ಭಟ್ಕಳದಲ್ಲಿ ಪೌರ ಕಾರ್ಮಿಕರಿಗೆ ಆರೋಗ್ಯ ಶಿಬಿರ

ವರದಿ: ಕುಮಾರ್ ನಾಯ್ಕ

ಜಿಲ್ಲಾ ಸುದ್ದಿಗಳು 

ಭಟ್ಕಳ:

ಜೆ.ಸಿ.ಐ ಭಟ್ಕಳ ಸಿಟಿ ಹಾಗೂ ಪುರಸಭೆ ಭಟ್ಕಳ ಇದರ ಸಹಯೋಗದೊಂದಿಗೆ ಇಲ್ಲಿನ ಪುರಸಭೆ ಸಭಾಭವನದಲ್ಲಿ ಪೌರ ಕಾರ್ಮಿಕರ ಆರೋಗ್ಯ ಶಿಬಿರವನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಭಾಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷರಾದ ಶ್ರೀ ಪರ್ವೇಜ್ ಕಾಶಿಮ್ ಜಿ ಅವರು ಗಿಡಗಳಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ಆನಂತರ ಮಾತನಾಡಿದ ಅವರು ಪೌರಕಾರ್ಮಿಕರು ಪುರಸಭೆಯ ಬೆನ್ನೆಲುಬು ಎನ್ನುವುದರ ಮೂಲಕ ಪೌರಕಾರ್ಮಿಕರ ಕೆಲಸಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

CHETAN KENDULI

ಸಭಾಧ್ಯಕ್ಷರಾದ ಜಿಸಿಐ ಭಟ್ಕಳ ಸಿಟಿಯ ನಿಕಟಪೂರ್ವ ಅಧ್ಯಕ್ಷರಾದ ಜೆಸಿ ಸುರೇಶ್ ಪೂಜಾರಿ ಅವರು ಮಾತನಾಡಿ ಜೆಸಿಐನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀಮತಿ ಮಮತಾ ದೇವಿ, ಅಸಿಸ್ಟೆಂಟ್ ಕಮಿಷನರ್ ಭಟ್ಕಳ ಅವರು ಮಾತನಾಡಿ ಪೌರಕಾರ್ಮಿಕರು ಹೇಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ವೇಣುಗೋಪಾಲ ಶಾಸ್ತ್ರಿ, ಸಮುದಾಯ ವ್ಯವಹಾರಗಳ ಅಧಿಕಾರಿ, ಅವರು ಮಾತನಾಡಿ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಪುರಸಭೆಯ ಮುಖ್ಯ ಅಧಿಕಾರಿಯಾದ ಶ್ರೀಮತಿ ರಾಧಿಕಾ ಎನ್ ಎಸ್, ಜೆಸಿಐ ವಲಯ 15ರ ಜೋನ್ ಪ್ರೋಗ್ರಾಮ್ ಕಮಿಟಿ ಚೇರ್ಮೆನ್ ಸೆನೆಟರ್ ಅಬ್ದುಲ್ ಜಬ್ಬರ್ ಸಾಹೇಬ್, ಜೆಸಿಐ ಭಟ್ಕಳ ಸಿಟಿಯ ನಿಕಟಪೂರ್ವ ಕಾರ್ಯದರ್ಶಿ ಜೆಸಿ ಪಾಂಡುರಂಗ ನಾಯ್ಕಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣಾ ವೈದ್ಯರಾದ ಶ್ರೀ ಅಬ್ದುಲ್ ಖಾದಿರ್ ,ಹೆಲ್ತ್ ಕೇರ್ ಹಾಸ್ಪಿಟಲ್ ಹೆಡ್ ನರ್ಸ್ ಆಯಿಷಾ ನಾಸೀರ್,ಅಕ್ಷತಾ,

 ಕಾರ್ಯಕ್ರಮದ ಮೇಲ್ವಿಚಾರಕರಾದ ಶ್ರೀಮತಿ ಸೋಜಿಯಾ ಸೋಮನ್ ಆರೋಗ್ಯ ಅಧಿಕಾರಿ ಭಟ್ಕಳ, ಪುರಸಭಾ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಹಾಗೂ ಜೆಸಿಐ ಭಟ್ಕಳ್ ಸಿಟಿಯ ಸದಸ್ಯರು ಉಪಸ್ಥಿತರಿದ್ದರು. ಶಿಬಿರದಲ್ಲಿ 50ಕ್ಕೂ ಹೆಚ್ಚಿನ ಪೌರಕಾರ್ಮಿಕರ ಆರೋಗ್ಯ ಹಾಗೂ ತಪಾಸಣೆ ಹಾಗೂ ನೇತ್ರ ತಪಾಸಣೆಯನ್ನು ಸನಾ ಆಪ್ಟಿಕ್ಸ್ ಭಟ್ಕಳ ಅವರ ಸಹಯೋಗದೊಂದಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜೆಸಿ ಭಟ್ಕಳ ಸಿಟಿಯ ನಿಕಟಪೂರ್ವ ಅಧ್ಯಕ್ಷರಾದ ಜೆಸಿ ಸುರೇಶ್ ಪೂಜಾರಿ ಸರ್ವರನ್ನು ಸ್ವಾಗತಿಸಿ ಗೌರವಿಸಿದರು. ನಿಕಟಪೂರ್ವ ಕಾರ್ಯದರ್ಶಿಯಾದ ಜೆಸಿ ಪಾಂಡುರಂಗ ನಾಯ್ಕ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Be the first to comment

Leave a Reply

Your email address will not be published.


*