ಪಟ್ಟಣದ ರಸ್ತೆ ಬದಿಯ ಅಕ್ರಮ ಫ್ಲೇಕ್ಸ್ ಬ್ಯಾನರ್ ಮೇಲೆ ಕ್ರಮಕ್ಕೆ: ಕರವೇ ಅಧ್ಯಕ್ಷ ಆಂಜಿನಯ್ಯ ಬಂಡಾರಿ ಆಗ್ರಹ

ವರದಿ:ಅಮರೇಶ ಜಿ ಲಿಂಗಸುಗೂರ


     ಜೀಲ್ಲಾ ಸುದ್ದಿಗಳು


ಲಿಂಗಸುಗೂರ(ಅ:19)  ಲಿಂಗಸುಗೂರು ಪಟ್ಟಣದಲ್ಲಿ ಫ್ಲೇಕ್ಸ್ ಮತ್ತು ಬ್ಯಾನರ್ ಗಳ ಆವಳಿಯಿಂದಾಗಿ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಜನರ ಸಂಚಾರ ದುಸ್ತರವಾಗಿದೆ.ರಸ್ತೆಯ ಬದಿಯಲ್ಲಿ ಸಿಕ್ಕ ಸಿಕ್ಕ ಜಾಗದಲ್ಲಿ ನಿಯಮವಳಿಗಳನ್ನ ಮೀರಿ ಬ್ಯಾನರ್ ಗಳನ್ನು ಹಾಕುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.ಫ್ಲೇಕ್ಸ್ ಮತ್ತು ಬ್ಯಾನರ್ ಗಳ ಅಳವಡಿಕೆಗೆ ಪುರಸಭೆ ಅನುಮತಿ ಪಡೆಯದೆ ಬ್ಯಾನರ್ ಗಳ ಹಾಕುವುದರಿಂದ ಪುರಸಭೆಯ ಆದಾಯಕ್ಕೆ ಕೊಕ್ಕೆ ಬಿಂದತ್ತಾಗಿದೆ

ಕೂಡಲೇ ಫ್ಲೇಕ್ಸ್ ಮತ್ತು ಬ್ಯಾನರ್ ಗಳ ಅಳವಡಿಕೆಗೆ ನಿಯಾಮವಳಿಗಳನ್ನ ರೂಪಿಸಿ ಬ್ಯಾನರ್ ಅಳವಡಿಕೆಗೆ ಬೆಲೆ ನಿಗದಿ ಮಾಡಬೇಕು .ಮತ್ತು ಪಟ್ಟಣ ದಿನೆ ದಿನೆ ಬೆಳೆಯುತ್ತಿದೆ ಇದರಿಂದಾಗಿ ಸಂಚಾರ ದಟ್ಟನೆ ಹೆಚ್ವಾಗುತ್ತಿದೆ ರಸ್ತೆಯನ್ನು ಆಕ್ರಮಿಸಿಕೊಂಡ ಪರಿಣಾಮ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ .ತುಂಬಾ ತೊಂದರೆಯಾಗಿ ಹಲವಾರು ಅಪಘಾತಗಳು ಸಂಭವಿಸಿವೆ ಆದ್ದರಿಂದ ಕೂಡಲೇ ರಸ್ತೆಯನ್ನು ಆಕ್ರಮಿಸಿಕೊಂಡಿರುವ ಗೂಡಾಂಗಡಿಗಳು ಹಾಗೂ ಕಟ್ಟಡಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ್ಣ) ವತಿಯಿಂದ ಮಾನ್ಯ ಮುಖ್ಯಾಧಿಕಾರಿಗಳು ಪುರಸಭೆ ಲಿಂಗಸುಗೂರು ಇವರಿಗೆ ಮನವಿ ಮಾಡಲಾಯಿತು.

ತಾಲ್ಲೂಕು ಕರವೇ ಅಧ್ಯಕ್ಷ ಆಂಜನೇಯ ಭಂಡಾರಿ ನೀತಿನ ಕಾಚಾಪೂರ,ಯಲ್ಲಾಲಿಂಗ ಚಿನ್ನನಾಯಕ, ಭೀಮೇಶ ನಾಯಕ, ಸಾರ ಜೋಗಿರ ಯಮನೂರ ಭೂಮಿ,ಕುಮಾರೆಪ್ಪ ನಾಯಕ, ಅಮರೇಶ ಡಿ ರಾಠೋಡ ಮುದಿಯಪ್ಪ ಕಾಳಾಪೂರ,ಯಲ್ಲಪ ಮಡ್ಡಿ ಇತರರು ಇದ್ದರು

 

Be the first to comment

Leave a Reply

Your email address will not be published.


*