ರಾಜ್ಯ ಸುದ್ದಿಗಳು
ಬೆಂಗಳೂರು:
ಬೆಂಗಳೂರಿನ ಬ್ಯಾಟರಾಯರನಪುರದಲ್ಲಿರುವ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಮುಖಾಂತರ ಕಸ ಸಂಗ್ರಹ ಹಾಗೂ ವಿಲೇವಾರಿ ಮಾಡುವ ಗುತ್ತಿಗೆ ಅಧಿಕಾರಿಗಳು ಖಾಸಗಿ ಸಂಸ್ಥೆಯೊಂದಿಗೆ ಶಾಮಿಲಾಗಿ ಕಾರ್ಮಿಕರಿಗೆ ಸರಿಯಾದ ವೇತನ ನಿಡದೇ ಬಾರಿ ಅವ್ಯವಹಾರವನ್ನು ಮಾಡುತ್ತಿದ್ದಾರೆ. ಆದರೆ ದಿನನಿತ್ಯವೂ ಪಾಲಿಕೆಯಲ್ಲಿ ಪೌರ ಕಾರ್ಮಿಕರಾಗಿ ದುಡಿಯುತ್ತಿರುವ ಸುಮಾರು 84 ಪೌರ ಕಾರ್ಮಿಕರು ಮಾತ್ರ ವೇತನವಿಲ್ಲದೇ ಪರದಾಡುತ್ತಿದ್ದಾರೆ.
ಹೌದು, ಪಾಲಿಕೆ ಕರೆದಂತಹ ಕಸ ಸಂಗ್ರಹ ಮತ್ತು ವಿಲೇವಾರಿ ಟೆಂಡರ್ ಎಸ್.ಎಲ್.ವ್ಹಿ. ಟ್ರೇಡರ್ಸ್ ಎಂಬ ಖಾಸಗಿ ಸಂಸ್ಥೆಯೊಂದು ಪಡೆದುಕೊಂಡಿದೆ. ಆದರೆ ಟೆಂಡರ್ ಮೂಲಕ ಮಾಡಬೇಕಾದ ಎಲ್ಲ ಕಾರ್ಯವನ್ನು ಮಾತ್ರ ಸಿದ್ದೇಶ್ವರ ಪೌಂಡೇಶನ್ ಹೆಸರಿನಡೆ ಮಾಡಲಾಗುತ್ತಿದೆ. ಇದರಿಂದ ಪೌರ ಕಾರ್ಮಿಕರಿಗೆ ಕಳೆದ 4 ತಿಂಗಳಿಂದ ಸಿಗದ ವೇತನವನ್ನು ಯಾರಿಗೆ ಕೇಳಬೇಕು ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಆದರೆ ಪಾಲಿಕೆ ಅಧಿಕಾರಿಗಳು ಮಾತ್ರ ತಮ್ಮ ಕಾರ್ಯವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಬಾರಿ ದಂಧೆಯನ್ನು ಹೊರತೆಗೆದ ಡಾ.ಬಿ.ಆರ್.ಅಂಬೇಡ್ಕರ್ ದಲಿತರ ಪೌರ ಕಾರ್ಮಿಕರ ಮಹಾ ಸಂಘ:
ಪೌರ ಕಾರ್ಮಿಕರ ಹಿತ ರಕ್ಷಣೆಗಾಗಿ ತೆಲೆ ಎತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ದಲಿತರ ಪೌರ ಕಾರ್ಮಿಕರ ಮಹಾ ಸಂಘವು ಈಗಾಗಲೇ ಕಾರ್ಮಿಕರಿಗೆ ನೀಡಬೇಕಾದ ವೇತನವನ್ನು ಕೂಡಲೇ ನೀಡಬೇಕು ಎಂದು ಆಗ್ರಹಿಸಿ ಸಂಬಂಧಪಟ್ಟ ಬಿಬಿಎಂಪಿ ಕಛೇರಿಯ ಅಧಿಕಾರಿಗಳಿಗೆ ಮನವಿಯನ್ನು ನಿಡಿದ್ದರು. ಆದರೆ ಅಧಿಕಾರಿಗಳು ಮಾತ್ರ ಸ್ಪಂಧಿಸುವಲ್ಲಿ ವಿಫಲರಾಗಿದ್ದಾರೆ.
