ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಪಟ್ಟಣದ ಹಸನಾಗುವುದರೊಂದಿಗೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವೆಂದು ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆಯವರು ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾಮಂದಿರ ಪ್ರೌಢ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ವೇಳೆ ಮುಖ್ಯೋಪಾಧ್ಯಾಯರಾದ ರಾಮಚಂದ್ರ ಹೆಗೆಡೆ ಮಾತನಾಡುತ್ತಾ ಪೂರ್ವರ ತ್ಯಾಗದಿಂದ ಆನಂದವಾಗಿ ಬದುಕುತ್ತಿದ್ದೇವೆ. ಸಮಾಜದಲ್ಲಿ ಪರಿವರ್ತನೆಗೆ ಅಸಾಧ್ಯವಾದುದು ಯಾವುದೂ ಇರುವುದಿಲ್ಲ. ದುಷ್ಟ ವರ್ತನೆಯಲ್ಲಿ ತೊಡಗಿರುವ ರತ್ನಾಕರನಾದ ವ್ಯಕ್ತಿ ನಾರದ ಮಹರ್ಷಿಗಳ ಉಪದೇಶಕ್ಕೆ ಮಣಿದು ಮಹರ್ಷಿ ವಾಲ್ಮೀಕಿಯಾಗಿರುವುದಲ್ಲದೆ ಬ್ರಹತ್ ಆದರ್ಶ ಕಾವ್ಯಗಳನ್ನು ಕೊಡುಗೆ ನೀಡಿದ್ದಾರೆ. ಆ ಎಲ್ಲಾ ಆದರ್ಶಗಳನ್ನ ರೂಢಿಸಿಕೊಂಡಾಗಲೇ ದೇಶ ಸುಭೀಕ್ಷ ಕಾಣಲಿದೆ. ಆಕೆಲಸ ನಮ್ಮೆಲ್ಲರಿಂದ ಆಗಬೇಕಾಗಿದೆ ಅರಿವೆ ಗುರು, ಮನ: ಪರಿವರ್ತನೆಗೆ .ಅಸಾಧ್ಯವೆನ್ನುವುದು ಇಲ್ಲ. ಇದರಮುಂದೆ ಜಾತಿ, ಧರ್ಮ, ವಯಸ್ಸು ಯಾವುದೂ ಗಮನಕ್ಕೆ ಬರುವುದಿಲ್ಲ. ಈ ಎಲ್ಲಾ ವಿಚಾರ ಧಾರೆಗಳನ್ನ ಮಹಾಕಾವ್ಯಗಳ ರೂಪದಲ್ಲಿ ನೀಡಿರುವ ಮಹರ್ಷಿ ವಾಲ್ಮೀಕಿಗಳನ್ನ ಸ್ಮರಿಸಿಕೊಳ್ಳುವ ಕಾರ್ಯ ನಿತ್ಯವೂ ಆಗಬೇಕಾಗಿದೆ ಅಲ್ಲದೆ ಆದರ್ಶಗಳು ನಮ್ಮಲ್ಲಿ ರಕ್ತಗತವಾಗ ಬೇಕಾಗಿದೆಯೆಂದು ಮಾತನಾಡುತ್ತಿದ್ದರು.
ಶಿಕ್ಷಕ ಬಿ.ಆರ್.ಬೆಳ್ಳಿಕಟ್ಟಿ ಯವರು ಉತ್ತಮ ವಿಷಯಗಳನ್ನು ತೆಗೆದುಕೊಳ್ಳುವಾಗ ಅದರಹಿಂದೆ ಇರುವವರ ತಿಳಿದುಕೊಂಡು ಗೌರವಿಸುವುದು ಭಾರತೀಯ ಪರಂಪರೆಯ ಉತ್ತಮ ಅಂಶವಾಗಿದೆ. ಆಹಿನ್ನೆಲೆಯಲ್ಲಿ ವಾಲ್ಮೀಕಿ ಮಹರ್ಷಿಗಳ ಜಯಂತಿಯನ್ನು ಆಚರಿಸಸುತ್ತಿದ್ದೆವೆಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿನಿ ಭಾಗ್ಯಶ್ರೀ ಬಿರಾದಾರ ವಾಲ್ಮೀಕಿ ಮಹರ್ಷಿಗಳ ಜೀವನ ವೃತ್ತಾಂತದ ಕುರಿತಾಗಿ ಮಾತನಾಡಿದಳು. ಅಧಿತಿ ಪವಾರ ಸ್ವಾಗತಿಸಿದರು. ಗಂಗಾ ಬಸರಕೋಡ ವಂದಿಸಿದರು.
Be the first to comment