ಮೊಟ್ಟೆ ಸೇವಿಸಿದರೆ ಜನತೆ ಅನಾರೋಗ್ಯಕ್ಕೆ ಒಳಗಾಗುವುದು ಪಕ್ಕಾ….!!! ನಗರದಲ್ಲಿ ನಡೆಯುತ್ತಿದೆ ಭಯಾಕನ ಅಕ್ರಮ ದಂಧೆ…! ಆರೋಗ್ಯ ಅಧಿಕಾರಿಗಳೆ ಎಲ್ಲಿದ್ದೀರಾ…?

ವರದಿ: ಆಕಾಶ ಚಲವಾದಿ

ರಾಜ್ಯ ಸುದ್ದಿಗಳು

ಬೆಂಗಳೂರು:

“ಫಾರಂ ಫಸ್ಟ್ ಗ್ರೇಡ್ ಮೊಟ್ಟೆಗಳಿಗೆ ಕೆಮಿಕಲ್ ಮೀಶ್ರಣ ಮಾಡಿ ಮಾರಾಟ ಮಾಡುವುದು ಅಪರಾಧ. ಇದರಿಂದ ಮನುಷ್ಯನ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇಂತಹ ಅಕ್ರಮ ಚಟುವಟಿಕೆ ಮಾಡಿದರೆ ಅದನ್ನು ಪರಿಶೀಲಿಸಿ ಸೂಕ್ರ ಕ್ರಮ ಕೈಗೊಳ್ಳಲಾಗುವುದು.”
-ಮೋಹನ ಗೌರೋಜಿ, ಬಗಲಗುಂಟೆ ಆರೋಗ್ಯ ಅಧಿಕಾರಿಗಳು, ಬೆಂಗಳೂರು.

ಕೊರೊನಾದಿಂದ ತತ್ತರಿಸಿರುವ ಸ್ವಚ್ಚ ಸಂಸ್ಕೃತಿ ಬೀಡಾಗಿರುವ ರಾಜಧಾನಿ ಬೆಂಗಳೂರಿನ ನಿವಾಸಿಗರಿಗೆ ಇನ್ನೊಂದು ಆತಂಕ ಎದುರಾಗಿದೆ. ಕೊರೊನಾ ವೈರಸ್ ಬಾರದಂತೆ ನೋಡಿಕೊಳ್ಳಲು ವೈದ್ಯರು ಹೇಳಿದ್ದು ನಾಟಿ ಮೊಟ್ಟೆಯಂತಹ ಪೌಷ್ಠಿಕ ಆಹಾರ ಸೇವೆನೆ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು. ಆದರೆ ಬೆಂಗಳೂರಿನ ಡಿಫೇನ್ಸ್ ಕಾಲೋನಿಯಲ್ಲಿ ಫಾರಂ ಮೊಟ್ಟೆಯ ಫಾರ್ಮನಲ್ಲಿ ಫಸ್ಟ್ ಗ್ರೇಡ್ ಮೊಟ್ಟೆಗಳನ್ನು ಆಯ್ದುಕೊಂಡು ಅವುಗಳನ್ನು ಕೆಮಿಕಲ್ಸಗಳಲ್ಲಿ ಮೀಶ್ರಣಾ ಅವುಗಳಿಗೆ ನಾಟಿ ಮೊಟ್ಟೆಯ ಬಣ್ಣ ಬರುವಂತೆ ನೋಡಿಕೊಂಡು ಸಾರ್ವಜನಿಕ ವಲಯಗಳಲ್ಲಿ ನಾಟಿ ಮೊಟ್ಟೆಗಳೆ ಎಂದು ಮಾರಾಟ ಮಾಡಲಾಗುತ್ತಿದೆ.
ಇಂತಹ ದಂಧಯನ್ನು ಮಾಡುತ್ತಿರುವ ದಂಧೆಕೋರರಿಗೆ ನೂರಾರು ಅಕ್ರಮಕೋರರ ಬೆಂಬಲವೂ ಇದೆ. ಇದರ ಬಗ್ಗೆ ಬೆಂಗಳೂರಿನ ಯಾವುದೇ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದ ಕೆಲ ಅಧಿಕಾರಿಗಳೂ ಈ ದಂಧೆಯಲ್ಲಿ ಶಾಮಿಲಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.



