ನೆರೆ ಹಾನಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಗರಿಷ್ಟ ಪರಿಹಾರ ನೀಡಿ; ಸಿಎಂಗೆ ಅಶೀಸರ ಮನವಿ

ವರದಿ: ಸ್ಫೂರ್ತಿ ಶೇಟ್

ಜಿಲ್ಲಾ ಸುದ್ದಿಗಳು

ಶಿರಸಿ:

CHETAN KENDULI

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಅಂಕೋಲಾ ಭಾಗಗಳಲ್ಲಿ ಇತ್ತೀಚೆಗೆ ಘಟಿಸಿದ ವ್ಯಾಪಕ ಭೂಕುಸಿತ ಹಾಗೂ ಅಪಾರ ಹಾನಿಯು ಈ ಪ್ರದೇಶಕ್ಕಾದ ಭಾರಿ ಅಘಾತವಾಗಿದೆ. ಆದ್ದರಿಂದ, ಸಂಕಷ್ಟಕ್ಕೆ ಒಳಗಾದ ಎಲ್ಲ ಕುಟುಂಬಗಳಿಗೆ ಗರಿಷ್ಟ ಪರಿಹಾರವನ್ನು ಶೀಘ್ರದಲ್ಲಿ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರಿಗೆ ಮನವಿ ನೀಡಿ ವಿನಂತಿಸಿದರು. 

ಸಿಎಂ ಮುಖ್ಯಮಂತ್ರಿ ನೆರೆಹಾವಳಿ ಪ್ರದೇಶಗಳನ್ನು ಪರಿಶೀಲನೆ ಮಾಡಲು ಜಿಲ್ಲೆಗೆ ಆಗಮಿಸಿ ಅಂಕೋಲಾದಲ್ಲಿ ಉನ್ನತ ಸಮಾಲೋಚನಾ ಸಭೆ ನಡೆಸಿದ ಸಂದರ್ಭದಲ್ಲಿ 

ಹಿಂದೆಂದೂ ಕಂಡು-ಕೇಳರಿಯದ ರೀತಿಯಲ್ಲಿ ಅವಘಡಗಳು ಸಂಭವಿಸಿದ್ದು, ಮನೆ, ದನಕರು, ವಾಹನ, ತೋಟ-ಗದ್ದೆಗಳಿಗಾದ ನಷ್ಟವನ್ನೂ ಪರಿಹಾರ ನೀಡುವಾಗ ಪರಿಗಣಿಸಬೇಕು. ಅಗತ್ಯವಿದ್ದೆಡೆ ಶಾಶ್ವತ ಪುನರ್ವಸತಿ ಕೂಡ ಮಾಡಬೇಕೆಂದು ಈ ಮನವಿಯನ್ನು ಸಲ್ಲಿಸಿದರು. 

ಪಶ್ಚಿಮಘಟ್ಟ ಹಾಗೂ ಕರಾವಳಿ ಪ್ರದೇಶಗಳಲ್ಲಿ ಕಳೆದ ಕೆಲವು ವರ್ಷಗಳಿಂದ ವ್ಯಾಪಕವಾಗಿ ಭೂಕುಸಿತವಾಗುತ್ತಿದೆ. ಈ ಕುರಿತು ಈಗಾಗಲೇ ಅಶೀಸರ ಅವರ ನೇತೃತ್ವದ ಉನ್ನತಮಟ್ಟದ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಭವಿಷ್ಯದಲ್ಲಿ ಈ ಪ್ರದೇಶಗಳಲ್ಲಿ ಪುನಃ ಭೂಕುಸಿತವಾಗುವದನ್ನು ತಡೆಯಲು, ತಜ್ಞರು ಶಿಫಾರಸ್ಸುಗಳ ಆಧಾರದಲ್ಲಿ ದೂರಗಾಮಿಯಾದ ಸೂಕ್ತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿ, ಈ ಸಂದರ್ಭದಲ್ಲಿ ಅಶೀಸರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಸದಸ್ಯ ಡಾ. ಪ್ರಕಾಶ ಮೇಸ್ತ ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*