ಅರಣ್ಯ ಹಕ್ಕು ಮಂಜೂರಿ ಪ್ರಕ್ರಿಯೆ ಮತ್ತೆ ನೆನೆಗುದಿಗೆ; ಅರಣ್ಯವಾಸಿಗಳಿಗೆ ಮರಿಚಿಕೆಯಾದ ಅರಣ್ಯ ಭೂಮಿ ಹಕ್ಕು , ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ 

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಸಿದ್ದಾಪುರ: ತಾಲೂಕ ಮತ್ತು ಜಿಲ್ಲಾಪಂಚಾಯತ ಅಧಿಕಾರ ಅವಧಿ ಈಗಾಗಲೇ ಪೂರ್ಣಗೊಂಡಿರುವುದರಿಂದ ಸದ್ರಿ ಸಂಸ್ಥೆಯಿಂದ ಪ್ರಾತಿನಿತ್ಯ ಹೊಂದಿರುವ ಜನಪ್ರತಿನಿಧಿತ್ವ ಸದಸ್ಯತ್ವ ಅಮಾನ್ಯವಾಗಿರುವುದರಿಂದ ಕಾನೂನು ಪ್ರಕಾರ ಪೂರ್ಣ ಪ್ರಮಾಣದ ಉಪ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿಯ ಮಾನ್ಯತೆ ಇಲ್ಲದಿರುವುದರಿಂದ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿನ ಅರಣ್ಯ ಭೂಮಿ ಮಂಜೂರಿ ಪ್ರಕ್ರಿಯೆ ಪುನಃ ಮತ್ತೆ ನೆನಗುದಿಗೆ ಕಾರಣವಾಗಿ ಮಂಜೂರಿ ಹಕ್ಕು ಪತ್ರವು ಅರಣ್ಯವಾಸಿಗಳಿಗೆ ಮರಿಚಿಕೆಯಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.ಸಾಮಾಜಿಕ ನ್ಯಾಯ ಮತ್ತು ಆಹಾರ ಉತ್ಪನ್ನ ಭದ್ರತೆ ದೃಷ್ಟಿಯಿಂದ ಅರಣ್ಯವಾಸಿಗಳಿಗೆ ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅವಲಂಭಿತರಾಗಿರುವ ಅರಣ್ಯವಾಸಿಗಳಿಗೆ ವಂಶಪಾರಂಪರವಾಗಿ ಸಾಗುವಳಿ ಹಕ್ಕು ನೀಡುವ ಉದ್ದೇಶದಿಂದ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಮಾನ್ಯತೆ ಕಾಯಿದೆ 2006 ರಲ್ಲಿ ಹಾಗೂ ನಿಯಮಗಳು 2008 ರಲ್ಲಿ ಜಾರಿಗೆ ತರಲಾಗಿತ್ತು.

ಕಾನೂನು ಅನುಷ್ಠಾನದಲ್ಲಿ ಕಾಲಕಾಲಕ್ಕೆ ಉಂಟಾಗುತ್ತಿರುವ ಮಂಜೂರಿ ಪ್ರಕ್ರಿಯೆಗೆ ವೇಗ ಸಿಗದೇ ಮಂದಗತಿಯಲ್ಲಿ ಸಾಗಿದ್ದು ಜಿಲ್ಲೆಯಲ್ಲಿ 83,887 ಅರ್ಜಿಗಳಲ್ಲಿ ಇಂದಿನವರೆಗೆ ಹಕ್ಕು ಪತ್ರ ಕೇವಲ 2,852 ನೀಡಿದ್ದು ಅವುಗಳಲ್ಲಿ 1,331 ಪರಿಶಿಷ್ಟ ಪಂಗಡ, 394 ಪಾರಂಪರಿಕ ಹಾಗೂ 1127 ಸಮೂಹ ಉದ್ದೇಶಕ್ಕೆ ನೀಡಿದ ಹಕ್ಕು ಪತ್ರಗಳಾಗಿದೆ ಹಕ್ಕು ಪತ್ರ ಕೇವಲ ಶೇ 3. 33 ರಷ್ಟು ಅರ್ಜಿಗಳಿಗೆ ಮಾತ್ರ ಇಂದಿನವರೆಗೆ ಮಾನ್ಯತೆ ದೊರಕಿದೆ.ಇತ್ತೀಚಿಗೆ ಕೇಂದ್ರ ಸರಕಾರವು ಅರಣ್ಯ ಹಕ್ಕು ಕಾಯಿದೆ ಅನುಷ್ಠಾನವನ್ನು ಪುನರ್ ಪರಿಶೀಲಿಸುವ ಪ್ರಮಾಣ ಪತ್ರ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಹೊಸದಾಗಿ ಎಲ್ಲ ಅರ್ಜಿಗಳು ಪುನರ್ ಪರಿಶೀಲನೆ ಮಾಡಬೇಕಾದ ಹಿನ್ನೆಲೆಯಲ್ಲಿ ಉಪ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿಗಳ ಕೋರಂ ಕೊರತೆಯಿಂದ ಮಂಜೂರಿ ಪ್ರಕ್ರಿಯೆ ನೆನೆಗುಂದಿಗೆ ಬಿದ್ದಿರುವುದು ವಿಷಾದಕರ.

