ಪಾಕ್ ಮಹಿಳೆ ಹಿನ್ನೆಲೆ ಬಗ್ಗೆ ಸಮಗ್ರ ತನಿಖೆ ನಡೆಸಿ; ಹಿಂಜಾವೇಯಿಂದ ಮನವಿ ಸಲ್ಲಿಕೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENdULI

ಕುಮಟಾ: ಭಟ್ಕಳದಲ್ಲಿ ಅನಧಿಕೃತವಾಗಿ ವಾಸವಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಬಂಧಿಸಲಾಗಿದ್ದು, ಶೀಘ್ರದಲ್ಲೇ ಆಕೆಯ ಹಿನ್ನೆಲೆಯ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯ ಕುಮಟಾ ಘಟಕದ ವತಿಯಿಂದ ಸಹಾಯಕ ಆಯುಕ್ತ ಎಮ್.ಅಜಿತ ರೈ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ದೇಶದ ಯಾವ ಮೂಲೆಯಲ್ಲಿ ಭಯೋತ್ಪಾದನೆ ಕೃತ್ಯ ನಡೆದರೂ ಅದರ ಸಂಬಂಧ ಭಟ್ಕಳದೊಂದಿಗೆ ಜೋಡಣೆ ಆಗುತ್ತಿರುವುದು ಬಹಳ ನೋವಿನ ಸಂಗತಿ. ಈ ಮತೀಯ ವಾದ ಭಟ್ಕಳಕ್ಕೆ ಕಳಂಕ. ಈ ಪರಿಸ್ಥಿತಿಯನ್ನು ಈ ಹಂತದಲ್ಲಿಯೇ ಕಡಿವಾಣ ಹಾಕದಿದ್ದಲ್ಲಿ ಮುಂದಿನ ದಿನ ದೊಡ್ಡ ಪ್ರಮಾಣದಲ್ಲಿ ಅನಾಹುತಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ಸಾಕಷ್ಟು ನುಸುಳುಕೋರರು ನಕಲಿ ಪಾಸಪೆÇೀರ್ಟ್, ನಕಲಿ ಆಧಾರ ಕಾರ್ಡ್, ನಕಲಿ ವೋಟರ್ ಕಾರ್ಡೊಂದಿಗೆ ಭಟ್ಕಳದಲ್ಲಿ ವಾಸವಿದ್ದ ಬಗ್ಗೆ ಸಾಕಷ್ಟು ಸಂಶಯವಿದೆ. ಇದು ನಮ್ಮ ದೇಶದ ರಕ್ಷಣಾತ್ಮಕ ವಿಚಾರ ಆಗಿರುವುದರಿಂದ ಈ ಬಗ್ಗೆ ಸಮಗ್ರವಾದ ತನಿಖೆ ಆಗಲೇಬೇಕಾಗಿದೆ. ಮಹಿಳೆಗೆ ನಕಲಿ ದಾಲೆಗಳನ್ನು ಯಾರು ಸೃಷ್ಟಿ ಮಾಡಿಕೊಟ್ಟಿದ್ದಾರೆ. ಇಷ್ಟು ದಿನ ಯಾರು ಇವಳಿಗೆ ಆಶ್ರಯ ನೀಡಿದ್ದಾರೆ. ಮತ್ತೆಷ್ಟು ಜನರಿಗೆ ಇವರು ನಕಲಿ ದಾಖಲೆ ಸೃಷ್ಟಿಮಾಡಿ ಕೊಟ್ಟಿದ್ದಾರೆ. ಈ ಮಹಿಳೆ ಭಟ್ಕಳದಲ್ಲಿ ಯಾವ ಚಟುವಟಿಕೆಗಳನ್ನು ನಡೆಸಿದ್ದಾಳೆ. ಇದೆಲ್ಲ ವಿಚಾರಗಳನ್ನು ಬಯಲಿಗೆಳೆಯಬೇಕಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಮನವಿ ಸಲ್ಲಿಕೆಯಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಸದಾನಂದ ಕಾಮತ, ಪ್ರಾಂತ ಕಾರ್ಯದರ್ಶಿ ಭಾಸ್ಕರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ವಿವೇಕ ನಾಯಕ, ಪ್ರಮುಖರಾದ ರವಿ ಮಿರ್ಜಾನ, ವಿನಯ ಅಘನಾಶಿನಿ, ವಿನಾಯಕ ನಾಯ್ಕ ಹಾಗೂ ಮಂಗಲದಾಸ ಬಾಡ ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*