ಕುಮಟಾದಲ್ಲಿ ಕಾರ್ಮಿಕ ಇಲಾಖೆಯ ಆಹಾರದ ಕಿಟ್ ನೀಡುವಲ್ಲಿ ಅಧಿಕಾರಿಗಳಿಂದ ಗೊಂದಲ , ಸ್ಥಳಕ್ಕೆ ಸೂರಜ್ ನಾಯ್ಕ್ ಸೋನಿ ಭೇಟಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಕುಮಟಾ

ಕಳೆದ ಕೆಲವು ದಿನಗಳಿಂದ ಕೆಲವು ಕಾರ್ಮಿಕರು ಫೋನ್ ಮಾಡಿ ಕಾರ್ಮಿಕ ಇಲಾಖೆಯ ಕಿಟ್ ವಿತರಣೆಯಲ್ಲಿ ಗೊಂದಲ ಉಂಟಾಗುತ್ತಿರುವುದನ್ನು ತಿಳಸಿದಾಗ, ಇಂದು *ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ ಹಾಗೂ ಜೆ.ಡಿ.ಎಸ್ ಮುಖಂಡ ಸೂರಜ್ ನಾಯ್ಕ್ ಸೋನಿ ಅವರು* ಕುಮಟಾ ಕಾರ್ಮಿಕ ಇಲಾಖೆಗೆ ಭೆಟಿ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ನಡೆಯುತ್ತಿರುವ ಗೊಂದಲಗಳ ಬಗ್ಗೆ ಚರ್ಚಿಸಿದರು, ಹಾಗೂ ಕಿಟ್ ಗಾಗಿ ಬೆಳಿಗ್ಗೆಯಿಂದಲೇ ಸರತಿಸಾಲಿನಲ್ಲಿ ನಿಂತಿರುವ ಜನರ ಬಳಿ ಸಮಾಲೋಚನೆ ನಡೆಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕಿಯರು ಮಾತನಾಡಿ, “ಸುಮಾರು 14000 ದಷ್ಟು ಕಾರ್ಮಿಕರಿರುವ ಕುಮಟಾ ತಾಲೂಕಿಗೆ ಕೇವಲ 8000 ದಷ್ಟು ಕಿಟ್ ಗಳು ಬಂದಿದ್ದು, ಕಿಟ್ ವಿತರಣಾ ಕಾರ್ಯಕ್ರಮ ಜುಲೈ 24ರಲ್ಲೇ ಆರಂಭಗೊಂಡಿದ್ದರೂ 15 ದಿನಗಳು ಕಳೆದರೂ 2000 ದಷ್ಟು ಕಿಟ್ಗಳೂವಿತರಣೆಯಾಗಿರುವುದಿಲ್ಲ.

ಇಷ್ಟೊಂದು ದಿನಗಳಲ್ಲಿ ಕಿಟ್ ಸಾಮಗ್ರಿಗಳು ಹಾಳಾದರೆ ಯಾರು ಹೊಣೆ?, ಅಲ್ಲದೇ ಕಿಟ್ ವಿತರಣೆಯಲ್ಲಿ ಸರಿಯಾದ ಕ್ರಮ ಅನುಸರಿಸದೇ, ಜನ ಸೂರ್ಯೋದಯಕ್ಕೂ ಮೊದಲೇ ಆಗಮಿಸಿ ಕೆಲವರಿಗೆ ಕಿಟ್ ದೊರಕದೇ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪುನಃ ಪುನಃ ಬರುವಂತಾಗಿದೆ. ಆದ್ದರಿಂದ ಯಾವುದೇ ಕಾರ್ಮಿಕರಿಗೆ ನಿರಾಶೆಯನ್ನುಂಟುಮಾಡದೆ, ಯಾವುದೇ ಗೊಂದಲವನ್ನು ಉಂಟುಮಾಡದೇ ಕಿಟ್ ಗಳನ್ನು ವಿತರಿಸಿ” ಎಂದರು

Be the first to comment

Leave a Reply

Your email address will not be published.


*