ಸರ್ಕಾರದಿಂದ ನೀಡಲಾಗಿರುವ ಪಿ.ಸಿ ಟ್ಯಾಬ್ ವಿತರಣೆ

ವರದಿ: ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿ

CHETAN KENDULI

ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ರಾಜ್ಯ ಸರ್ಕಾರದಿಂದ ನೀಡಲಾಗಿರುವ ಪಿ.ಸಿ ಟ್ಯಾಬ್ ಗಳನ್ನು ವಿಧಾನಸಭಾಕ್ಷೇತ್ರ ವಿಶ್ವೇಶ್ವರ ಹೆಗಡೆ ಕಾಗೇರಿ ನಗರದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು.ಇಲ್ಲಿನ ಬನವಾಸಿ ರಸ್ತೆಯಲ್ಲಿರುವ ಕಾಲೇಜಿನ ನೂತನ ಕಟ್ಟಡದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೀಡಲಾಗಿತ್ತು . ಒಟ್ಟು 951 ವಿದ್ಯಾರ್ಥಿಗಳಿಗೆ ತಲಾ 10.5 ಸಾವಿರ ರೂ ಮೊತ್ತದ ಟ್ಯಾಬ್ಗಳನ್ನು ವಿತರಣೆ ಮಾಡಲಾಗಿದ್ದು.

ನಂತರ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯದಲ್ಲಿ 1.5ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಗುತ್ತಿದೆ. ಶಿರಸಿಯಲ್ಲು 951 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಕೊರೊನಾ ಕಾರಣದಿಂದ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಆಧುನಿಕ ತಂತ್ರಜ್ಞಾನವುಳ್ಳ ಟ್ಯಾಬ್ ಗಳನ್ನು ನೀಡಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.ಆದರೆ ಇದರ ದುರುಪಯೋಗ ಆಗಬಾರದು ಅನಗತ್ಯವಾಗಿ ಇದನ್ನು ಉಪಯೋಗ ಮಾಡದೇ ಕೇವಲ ಶೈಕ್ಷಣಿಕದಲ್ಲಿ ಪ್ರಗತಿ ಸಾಧಿಸಲು ಬಳಸಬೇಕು ಎಂದು ಸಲಹೆ ನೀಡಿದರು .ಈ ಸಂದರ್ಭದಲ್ಲಿ ಕಳವೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ್ ಭಟ್ , ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ , ಕಾಲೇಜಿನ ಪ್ರಾಚಾರ್ಯರಾದ ಜನಾರ್ಧನ್ ಭಟ್ಟ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*