ಕೃಷ್ಣೆಯ ಪ್ರವಾಹಕ್ಕೆ ಕೊಚ್ಚಿ ಹೊದ ಸೇತುವೆ ಶೀಲಹಳ್ಳಿ ,ಹಂಚಿನಾಳದ ಜನರ ಬದುಕು ದುಸ್ತರ

ವರದಿ: ಅಮರೇಶ ಜಿ


   ಜೀಲ್ಲಾ ಸುದ್ದಿಗಳು


ಲಿಂಗಸುಗೂರ: (ಆ:27) ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ಶೀಲಹಳ್ಳಿ ಹಾಗೂ ಹಂಚಿನಾಳ ಪ್ರವಾಹಕ್ಕೆ ಸೇತುವೆ ಕೊಚ್ಚಿ ಹೋಗಿದ್ದರಿಂದ ಸುತ್ತಮುತ್ತ ಗ್ರಾಮಗಳ ಜನರಿಗೆ ಹೋಗಲು ಮತ್ತು ಬರಲು ಬಹಳ ತೊಂದರೆಯಾಗಿದೆ ಎಂದು ಮಾಜಿ ಗ್ರಾಪಂ ಅಧ್ಯಕ್ಷರು ಸಂಗಪ್ಪ ಮಾತನಾಡಿದರು



ನಾವು ನಮ್ಮ ಗ್ರಾಮಗಳಿಗೆ ಹೊಗಬೇಕಾದರೆ ಜಲದುರ್ಗ ಸೇತುವಯ ಮೂಲಕ ಹೋಗಬೇಕಾಗಿದೆ ಅದು 32 ಕಿಲೋಮೀಟರ್ ದೂರ ಅಲ್ಲದೆ ಆ ಸೇತುವೆಯು ಹಾನಿಯಾಗಿದ್ದು ಬಸ್ಸ ಸಂಚಾರ ಸ್ಥಗಿತವಾಗಿದೆ. ಶೀಲಹಳ್ಳಿ ಸೇತುವ ದಾಟಿದ ನಂತರ ನಮ್ಮ ಜಮೀನುಗಳು ಇರುವುದು. ಹಂಚಿನಾಳ ಶೀಲಹಳ್ಳಿ ಮಾರ್ಗವಾಗಿ ಲಿಂಗಸುಗೂರ್ 13 ಮೀಟರ್ ಅಂತರ.ಪ್ರವಾಹ ನಂತರ ಎಲ್ಲ ಸೇತುವೆಗಳು ಶೀತಲ ಗೊಂಡಿವೆ ಸುತ್ತ ಮುತ್ತಲಿನ ಮಕ್ಕಳು ಶಾಲೆ ಕಾಲೇಜಿಗೆ ಹೋಗಬೇಕಾದರೆ ಬಹಳ ತೊಂದರೆಯಾಗಿದೆ ಏಕೆಂದರೆ ಇದೇ ಸೇತುವೆ ಮೇಲೆ ನಮ್ಮ ಮಕ್ಕಳು ಶಾಲೆ ಕಾಲೇಜಿಗೆ ಹಾಗೂ ಪಟ್ಟಣಕ್ಕೆ ಹೋಗುವ ಸೇತುವೆ ಆಗಿತ್ತು ಆದರೆ



ಪ್ರವಾಹದಿಂದ ಕೊಚ್ಚಿ ಹೋಗಿದ್ದರಿಂದ ನಮ್ಮ ಮಕ್ಕಳು ಶಾಲೆ ಕಾಲೇಜಿಗೆ ಹೋಗಲು ಬಹಳ ತೊಂದರೆ ಆಗಿದೆ ನಮಗೆ ಇರುವುದು ಒಂದೇ ಸೇತುವೆ ಅದು ಕೂಡ ಹಾಳಾಗದೆ ನಮಗೆ ದಿಕ್ಕು ತೋಚದಂತೆ ಆಗಿದೆ ತಾಲೂಕು ಆಡಳಿತ ಅಧಿಕಾರಿಗಳು ತಾತ್ಕಾಲಿಕವಾಗಿ ಆದರು ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಹೇಳಿದರು ಆಗ್ರಹಿಸಿದರು
ಇದೇ ಸಂದರ್ಭದಲ್ಲಿ ಶರಣಪ್ಪ ಮಾಳಪ್ಪ ಗದ್ದೆಪ್ಪ ಉಪಸ್ಥಿತರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*