ಮುದ್ದೇಬಿಹಾಳ: ಹೊರಪೇಟ ನಗರದಲ್ಲಿ 22ನೇ ಕಾರ್ಗಿಲ್ ವಿಜಯೋತ್ಸವದ ಸಂಭ್ರಮಾಚರಣೆ…!

ವರದಿ: ಅಂಬಿಗ್ ನ್ಯೂಸ್ ತಂಡ

ಜಿಲ್ಲಾ ಸುದ್ದಿಗಳು

CHETAN KENDULI

 

ಮುದ್ದೇಬಿಹಾಳ:

ಪಟ್ಟಣದ ಹೊರಪೇಟ ನಗರದ ಡಾ.ಆರ್.ಆರ್.ಪದಕಿ ರಸ್ತೆಯ ಸಂಜೀವಿನಿ ಕ್ಲೀನಿಕ್ ಎದುರಿಗೆ ಸೋಮವಾರ ಸಂಜೆ 22ನೇ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದು ಎಲ್ಲರ ಮೆಚ್ಚುಗೆಯ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ನಾಮನಿರ್ದೇಶಕ ಸದಸ್ಯ ಹುಲಗಪ್ಪ ನಾಯ್ಕಮಕ್ಕಳ, ಹಿಂದೆಂದೂ ಇಂತಹ ಕಾರ್ಗಿಲ್ ವಿಜಯೋತ್ಸವವನ್ನು ನಮ್ಮ ನಗರದಲ್ಲಿ ಆಚರಣೆ ಮಾಡಿದ್ದಿಲ್ಲ. ಆದರೆ ಈ ಬಾರಿ ಎಲ್ಲ ಯುವಕ ಮಂಡಳಿಯವರು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿದ್ದು ಹೆಮ್ಮೆಯ ವಿಷಯವಾಗಿದೆ. ಇಂತಹ ದೇಶ ಭಕ್ತಿಯು ಪ್ರತಿ ಗಲ್ಲಿ ಗಲ್ಲಿಯಲ್ಲೂ ಬೆಳಯ ಬೇಕಿದೆ. ದೇಶದಲ್ಲಿ ನಾವು ಸಂತಸದಿಂದ ಇದ್ದೇವೆ ಎಂದರೆ ದೇಶದ ಗಡಿಯಲ್ಲಿನ ಯೋಧರಿಂದ ಎನ್ನುವುದು ಮರೆಯುವಂತಿಲ್ಲ. ಅಲ್ಲದೇ ಇಂತಹ ಕಾರ್ಯಕ್ರಮದಿಂದ ಅನೇಕ ಯುವಕರಲ್ಲಿಯೂ ಜಾಗೃತಿ ಮೂಡಿದಂತಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.



ಶೃಂಗಾರಗೌಡ ಫೌಂಡೇಷನ್ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಶರಣು ಬೂದಿಹಾಳಮಠ ಫೌಂಡೇಷನ ಮುಖ್ಯಸ್ಥ ಮಹಾಂತೇಶ ಬೂದಿಹಾಳಮಠ, ಯುವ ಮುಖಂಡ ಚಂದ್ರು ನಾಯ್ಕೋಡಿ ಮಾತನಾಡಿದರು.

ಇದೇ ವೇಳೆಯಲ್ಲಿ ವಿಜಯೋತ್ಸವದ ನಿಮಿತ್ಯ ನಗರದ ಯುವಕರು ಭಾರತದ ಭೂಪಟವನ್ನು ಹೂಗಳಿಂದ ಸುಂದರವಾಗಿ ನಿರ್ಮಿಸಿದ್ದು ಎಲ್ಲರ ಗಮನ ಹರಿಸುವಂತಾಯಿತು.
ವಿಜಯೋತ್ಸವದಲ್ಲಿ ಸನ್ನಿ ವಾಲ್ಮೀಕಿ, ಯಮನೂರಿ ಮೇಲಿನಮನಿ, ರಫೀಕ ಸಗರ, ಮಲ್ಲು ಮೇಟಿ, ದೇಸು ಬಿರಾದಾರ, ಸುದೀಪ ವಾಲೀಕಾರ, ಮಂಜು ವಾಲ್ಮೀಕಿ, ಪವನ ಮಠ, ನಾಗರಾಜ ಗುಳೇದಗುಡ್ಡ ಮತ್ತೀತರರು ಇದ್ದರು.





Be the first to comment

Leave a Reply

Your email address will not be published.


*