ಜಮಾ ಆಗದ ಬೆಳೆವಿಮೆ:ಸಾಮೂಹಿಕ ಆತ್ಮಹತ್ಯೆಗೆ ರೈತರ ನಿರ್ಧಾರ

Reported by: ಚೇತನ ಕೆಂದೂಳಿ

ರಾಜ್ಯ ಸುದ್ದಿ:

ಮುದ್ದೇಬಿಹಾಳ:

ತಾಲೂಕಿನ ಸರಕೋಡ ಗ್ರಾಮದ ಸುತ್ತಮುತ್ತಲಿನ ಗ್ರಾಮದ ರೈತರ ಬ್ಯಾಂಕ್ ಖಾತೆಗೆ  ಸನ್ 2017-1೮ ಹಾಗೂ 2018-19ನೇ ಸಾಲಿನ ಬೆಳೆ ಜಮಾ ಆಗದ ಕಾರಣ ರೈತರು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಲಾಗುವುದು ಎಂದು ತಹಸೀಲ್ದಾರ ಅವರಿಗೆ ಎಚ್ಚರಿಕೆಯ ಮನವಿಯನ್ನು ಮಂಗಳವಾರ ಸಲ್ಲಿಸಿದ್ದಾರೆ.

ಮೊದಲೇ ಬರಗಾಲದಲ್ಲಿ ತತ್ತರಿಸಿ ಕಟ್ಟಲಾಗಿರುವ ರೈತರು ಕಷ್ಟಕಾಲದಲ್ಲಿ ಸಹಾಯವಾಗುತ್ತದೆ ಎಂಬ ಭರವಸೆಯಲ್ಲಿ ಸಾಲ ಮಾಡಿಕೊಂಡು ಎರಡು ವರ್ಷದ ಮಾಡಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಕಳೆದ ಎರಡೂ ವರ್ಷದ ಬೆಳೆವಿಮೆ ರೈತರ ಖಾತಗೆ ಜಮವಾಗಿಲ್ಲಾ. ಇದರಿಂದ ಕಂಗಾಲಾದ ರೈತರು ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದಾರೆ.


ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಸುತ್ತಮುತ್ತಲಿನ ರೈತರು ಮಂಗಳವಾರ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ಬೆಳೆವಿಮಾ ಜಮಾ ಮಾಡಲು ಗಡವು:

ಸನ್ 2017-18 ಹಾಗೂ 2018-19ರ ಬೆಳೆವಿಮಾ ಆಗಸ್ಟ್ 29ರ ಒಳಗೆ ಸಂಬಂಧಿಸಿದ ಅಧಿಕಾರಿಗಳು ರೈತರ ಖಾತೆಗೆ ಜಮಾ ಮಾಡಬೇಕು ಇಲ್ಲವಾದಲ್ಲಿ ಅಕ್ಟೋಬರ 3 ರಂದು ತಹಸೀಲ್ದಾರ ಕಛೇರಿಯ ಎದುರಿಗೆ ಆಮರಣ ಉಪವಾಸ ಸತ್ಯಾಗ್ರಹ ನಡೆಸಿ ಎಲ್ಲ ರೈತರು ಸಾಮುಹಿಕ ಆತ್ಮಹತ್ಯೆಗೆ ಮುಂದಾಗಲಾಗುವುದು. ಇದಕ್ಕೆ ತಾಲೂಕಿನ ತಹಸೀಲ್ದಾರ ಹಾಗೂ ಸಂಬಂಧಿಸಿದ ವಿಮಾ ಕಂಪನಿಗಳೆ ನೇರ ಹೊಣೆಗಾರರಾಗುತ್ತಾರೆ ಎಂದು ಮಲವಿಯಲ್ಲಿ ತಿಳಿಸಿದ್ದಾರೆ.



ಈ ಸಂದರ್ಭದಲ್ಲಿ ರೈತರಾದ ಶ್ರೀಶೈಲ ಮೇಟಿ, ಬಾಬು ಸೂಳಿಭಾವಿ, ಮಲ್ಲಪ್ಪ ಕಲ್ಲುರ, ಕರಬಸಯ್ಯ ಹಿರೇಮಠ, ಎಚ್.ಎಸ್.ಚೌಧರಿ, ಎನ್.ಸಿ.ನಾಡಗೌಡ, ಈರಪ್ಪ ವಡವಡಗಿ, ನಾಗರಾಜ ತಂಗಡಗಿ, ಜೆ.ಎಸ್.ಮೇಟಿ, ಎಂ.ಐ.ಬಾಗೇವಾಡಿ, ಬ.ಪ.ಯಾಳವಾರ, ಎಂ.ಎಂ.ಬಿಸನಾಳ, ಎನ್.ಎಂ.ಬಡಿಗೇರ, ಸೇರಿದಂತೆ 50ಕ್ಕೂ ಹೆಚ್ಚು ರಯತರಿದ್ದರು.


 

Be the first to comment

Leave a Reply

Your email address will not be published.


*