ಪ್ರವಾಹ ಪೀಡಿತ ಗ್ರಾಮಗಳಿಗೆ ಬೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಳಿಸಿದ ಸಚಿವೆ ಶಶಿಕಲಾ ಜೊಲ್ಲೆ…!!!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ವಿಜಯುಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಜಿಲ್ಲೆಯ ನಿಡಗುಂದಿ ಹಾಗೂ ಮುದ್ದೇಬಿಹಾಳ ತಾಲೂಕುಗಳಲ್ಲಿ ಪ್ರವಾಹ ಹಾಗೂ ಕೋವಿಡ್ ನಿರ್ವಹಗಣೆ ಬಗ್ಗೆ ಶನಿವಾರ ಎರಡೂ ತಾಲೂಕುಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

“ಪ್ರವಾಹದಿಂದ ಮುದ್ದೇಬಿಹಾಳ ತಾಲೂಕಿನ ಸುಮಾರು 15 ಗ್ರಾಮಗಳು ಮುಳುಗಡೆಯಾಗಿ ಪ್ರವಾಹ ಬೀತಿ ಎದುರಿಸುತ್ತಿವೆ. ಅಲ್ಲದೇ ಬೆಳೆಹಾನಿಯಾಗಿ ರೈತರಿಗೆ ತೊಂದರೆಯಾಗಿದೆ. ಇದರೊಂದಿಗೆ ತಂಗಡಗಿ ಗ್ರಾಮದ ಹೊಳೆದಂಡೆಯ ಗ್ರಾಮಗಳ ಮನೆಗಳಿಗೆ ಮನೆಯೊಳಗೆ ನೀರು ಹೋಗಿ ಸಾಕಷ್ಟು ತೊಂದರೆಯಾಗಿದೆ. ಇದಕ್ಕಾಗಿ ತಡೆಗೋಡೆ ನೀರ್ಮಾಣಕ್ಕಾಗಿ ಸ್ಥಳೀಯ ಶಾಸಕರು ತಿಳಿಸಿದ್ದಾರೆ. ಇದರ ಬಗ್ಗೆ ಕೂಡಲೇ ರಾಜ್ಯ ಸರಕಾರದ ಗಮನಕ್ಕೆ ತಂದು ಹರಿಹಾರ ಒದಗಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ.”

-ಶಶಿಕಲಾ ಅ ಜೊಲ್ಲೆ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ.



ಆಲಮಟ್ಟಿ ಜಲಾಶಯದ ಹೊರ ಹರಿವಿನಿಂದ ನಿಡಗುಂದಿ ತಾಲುಕಿನ ಯಲಗೂರು ಹಾಗೂ ಮುದ್ದೇಬಿಹಾಲ ತಾಲೂಕಿನ ತಂಗಡಗಿ, ಕಮಲದಿನ್ನಿ, ಗಂಗೂರು ಹಾಗೂ ಕುಂಚಗನೂರು ಗ್ರಾಮಗಳಿಗೆ ಬೇಟಿ ನೀಡಿದ ಸಚಿವರು ಪ್ರವಾಹದಿಂದ ಮುಳುಗಡೆಯಾದ ಪ್ರದೇಶಗಳನ್ನು ಪರಿಶೀಲಿಸಿದರು.

ಸ್ಥಳಾಂತರಕ್ಕೆ ಆಗ್ರಹ:

ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿ, ಗಂಗೂರು ಹಾಗೂ ಕುಂಚಗನೂರು ಗ್ರಾಮಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಬೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ತಮ್ಮ ಅಳಲನ್ನು ಸಚಿವರ ಮುಂದೆ ತೋಡಿಕೊಂಡು ಪ್ರತಿ ವರ್ಷವೂ ನದಿ ನೀರಿನಿಂದ ಗ್ರಾಮಗಳು ಸಂಪೂರ್ಣವಾಗಿ ಮುಳುಗಡೆಯಾಗುತ್ತಿವೆ. ಇದಕ್ಕಾಗಿ ಸಂಪೂರ್ಣ ಗ್ರಾಮಗಳನ್ನು ಪುನರವಸತಿಗಳನ್ನಾಗಿ ಮಾಡಿ ನಮಗೆ ಮುಕ್ತಿಯನ್ನಾಗಿಸಬೇಕು ಎಂದು ಮನವಿ ಮಾಡಿದರು.



ಕ್ಷೇತ್ರದ ಮುಳುಗಡೆ ಪ್ರದೇಶಗಳಲಿಗೆ ಸಚಿವರನ್ನು ಕರೆಯ್ದೊದ ಶಾಸಕ ನಡಹಳ್ಳಿ:

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಹ ಬೀತಿಯ ಆಳಿಸಲು ತಾಲೂಕಿನಗೆ ಬೇಟಿ ನೀಡುವ ವಿಷಯ ತಿಳಿದ ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಸಚಿವರನ್ನು ಮುದ್ದೇಬಿಹಾಳ ತಾಲೂಕಿನಲ್ಲಿ ನದಿ ಪ್ರವಾಹದಿಂದ ಮುಳುಗಡೆಯಾದ ಗ್ರಾಮೀಣ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಮುಳುಗಡೆಯಾಗುವುದರಿಂದ ಅಲ್ಲಿನ ಜನರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು. ಅಲ್ಲದೇ ತಾಲೂಕಿನಲ್ಲಿ ಸಾಕಷ್ಟು ಪ್ರದೇಶಗಳಿಗೆ ನದಿ ನೀರು ಪ್ರವಾಹಕ್ಕೆ ಒಳಗಾಗುತ್ತಿದೆ. ಆದರೆ ಇದಕ್ಕೆ ರೈತರಿಗೆ ಮಾತ್ರ ಪರಿಹಾರ ದೊರಕಿಲ್ಲ. ಅಲ್ಲದೇ ಮುಳುಗಡೆ ಗ್ರಾಮಗಳನ್ನು ಪುನರವಸತಿ ಕೇಂದ್ರಗಳನ್ನಾಗಿಸಬೇಕು ಎಂದು ಹೇಳಿದರು.

 

Be the first to comment

Leave a Reply

Your email address will not be published.


*