ಸಂಗೋಳ್ಳಿ ರಾಯಣ್ಣ ಭಾವಚಿತ್ರಕ್ಕೆ  ಅಫಜಲಪುರದಲ್ಲಿ   ಅವಮಾನ ಖಂಡಿಸಿ ಪ್ರತಿಭಟನೆ


     ಜೀಲ್ಲಾ ಸುದ್ದಿಗಳು


ಅಫಜಲಪುರ: (ಅ:18) ಅಫಜಲಪುರ ಪಟ್ಟಣದಲ್ಲಿ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಚಪ್ಪಲಿ ಹಾರಿನಿಂದ ಅವಮಾನ ಮಾಡಿರುವುದು ದುರದೃಷ್ಟಕರ ಸಂಗತಿ ಅವಮಾನ ಮಾಡಿದ ಕಿಡಿಗೇಡಿಗಳನ್ನು ಶಿಘ್ರದಲ್ಲಿ ಬಂಧಿಸಿ ಕಠೀಣ ಕ್ರಮ ಕೈಗೊಳ್ಳಬೇಕೆಂದು ಕುರುಬ ಸಮಾಜದ ಮುಖಂಡ ಹಾಗೂ ಸಮಾಜ ಸೇವಕರಾದ ಜೆ.ಎಂ.ಕೊರಬು ಅವರು ಖಂಡಿಸಿ ಸರಕಾರಕ್ಕೆ ಒತ್ತಾಯಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ ಕಚೇರಿವರೆಗೆ ಕುರುಬ ಸಮಾಜದವರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.


ಕಿಡಿಗೇಡಿಗಳನ್ನು ಬಂದಿಸುವಂತೆ ಪ್ರತಿಭಟನೆ ಮಾಡುತ್ತಿರು ತಾಲ್ಲೂಕ ಕುರುಬ ಸಂಘದ ಸದಸ್ಯರು


ನಂತರ ಮಾತನಾಡಿದ ಜೆ.ಎಂ ಕೊರಬು ಇಂತಹ ಕೃತ್ಯಗಳು ನಡೆಯುವದರಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ.ಇದು ರಾಯಣ್ಣನಿಗೆ ಮಾಡಿದ ಅವಮಾನವಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ.ಇಂತಹ ಹೀನ ಕೃತ್ಯ ಗಳು ಯಾವತ್ತೂ ನಡೆಯಬಾರದು .ಅವಮಾನ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.ನಂತರ ತಹಶೀಲ್ದಾರ್ ಮಧುರಾಜ್ ಕೂಡಲಗಿ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಯುವ ಮುಖಂಡ ಭೀರಣ್ಣ ಕಲ್ಲೂರ, ರಮೇಶ ನೀಲಗಾರ,ಕೆ.ಜಿ ಪೂಜಾರಿ,ವಿಠ್ಠಲ್ ಜಗಲಗೊಂಡ, ಕಲ್ಯಣಿ ರುದೂಡಗಿ, ಸಾವಿರಪ್ಪ ಪೂಜಾರಿ,ಕನಕ ಟೇಲರ್,ಮಾಳಪ್ಪ ಪೂಜಾರಿ,ರಾಜು ಆರೇಕರ್,ರವಿ ಗೌರ್,ಕರೇಪ್ಪ ರೇವೂರ,ಭಿರಣ್ಣ ಅತನೂರ, ಸೇರಿದಂತೆ ಇನ್ನಿತರು ಇದ್ದರು.

Be the first to comment

Leave a Reply

Your email address will not be published.


*