ಜಿಲ್ಲಾ ಸುದ್ದಿಗಳು
ಭಟ್ಕಳ:
ಉತ್ತರಕನ್ನಡದ ಪರವಾಗಿ ನಮ್ಮ ಕೆಲವು ಸ್ನೇಹಿತರು ಸೇರಿ ನಮ್ಮ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆಯ ಕುರಿತಾಗಿ ನಮ್ಮ ಜಿಲ್ಲೆಯ ಪರವಾಗಿ ಸಹಕಾರ ನೀಡಿ ದ್ವನಿಯಾಗುವಂತೆ ಕೋರಿಕೆ ಸಲ್ಲಿಸಲು
ಗುರುರಾಜ್ ನಾಯಕ (ಡಿವಿಸಿನಲ್ ಮ್ಯಾನೇಜರ್ ಅರೋಗ್ಯ ಕವಚ 108 ಆಂಬುಲೆನ್ಸ್ ) ಇವರ ಸಹಕಾರದಿಂದ ಮಂಗಳೂರಿನ ಸುಪ್ರಸಿದ್ದ ಖಾಸಗಿ ಆಸ್ಪತ್ರೆ ಕೆಎಂಸಿಯ (ಜ್ಯೋತಿ ಸರ್ಕಲ್) ಹೃದಯ ವಿಭಾಗದ ತಜ್ಞ ಹಾಗೂ ಮುಖ್ಯಸ್ಥರಾದ ಡಾ. ಪದ್ಮನಾಭ ಕಾಮತ್ ಅವರನ್ನು ಭೇಟಿ ಮಾಡಿದೆವು ಮಹನೀಯರು ಈಗಾಗಲೇ CAD ಸಂಸ್ಥೆಯ ವತಿಯಿಂದ ಅನೇಕ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಹಾಗೂ ನಮ್ಮ ಜಿಲ್ಲೆಗೆ ಸುಮಾರು 400ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಉಚಿತವಾಗಿ ECG ಯಂತ ವೈದ್ಯಕೀಯ ಸಲಕರಣೆಗಳನ್ನು ಪೂರೈಸಿದ್ದಾರೆ.
ಅವರ ಆತ್ಮೀಯರು ಆದಂತ ನಮ್ಮ ಗುರುರಾಜ ನಾಯಕ ಹಿರೇಗುತ್ತಿ ಅವರ ಕೋರಿಕೆ ಮತ್ತು ಕಳಕಳಿಯ ಮೇರೆಗೆ ಸಲಕರಣೆಗಳನ್ನು ನಮ್ಮ ಜಿಲ್ಲೆಯ ಅನೇಕ ಆಸ್ಪತ್ರೆ ಗಳಿಗೆ ಗ್ರಾಮ ಪಂಚಾಯತ ಮೂಲಕ ದಾನವಾಗಿ ನೀಡಿರುತ್ತಾರೆ ಹಾಗೂ ಅವಶ್ಯಕತೆ ಬಿದ್ದರೆ ಇನ್ನೂ ಹೆಚ್ಚಿನ ನೆರವು ನೀಡುವ ಆಶ್ವಾಸನೆ ನೀಡಿರುತ್ತಾರೆ ಅಲ್ಲದೆ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇತ್ತೀಚೆಗೆ ಡಾ. ಪದ್ಮನಾಭ ಕಾಮತರ ಕೊಡುಗೆಯನ್ನು ಟ್ವಿಟರ ಮುಖಾoತರ ಮುಕ್ತ ಕಂಠದಿಂದ ಶ್ಲಾಘನೆ ಮಾಡಿದ್ದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯ . ಖಾಸಗೀ ಅಸ್ಪತ್ರೆಗಳೆಂದರೆ ಹಣ ಮಾಡುವ ಸಂಸ್ಥೆಗಳು ಎನ್ನುವ ಭಾವನೆ ಜನರಲ್ಲಿರುವಾಗ ಕೆಎಂಸಿ ಮುಖ್ಯಸ್ಥರಾದ ಪದ್ಮನಾಭ ಕಾಮತ್ ರಂತ ಸಹೃದಯಿಗಳು ತಮ್ಮ ಸೇವೆಯನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸವ ಅವರ ಕಾಳಜಿ ಮತ್ತು ಉದ್ದೇಶ ಶ್ಲಾಘನೀಯ . ಅಷ್ಟೇ ಅಲ್ಲದೇ ಹಲವು ವರ್ಷಗಳ ನಮ್ಮ ಉತ್ತರ ಕನ್ನಡದ ಜನತೆಯ ಅವಶ್ಯಕತೆ ಬೇಡಿಕೆ ಹಾಗೂ ನಮ್ಮಜಿಲ್ಲೆಯ ಜನ ಅನುಭವಿಸುವ ತೊಂದರೆಯ ಬಗ್ಗೆ ಮನಗಂಡು ಸುಸಜ್ಜಿತ ಆಸ್ಪತ್ರೆಯ ನಿರ್ಮಾಣದ ಅವಶ್ಯಕತೆ ಇದೆ ಎಂದು ಮೊನ್ನೆಯಷ್ಟೇ ಟ್ವಿಟರ ನಲ್ಲಿ ತಮ್ಮದೇ ಆದ ರೀತಿಯಲ್ಲಿ ದ್ವನಿ ಎತ್ತಿದ್ದು ನಮ್ಮ ಜನತೆಯ ಆಶಾವಾದಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ ಹಾಗೆಯೇ ನಮ್ಮ ಕೋರಿಕೆಯನ್ನು ಸ್ವೀಕರಿಸಿ ಉತ್ತರಕನ್ನಡದ ಸುಸಜ್ಜಿತ ಆಸ್ಪತ್ರೆಯ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿಯೂ ಹಾಗೂ ಅವಕಾಶ ಸಿಕ್ಕರೆ ಉತ್ತರಕನ್ನಡಕ್ಕೆ ಹೆಚ್ಚಿನ ಅರೋಗ್ಯ ಸೇವೆ ಸಲ್ಲಿಸುವ ಕುರಿತು ಮಾತನಾಡಿ, ಹಾಗೆ ರಾಜಕಾರಣಿಗಳ ಚುನಾವಣೆಯ ಸಮಯದ ವಾಗ್ದಾನಕ್ಕೆ ಬೆಲೆಕೊಡದೇ ಹಾಗೂ ರಾಜಕಾರಣಿಗಳನ್ನು ನಂಬಿ ಕೈಕಟ್ಟಿ ಕುಳಿತುಕೊಳ್ಳುವುದಕ್ಕಿಂತ ನೀವೇ ಎಲ್ಲರೂ ಒಗ್ಗಟ್ಟಾಗಿ ಸಂಘಟಿತ ಹೋರಾಟ ಮಾಡ್ಬೇಕು, AIMS ನಂತ ಆಸ್ಪತ್ರೆ ನಿಜಕ್ಕೂ ಅವಶ್ಯಕತೆ ಇರುವುದು ಉತ್ತರಕನ್ನಡ ಜಿಲ್ಲೆಗೆ ಅದರ ಬದಲಿಗೆ ಹುಬ್ಬಳ್ಳಿ ಧಾರವಾಡದಲ್ಲಿ ನಿರ್ಮಿಸಲು ಪ್ರಯತ್ನಿಸುತ್ತಿರುವುದು , ಹಾಗೂ ಈ ಭಾಗದ ಜನಪ್ರತಿನಿಧಿಗಳಿಗೆ ಯೋಜನೆಯ ಮಹಿತಿಯೂ ಸಿಗದಿರುವುದು ಮತ್ತು ಇಂತಹ ಯಾವುದೇ ಯೋಜನೆಗಳನ್ನು ತರುವ ಕುರಿತು ಸಮಾಲೋಚನೆ ಮಾಡದಿರುವುದು ನಿಮ್ಮ ಜಿಲ್ಲೆಯ ಜನರ ದೌರ್ಭಾಗ್ಯ ಎಂದು ಹೇಳಿ ವಿಷಾದ ವ್ಯಕ್ತಪಡಿಸಿದರು . ಹಾಗೆ ನಿಮ್ಮ ಹೋರಾಟಕ್ಕೆ ತನ್ನಿಂದ ಆದ ಎಲ್ಲ ಸಹಕಾರ ನೀಡುವುದಾಗಿಯೂ ಭರವಸೆ ನೀಡಿದರು . ಹಾಗೇ ಸ್ನೇಹಿತ ಗುರುರಾಜ್ ನಾಯಕ ಅವರ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿ ತಮ್ಮ ಜಿಲ್ಲೆಯ ಬಗ್ಗೆ ಇರುವ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರು ಕೇವಲ ತಮ್ಮ ಸಂಸ್ಥೆ ನೀಡಿದ ಕಾರ್ಯಕ್ಕಷ್ಟೇ ಸೀಮಿತವಾಗದೇ ತಮ್ಮ ಜನರಿಗೆ ತನ್ನ ಜಿಲ್ಲೆಗೆ ಕೈಲಾದಷ್ಟು ಸಹಕಾರ ನೀಡಬೇಕೆನ್ನುವ ಮನಸ್ಥಿತಿ ಇಟ್ಟುಕೊಂಡು ಕಾರ್ಯಮಾಡುತ್ತಿದ್ದರೆ ಅವರ ಮುತುವರ್ಜಿಯಿಂದಲೇ ಉತ್ತರಕನ್ನಡಕ್ಕೆ ಅಷ್ಟೊಂದು ಸಲಕರಣೆ ನೀಡಲು ಸಾಧ್ಯವಾಯಿತು ಇಂತಹ ಕ್ರೀಯಾಶೀಲ ವ್ಯಕ್ತಿತ್ವದವರಿಗೆ ನಿಮ್ಮ ಪ್ರೋತ್ಸಾಹನೀಡಿ ಎಂದು ಹೇಳಿ ತಮ್ಮ ಬಿಡುವಿಲ್ಲದ ಕೆಲಸದವೇಳೆಯಲ್ಲಿಯೂ ಸಹ ನಮ್ಮನ್ನು ಆತ್ಮೀಯತೆಯಿಂದ ಬರಮಾಡಿಕೊಂಡು ಚರ್ಚಿಸಿ ಸಹಕಾರ ನೀಡುವ ಭರವಸೆ ನೀಡಿ ಬಿಳ್ಕೊಟ್ಟರು.
ಈ ಸಮಯದಲ್ಲಿ ನಮ್ಮ ಉತ್ತರ ಕನ್ನಡದ ವತಿಯಿಂದ ಅಭಯ ನಾಯಕ ಹಿಚಕಡ , ಸಚಿನ ನಾಯಕ ಅಗಸೂರ, ವಿಜಯ ಕುಮಾರ ಗಾಂವಕರ್ ಹಿರೇಗುತ್ತಿ, ಶೇಖರ ಗಾವಡಿ ಮತ್ತು ನಮ್ಮ ಜಿಲ್ಲೆಯ ಕೆಲವರು ಪಾಲ್ಗೊಂಡು ನಮ್ಮಜಿಲ್ಲೆಯ ಆಸ್ಪತ್ರೆಯಕುರಿತು ರಾಜ್ಯಮಟ್ಟದಲ್ಲಿ ಮನವಿ ಸಲ್ಲಿಸಿ ಸರ್ಕಾರದ ಗಮನಕ್ಕೆ ತರುವಲ್ಲಿ ಪ್ರೇಯತ್ನಿಸಬೇಕೆಂದು ಮನವಿ ಮಾಡಿಕೊಂಡರು.
Be the first to comment