ಇದರಿಂದ ಡಾ.ಬಿ.ಆರ್.ಅಂಬೇಡ್ಕರ್ ದಲಿತರ ಪೌರ ಕಾರ್ಮಿಕರ ಮಹಾ ಸಂಘದ ಪದಾಧಿಕಾರಿಗಳು ಶುಕ್ರವಾರ ದಿಡೀರ್ ಪ್ರತಿಭಟನೆಗೆ ಮುಂದಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ದಬ್ಬಾಳಿಕೆ ನಡೆಸುತ್ತಿರುವ ಗುತ್ತಿಗೆದಾರರು:
ಕಸ ಸಂಗ್ರಹಣೆ ಮತ್ತು ವಿಲೇವಾರಿ ಟೆಂಡರ್ ಪಡೆದುಕೊಂಡಿರುವ ಅನಧಿಕೃತ ಖಾಸಗಿ ಸಂಸ್ಥೆಯೊಂದು ಕಾರ್ಮಿಕರಿಗೆ ಸರಿಯಾಗಿ ವೇತನವನ್ನು ನೀಡದೇ ಇದರ ಬಗ್ಗೆ ಪ್ರಶ್ನೆ ಮಾಡಲು ಮುಂದಾದ ಕಾರ್ಮಿಕರನ್ನು ಕೆಲಸದಿಂದ ಕೈಬಿಟ್ಟು ತಮಗೆ ಬೇಕಾದ ಬೇರೊಬ್ಬರನ್ನು ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಹುನ್ನಾರು ನಡೆಸಿದ್ದಾರೆ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಟೆಂಡರ್ ಪಡೆದವರು ಒಬ್ಬರು ಕಾರ್ಯ ನಡೆಸುತ್ತಿರುವವರು ಬೇರೊಬ್ಬರೂ…!!!
ಪಾಲಿಕೆಯಲ್ಲಿ ಕಸ ವಿಲೇವಾರಿ ಟೆಂಡರ್ ಪಡೆದುಕೊಂಡಿರುವ ಎಸ್.ಎಲ್.ವ್ಹಿ. ಟ್ರೇಡರ್ಸ್ ಎಂದು ನಾಮಫಲಕ ಹಾಕಿರುವ ಪಾಲಿಕೆ ಅಧಿಕಾರಿಗಳು ಒಪ್ಪಂದ ಮಾತ್ರ ಸಿದ್ದೇಶ್ವರ ಪೌಂಡೇಶನ್ ಎಂಬ ಸಂಸ್ಥೆಯ ಹೆಸರಿನಡಿಯಲ್ಲಿ ಮಾಡಿಕೊಂಡಿದ್ದಾರೆ. ಸಿದ್ದೇಶ್ವರ ಫೌಂಡೇಶನ್ ಈಗಾಗಲೆ ಕೆಲ ವಾರ್ಡಗಳಲ್ಲಿ ಕಪ್ಪುಚುಕ್ಕೆಯಡಿಯಲ್ಲಿ ಮೇಲಾಧಿಕಾರಿಗಳು ಇಟ್ಟಿದ್ದಾರೆ. ಆದರೆ ಬೇರೊಬ್ಬರ ಹೆಸರಿನಲ್ಲಿ ಇದೇ ಸಂಸ್ಥೆಯು ಕಾರ್ಯವನ್ನು ಮುಂದುವರೆಸಿದ್ದು ಪಾಲಿಕೆ ಅಧಿಕಾರಿಗಳ ಶಾಮಿಲತೆಯನ್ನು ಎತ್ತಿ ತೋರುತ್ತಿದೆ. ಕೂಡಲೇ ಇದರ ಬಗ್ಗೆ ಮೇಲಾಧಿಕಾರಿಗಳು ಗಮನಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ದಲಿತರ ಪೌರ ಕಾರ್ಮಿಕರ ಮಹಾ ಸಂಘ ರಾಜ್ಯಾಧ್ಯಕ್ಷ ಎನ್.ಗಂಗಾಧರ ಆಗ್ರಹಿಸಿದ್ದಾರೆ.
Be the first to comment