ಇಸ್ಲಾಂಗೆ 1000 ಜನರ ಮತಾಂತರ; ಗ್ಯಾಂಗ್‍ಸ್ಟರ್, ಎನ್‍ಎಸ್‍ಎ ಕಾಯ್ದೆಯಡಿ ಇಬ್ಬರ ಬಂಧನ 

ವರದಿ-ಕುಮಾರ್ ನಾಯ್ಕ.ಭಟ್ಕಳ

 ರಾಜ್ಯ ಸುದ್ದಿ

CHETAN KENDULI

ನವದೆಹಲಿ: ಕಿವಿ ಕೇಳದ ಮತ್ತು ಮಾತು ಬಾರದ ಮತ್ತು ದೈಹಿಕ ವಿಕಲಚೇತನ ಮಕ್ಕಳು ಮತ್ತು ಯುವಕರ ಮತಾಂತರದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಗ್ಯಾಂಗ್‍ಸ್ಟರ್ ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‍ಎಸ್‍ಎ) ಅಡಿಯಲ್ಲಿ ಕ್ರಮಕೈಗೊಳ್ಳಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.1,000 ಜನರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ್ದಕ್ಕಾಗಿ ದೆಹಲಿಯಲ್ಲಿ ಸೋಮವಾರ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ ಮತ್ತು ದಂಧೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಮತ್ತು ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ ವಿಚಾರಣೆ ನಡೆಸುವಂತೆ ತನಿಖಾ ಏಜೆನ್ಸಿಗಳಿಗೆ ಅವರು ಸೂಚಿಸಿದ್ದಾರೆ. ಆರೋಪಿಗಳ ಆಸ್ತಿಯನ್ನು ವಶಪಡಿಸಿಕೊಳ್ಳುವಂತೆಯೂ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಆದೇಶಿಸಿದೆ.

ದೆಹಲಿಯ ಜಾಮಿಯಾ ನಗರದಲ್ಲಿನ ಇಬ್ಬರು ಪಾಕಿಸ್ಥಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ)ನಿಂದ ಧನಸಹಾಯ ಪಡೆದುಕೊಂಡು ಕಿವಿ ಕೇಳಿಸದ ವಿದ್ಯಾರ್ಥಿಗಳು ಮತ್ತು ಇತರ ಬಡವರನ್ನು ಉತ್ತರಪ್ರದೇಶದಲ್ಲಿ ಇಸ್ಲಾಂಗೆ ಪರಿವರ್ತಿಸುವ ಸಂಘಟನೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.ಲಕ್ನೋದ ಎಟಿಎಸ್ ಪೆÇಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ ಬೆನ್ನಲ್ಲೇ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.ಬಂಧಿತ ಆರೋಪಿಗಳನ್ನು ನವದೆಹಲಿಯ ಜಾಮಿಯಾ ನಗರ ನಿವಾಸಿಗಳಾದ ಮುಫ್ತಿ ಖಾಜಿ ಜಹಾಂಗೀರ್ ಆಲಂ ಕಸ್ಮಿ ಮತ್ತು ಮೊಹಮ್ಮದ್ ಉಮರ್ ಗೌತಮ್ ಎಂದು ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಗುರುತಿಸಿದ್ದಾರೆ.

Be the first to comment

Leave a Reply

Your email address will not be published.


*