ಯರಝರಿ ಪಿಕೆಪಿಎಸ್ ಮಾದರಿ ಕಾರ್ಯ….!!! ಮೃತ ಶೇರುದಾರರ ಕುಟುಂಬಕ್ಕೆ ಸಹಾಯಧನ…!

ವರದಿ: ಬಸವರಾಜ ಹಾರವಾಳ, ಯರಝರಿ

ರಾಜ್ಯ ಸುದ್ದಿಗಳು

CHETAN KENDULI

 

ಮುದ್ದೇಬಿಹಾಳ:

ನಮ್ಮ ಪಿಕೆಪಿಎಸ್ ನ ಶೇರುದಾರರು ಮೃತಾರಾದರೆ ಅವರ ಕುಟುಂಬಕ್ಕೆ 5 ಸಾವಿರ ಸಹಧಾನ ನೀಡಲಾಗುತ್ತಿದೆ. ನಮ್ಮ ಸಂಘದಲ್ಲಿ ಅತ್ಯಂತ ಬಡ ರೈತರು ಶೇರುದರಾರಾಗಿದ್ದಾರೆ. ಆದರೆ ಇಂತಹ ಶೇರುದಾರರಿಂದಲೇ ನಮ್ಮ ಸಹಕಾರಿ ಬ್ಯಾಂಕ್ ಮುನ್ನೆಡೆಯುತ್ತದೆ. ಇವರ ಅಗಲಿಕೆಗೆ ಅವರ ಕುಟುಂಬಸ್ಥರಿಗೆ ನಮ್ಮ ಬ್ಯಾಂಕನಿಂದ ಒಂದು ಸಣ್ಣ ಸಹಾಯ ಮಾಡುತ್ತಾ ಬರುತ್ತಿದ್ದೇವೆ.

-ಸೋಮಶೇಖರ ದೇಶಮುಖ, ಅಧ್ಯಕ್ಷರು,ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ,ಯರಝರಿ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದವತಿಯಿಂದ ಸಂಘದ ಶೇರುದಾರ ಮೃತ್ಯುವಿನ ನಂತರ ಸಂಘದಿಂದ ಕುಟುಂಬಕ್ಕೆ 5 ಸಾವಿರ ಸಹಾಯಧನ ನೀಡುವ ಮೂಲಕ ಇತರೆ ಪಿಕೆಪಿಸ್ ಬ್ಯಾಂಕುಗಳಿಗೆ ಮಾದರಿಯಾಗಿದೆ.



ಹೌದು, ಸಹಕಾರಿ ಬ್ಯಾಂಕ್ ಅಂದರೆ ಕೇವಲ ಹಣ ವಿಲೇವಾರಿ ಮಾಡುವ ಕಛೇರಿಯಾಗಿದೆ. ಆದರೆ  ಹಲವು ವರ್ಷಗಳಿಂದ ಯರಝರಿ ಗ್ರಾಮದ  ಪಿಕೆಪಿಸ್ ನೆಡೆದುಕೊಂಡು ಬರುತ್ತಿರುವ ವಿನೂತನ ಸಹಕಾರಿ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.

ಇತ್ತೀಚಿಗೆ ಯರಝರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಾಳ ಗ್ರಾಮದ ನಿಂಗನಗೌಡ ಯಪನಪ್ಪಗೌಡ ಬಿರಾದಾರ(69) ಅನಾರೋಗ್ಯದಿಂದ ನಿಧನರಾಗಿದ್ದರು. ಯರಝರಿ ಪಿಕೆಪಿಎಸ್ ಬ್ಯಾಂಕ್ ಶೇರುದಾರರಾಗಿದ್ದ ಕಾರಣ ಬಡತನದಲ್ಲಿದ್ದ ಇವರ ಕುಟುಂಬಕ್ಕೆ ಬ್ಯಾಂಕನಿಂದ ನಿಂಗನಗೌಡ ಯಪನಪ್ಪಗೌಡ ಬಿರಾದಾರ ಪತ್ನಿ ಕಸ್ತೂರಿಬಾಯಿ ಅವರಿಗೆ 5 ಸಾವಿರ ಸಹಧಾನ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು.

ಈ ಸಂಧರ್ಭದಲ್ಲಿ ಸಂಘದ ಸದಸ್ಯರಾದ ಸಂಗನಗೌಡ ಪಾಟೀಲ, ಮಲ್ಲನಗೌಡ ಮ್ಯಾಗೇರಿ, ಬಸನಗೌಡ ಪಾಟೀಲ, ಗ್ರಾಮಸ್ಥರಾದ ಬಾಪುಗೌಡ ಪಾಟೀಲ, ಮಲ್ಲನಗೌಡ ಹಂಚಿನಾಳ, ಬಸವರಾಜ ತಳ್ಳಿಕೇರಿ, ಸಂಘದ ಕಾರ್ಯದರ್ಶಿ ಖಾನಗೌಡ ಬಿರಾದಾರ, ಸಿಪಾಯಿ ಶರೀಫ್ ತಾಳಿಕೋಟಿ ಇದ್ದರು.

 

Be the first to comment

Leave a Reply

Your email address will not be published.


*