ರಾಜ್ಯ ಸುದ್ದಿ
ಶಿರಸಿ: ಯೋಗ ಪ್ರಚಾರಕರಾಗಿದ್ದ ದಿವಂಗತ ಅಜಿತ ಕುಮಾರ ಹೆಸರಿನ ಸಂಸ್ಥೆಯಲ್ಲಿ ಯೋಗದಿನ ಕಾರ್ಯಕ್ರಮ ಸಂತಸ ತಂದಿದೆ. ಕರೋನಾ ತಡೆಗೆ ಸ್ವರ್ಣವಲ್ಲೀ ಸ್ವಾಮೀಜಿ ಅವರ ನೇತೃತ್ವದಲ್ಲಿ ಒಂದು ನೂರು ಯೋಗ ಶಿಬಿರ ನಡೆಸಿದ್ದೇವೆ ಎಂದು ಯೋಗಪಟು ರಘುರಾಮ ಹೆಗಡೆ ತಿಳಿಸಿದರು.ಅವರು ಶಿರಸಿಯ ಅಜಿತ ಮನೋಚೇತನ ಟ್ರಸ್ಟ ಆಶ್ರಯದಲ್ಲಿ ಜೂ.21 ರ ಸಂಜೆ ನಡೆದ ಯೋಗದಿನ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು. ನಂತರ ಸರಳ ಯೋಗ ಪ್ರದರ್ಶನ-ತರಬೇತಿ ನೀಡಿದರು.
ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಹಾಗೂ ಅಜಿತಮನೋಚೇತನಾ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಮಾತನಾಡಿ ಯೋಗ ಪ್ರಸಾರ ಅಜಿತ ಮನೋಚೇತನಾ ಸಂಸ್ಥೆಯ ಉದ್ದೇಶಗಳಲ್ಲಿ ಒಂದು. ಮಾನಸಿಕ ಆರೋಗ್ಯ ಶಿಕ್ಷಣದ ಜೊತೆ, ಯೋಗ ಚಿಕಿತ್ಸಾ ಶಿಬಿರ ಆಯೋಜನೆ ಮಾಡಲು ಸಂಸ್ಥೆ ಮುಂದಾಗಲಿದೆ ಎಂದು ತಿಳಿಸಿದರು. ಯೋಗ ಶಿಕ್ಷಕಿ ಶ್ಯಾಮಲಾ ಮಾತನಾಡಿ ಯೋಗ ಅಭ್ಯಾಸದಿಂದ ವಿಕಾಸ ವಿಶೇಷ ಮಕ್ಕಳ ದೈಹಿಕ-ಮಾನಸಿಕ ಆರೋಗ್ಯ ಸುಧಾರಿಸಿದೆ. ವಿಶೇಷ ಮಕ್ಕಳು ಚೆನ್ನಾಗಿ ಯೋಗಾಸನ ಮಾಡುತ್ತಾರೆ. ಪಾಲಕರು ಇನ್ನಷ್ಟು ಗಮನ ವಹಿಸಿದರೆ ಪ್ರಗತಿ ಹೆಚ್ಚಾಗಲಿದೆ ಎಂದರು. ಸಂಸ್ಥೆ ಅಧ್ಯಕ್ಷ ಸುಧೀರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕು. ಸುಮಿತ್ರಾ ಸ್ವಾಗತಿಸಿದರು. ಶಿಕ್ಷಕಿ ಪರಿಮಳ ವಂದಿಸಿದರು.
Be the first to comment