CHETAN KENDULI

ಬೆಂಗಳೂರಿನ ಜನರೇ ಎಚ್ಚರವಾಗಿರಿ:
ಬೆಂಗಳೂರಿನಲ್ಲಿ ಅಂಬಿಗ್ ನ್ಯೂಸ್ ಮೀಡಿಯಾದಿಂದ ಬೆಳಕಿಗೆ ಬಂದಿರುವ ಈ ಅಕ್ರಮ ಮೊಟ್ಟೆ ಜಾಲವು ಬೆಂಗಳೂರಿನ ವಿವಿಧ ಕಡೆ ಈಗಾಗಲೇ ಮೊಟ್ಟೆಗಳನ್ನು ಸರಬರಾಜು ಮಾಡಿದೆ. ಒಂದು ದಿನಕ್ಕೆ ಸಾವಿರಾರು ಮೊಟ್ಟೆಗಳನ್ನು ಕೆಮಿಕಲ್ ಮೀಶ್ರಣ ಮಾಡಿ ನಾಟಿ ಮೊಟ್ಟೆ ಎಂದು ಬಿಂಬಿಸಿ ಮಾರಾಟ ಮಾಡಲಾಗುತ್ತಿರುವ ದಂಧೆ ಕೋರರು ಯಾವ ಯಾವ ಸ್ಥಳಗಳಿಗೆ ಮೊಟ್ಟೆಗಳನ್ನು ಸರಬರಾಜು ಮಾಡಿದ್ದಾರೊ ಸ್ಥಳೀಯ ಅಧಿಕಾರಿಗಳು ಅಂತಹ ಮೊಟ್ಟೆಗಳನ್ನು ವಶಕ್ಕೆ ಪಡೆದುಕೊಳ್ಳುವವರೆಗೂ ಬೆಂಗಳೂರಿನ ಜನರು ನಾಟಿ ಮೊಟ್ಟೆ ಸೇವನೆ ಮುಂದಾಗಬಾರದು ಎನ್ನುವುದು ಅಂಬಿಗ್ ನ್ಯೂಸ್ ತಂಡದ ಮನವಿಯಾಗಿದೆ.



ಶಾಮಿಲಾಗಿದೆಯಾ ಪೊಲೀಸ್ ಇಲಾಖೆ…?
ಬಗಲಗುಂಟೆ ಪ್ರದೇಶದಲ್ಲಿ ಇಂತಹ ಅಕ್ರಮ ನಡೆಯುತ್ತಿರುವ ಮಾಹಿತಿಯನ್ನು ಪಡೆದ ನಮ್ಮ ಪ್ರತಿನಿಧಗಳ ವಿರುದ್ಧ ಅಕ್ರಮ ದಂಧೆ ಕೋರರ ತಂಡ ಮಾಲಿಕರೊಬ್ಬರು ನ್ಯೂಸ್ ಪ್ರತಿನಿಧಿಗಳು ಹಣ ಸೂಲಿಗೆ ಮಾಡುತ್ತಿದ್ದಾರೆ ಎಂಬ ದೂರು ದಾಖಲಿಸಲು ಬಗಲಗುಂಟೆ ಪೊಲೀಸ ಠಾಣೆಗೆ ಹೋಗಿದ್ದಾರೆ. ನಂತರ ಸ್ತಳೀಯ ಪೊಲೀಸ ಅಧಿಕಾರಿಯೊಬ್ಬರು ನ್ಯೂಸ್ ಪ್ರತಿನಿಧಗಳನ್ನು ಠಾಣೆಯಲ್ಲಿ ರಾತ್ರಿಯಡಿ ಕೂಡಿಸಿ ವಿಚಾರಣೆ ನಡೆಸಿದ್ದಾರೆ. ಕೊನೆಗೆ ಮೊಟ್ಟೆ ಮಾಲಿಕನ ಅಕ್ರಮ ಸಾಭೀತಾಗುವ ಸಮಯದಲ್ಲಿ ನ್ಯೂಸ್ ಪ್ರತಿನಿಧಗಳನ್ನು ಒಳಗಡೆ ಕರೆಸಿ ಅವರಲ್ಲಿದ್ದ ಕೆಲ ವಿಡಿಯೋಗಳನ್ನು ಡೆಲಿಟ್ ಮಾಡಿಸಿ ಕಳುಹಿಸಿದ ಘಟನೆ ನಡೆದಿದೆ. ಮೇಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎನ್ನುವುದು ಮೀಡಿಯಾದ ಆಗ್ರಹವಾಗಿದೆ.



ಆರೋಗ್ಯ ಅಧಿಕಾರಿಗಳಿಂದ ಸ್ಪಷ್ಠನೆ:
ಬಗಲಗುಂಟೆ ವ್ಯಾಪ್ತಿಯ ವಾರ್ಡ ನಂ:14ರಲ್ಲಿ ನಡೆಯುತ್ತಿರುವ ಅಕ್ರಮ ಮೊಟ್ಟೆ ಪ್ರಕರಣದ ಬಗ್ಗೆ ಅಂಬಿಗ್ ನ್ಯೂಸ್ ಹಿರಿಯ ಆರೋಗ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ಪಡೆದಾಗ ಸ್ಪಂಧನೆ ನೀಡಿದ ಅಧಿಕಾರಿಗಳು, ಪಾರಂ ಮೊಟ್ಟೆಯ ಫಸ್ಟ್ ಗ್ರೇಡ್ ಮೊಟ್ಟೆಯನ್ನು ಕೆಮಿಕಲ್ ಮೀಶ್ರಣ ಮಾಡಿ ಅವುಗಳನ್ನು ನಾಟಿ ಮೊಟ್ಟೆಯ ವಿನ್ಯಾಸ ಹಾಗೂ ಬಣ್ಣ ಬರುವ ಹಾಗೆ ಮಾಡಿ ಅದನ್ನು ಮನುಷ್ಯ ಸೇವನೆ ಮಾಡಿದಾಗ ಖಂಡಿತವಾಗಿಯೂ ಮನುಷ್ಯನ ಆರೋಗದಲ್ಲಿ ಸಮಸ್ಯೆ ಉದ್ಭವಿಸುತ್ತದೆ ಎಂದು ಸ್ಪಷ್ಠನೆ ನೀಡಿದ್ದಾರೆ.

 

Be the first to comment

Leave a Reply

Your email address will not be published.


*