ಸಾವಿರಾರು ಮೀನುಗಾರರ ವಿರುದ್ಧ ಕೆಲವೇ ಕೆಲವು ಮೀನುಗಾರರನ್ನು ಎತ್ತಿ ಕಟ್ಟುತ್ತಿದ್ದಾರೆ. ಇದರಿಂದ ತಲತಲಾಂತರದಿಂದ ಸಾಮರಸ್ಯದಿಂದ ಬದುಕುತ್ತಿರುವ ತದಡಿ, ಹೊಸ್ಕಟ್ಟಾ, ಕಿಮಾನಿ, ಅಘನಾಶಿನಿ ಭಾಗಗಳಲ್ಲಿ ಎಲ್ಲ ಜಾತಿಯವರು ಒಗ್ಗಟ್ಟಾಗಿ ಬದುಕುತ್ತಿರುವಾಗ ನಮ್ಮಲ್ಲಿ ದ್ವೇಷ ಹುಟ್ಟುಹಾಕುತ್ತಿದ್ದಾರೆ. ಇವರ ಬಗ್ಗೆ ಕ್ರಮ ಕೈಗೊಂಡು ಚಿಪ್ಪಿ ತೆಗೆಯಲು ಅವಕಾಶ ನೀಡಬೇಕು ” ಎಂದರು.

ಈ ಸಂದರ್ಭದಲ್ಲಿ ಸದಾನಂದ ಹೊಸ್ಕಟ್ಟಾ, ಸಂತೋಷ ಮೊರಬ, ದಾಮೋದರ ಲಕ್ಕುವಟೆ, ಸೋಮೇಶ್ವರ ಅಘನಾಶಿನಿ, ಸಚಿನ ಹೊಸ್ಕಟ್ಟಾ, ರಾಮ ಹೊಸ್ಕಟ್ಟಾ, ಪ್ರದೀಪ ಹೊಸ್ಕಟ್ಟಾ, ಪ್ರವೀನ ಹೊಸ್ಕಟ್ಟಾ ಸೇರಿದಂತೆ ಮತ್ತಿತರರು ಇದ್ದರು.

Be the first to comment

Leave a Reply

Your email address will not be published.


*