ಸರ್ವೋಚ್ಛ ನ್ಯಾಯಾಲಯಕ್ಕೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಎಲ್ಲಾ ಅರ್ಜಿಗಳನ್ನು 18 ತಿಂಗಳಲ್ಲಿ ಮಂಜೂರಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದೆಂದು ಪ್ರಮಾಣ ಪತ್ರ ಜೂನ್, 2019 ಸಲ್ಲಿಸಿದ್ದು ಸದ್ರಿ ಅವಧಿಯು ಸಹಿತ ಜನವರಿ, 2021 ಮುಗಿದಿರುವುದು ಉಲ್ಲೇಖನಾರ್ಹ, ಜಿಲ್ಲೆಯಲ್ಲಿ 83,887 ಅರ್ಜಿಗಳು ಬಾಕಿ ಇದ್ದು, ಅವುಗಳಲ್ಲಿ 16579 ಹೊಸದಾಗಿ ಹಾಗೂ 67,308 ಅರ್ಜಿಗಳು ತೀರಸ್ಕರಿಸಲ್ಪಟ್ಟಿ ಅರ್ಜಿಗಳನ್ನು ಪುನರ್ ವಿಚಾರಣೆ ಆಗಬೇಕಾಗಿದೆ. ಅರಣ್ಯ ಭೂಮಿ ಹಕ್ಕಿಗಾಗಿ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಹೋರಾಟಗಾರ ರವೀಂದ್ರ ನಾಯ್ಕ ನೇತ್ರತ್ವದಲ್ಲಿನ 30 ವರ್ಷ ನಿರಂತರ ಸಂಘಟನೆಯು ಅಂದೋಲನ ರೂಪ ಹೊಂದಿದರೆ ಅರಣ್ಯ ಭೂಮಿ ಹಕ್ಕು ಇಂದಿಗೂ ಮರಿಚಿಕೆಯಾಗಿದೆ.

ಕಾಲಮಾನದಂಡ ನಿಗದಿಗೆ ಒತ್ತಾಯ: ಅರಣ್ಯ ಹಕ್ಕು ಸಂಬಂಧಿಸಿದೆ. ಕಾನೂನು ನಿಯಮ ಜಾರಿಗೆ ಬಂದು 14 ವರ್ಷಗಳಾದರೂ ಬಿದ್ದಿರುವುದರಿಂದ ಸರಕಾರವು ನಿರ್ದಿಷ್ಟಪಡಿಸಿದ ಕಾಲಮಾನದಂಡದಡಿಯಲ್ಲಿ ಮಂಜೂರಿ ಪ್ರಕ್ರಿಯೆ ಜರುಗಿಸಬೇಕಾಗಿದ್ದು, ಸರಕಾರ ಈ ದಿಶೆಗೆ ಇಚ್ಚಾಶಕ್ತಿ ಪಕಟಿಸಬೇಕೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

Be the first to comment

Leave a Reply

Your email address will not be published.


*