ತಿಮ್ಮರಾಯಸ್ವಾಮಿ ದೇಗುಲಕ್ಕೆ ಸೇರಿದ ಜಾಗ ಒತ್ತುವರಿ, ಭೂ ಕಬಳಿಕೆದಾರರ ವಿರುದ್ಧ ಜಯ ಕರ್ನಾಟಕ ಕಿಡಿ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

_ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ಅವರಿಗೆ ಮನವಿ_
_ಒತ್ತುವರಿ ಜಾಗ ತೆರವು ಕಾರ್ಯಕ್ಕೆ ಆಗ್ರಹ_ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆದಾಗಿನಿಂದಲೂ ಭೂಮಿ ಬೆಲೆ ಗಗನಕ್ಕೇರಿದ್ದು, ಒತ್ತುವರಿ ಪ್ರಕರಣಗಳು ಸಹ ಹೆಚ್ಚಾಗಿ ನಡೆಯುತ್ತಲೆ ಇವೆ.

ದೇವನಹಳ್ಳಿ ತಾಲೂಕಿನ ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇತಿಹಾಸ ಪ್ರಸಿದ್ಧ ತಿಮ್ಮರಾಯಸಮಿ ದೇವಾಲಯದ ಜಾಗದಲ್ಲಿ, ಕಸಬಾ ಹೋಬಳಿಗೆ ಸೇರಿದ ದಾಸರಳ್ಳಿ ಗ್ರಾಮದ ಸರ್ವೆ ನಂಬರ್ 36ರ ವ್ಯಾಪ್ತಿಯ ಮಾರತಮ್ಮನಕುಂಟೆ ಸಮೀಪದ ಯಂಬ್ರಳ್ಳಿ-ಕೊಡಗುರ್ಕಿ ಬಳಿಯ ಜಾಗದಲ್ಲಿ ಕೆಲ ಬಲಾಢ್ಯರು ಭೂಕಬಳಿಕೆ ಮಾಡಿಕೊಂಡು ಕಾಂಪೌಂಡ್ ಗೋಡೆ ಕಟ್ಟುತ್ತಿರುವುದು ಸುತ್ತಮುತ್ತಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

CHETAN KENDULI

ಜಯ ಕರ್ನಾಟಕ ಸಂಘಟನೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಹೊಸಹಳ್ಳಿ ರವಿ ನೇತೃತ್ವದಲ್ಲಿ ಜಾಗದ ಒತ್ತುವರಿಗೆ ಸಂಬಂಧಿಸಿದಂತೆ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಕೂಡಲೇ ಭೂಕಬಳಿಕೆದಾರರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಇನ್ನು ಈ ಸಂದರ್ಭದಲ್ಲಿ ಯಂಬ್ರಳ್ಳಿ ಎಂಪಿಸಿಎಸ್ ಅಧ್ಯಕ್ಷ ಮಾರೇಗೌಡ, ಜಯಕರ್ನಾಟಕ ತಾಲೂಕು ಅಧ್ಯಕ್ಷ ಚೇತನ್ ಗೌಡ, ಪದಾಧಿಕಾರಿಗಳು ಮುಖಂಡರು ಇದ್ದರು.

Be the first to comment

Leave a Reply

Your email address will not be published.


*