ರಾಜ್ಯ ಸುದ್ದಿ
ಶಿರಸಿ: ಸ್ಥಳೀಯ ಸಬ್‍ಜೈಲ್ ಮತ್ತೆ ಬಂದ್! ಶಾಶ್ವತ ಸಬ್‍ಜೈಲನ್ನಾಗಿ ಹೊಸದಾಗಿ ಕಟ್ಟಿರುವ ಅಬಕಾರಿ ಇಲಾಖೆಯನ್ನ ಸಬ್‍ಜೈಲನ್ನಾಗಿ ಪರಿವರ್ತನೆಗೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ.
ನಗರದಲ್ಲಿ 10 ಕೋಟಿ ವೆಚ್ಚದಲ್ಲಿ ಇನ್ನೊಂದು ಸರಕಾರಿ ಕಚೇರಿಗಳ ಸಂಕೀರ್ಣ ಕಟ್ಟಡ ಹಾಲಿ ಇರುವ ಸಬ್‍ಜೈಲ್ ಕ್ಷೇತ್ರದಲ್ಲಿ ಕಟ್ಟುವ ಹಿನ್ನೆಲೆಯಲ್ಲಿ ಸಬ್‍ಜೈಲ್ ಬಂದಾಗುವ ಸಂಭವವಿರುವುದರಿಂದ ಇದ್ದು ಇಲ್ಲದಂತೆ ಆಗಿರುವ ಹಾಗೂ ಅನಧೀಕೃತ ಸಾರಾಯಿ ನಿಯಂತ್ರಣದಲ್ಲಿ ಅಬಕಾರಿ ಇಲಾಖೆ ಸಂಪೂರ್ಣವಾಗಿ ವೈಫಲ್ಯ ಆಗಿರುವುದರಿಂದ ನ್ಯಾಯಾಲಯದ ಪಕ್ಕದಲ್ಲಿರುವ ಸದ್ರಿ ಕಟ್ಟಡ ಅಬಕಾರಿ ಇಲಾಖೆಕ್ಕಿಂತ ಸಬ್‍ಜೈಲಿಗೆ ಹೆಚ್ಚು ಉಪಯುಕ್ತವಾಗುವುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಬಕಾರಿ ಇಲಾಖೆಯ ಹೊಸ ಕಟ್ಟಡವನ್ನ ಶಾಶ್ವತವಾಗಿ ಸಬ್‍ಜೈಲನ್ನಾಗಿ ಪರಿವರ್ತಿಸಲು ಆಗ್ರಹಿಸಿದ್ದಾರೆ.
ಈಗಾಗಲೇ ಸಿದ್ಧಾಪುರ, ಯಲ್ಲಾಪುರ ಮತ್ತು ಕುಮಟ ಸಬ್‍ಜೈಲ್‍ಗಳು ಬಂದಾಗಿ ಕಾರವಾರ ಜೈಲ್‍ನಲ್ಲಿ ಆರೋಪಿತರ ಸಂಖ್ಯೆಗೆ ಒತ್ತಡ ಹೆಚ್ಚಾಗಿರುವುದರಿಂದ ಮತ್ತೆ ಶಿರಸಿ ಸಬ್‍ಜೈಲ್ ಬಂದಾಗುವುದರಿಂದ ಕೋವೀಡ್ ಸಂದರ್ಭದಲ್ಲಿನ ಕಾರವಾರ ಜೈಲಿನ ಒತ್ತಡ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳುತ್ತಾ ಭದ್ರತೆ, ಬಂದೋಬಸ್ತ, ಆರೋಪಿಗಳ ಸಾಗಾಟ, ಕಡಿಮೆ ಪೋಲೀಸ್ ಸಿಬ್ಬಂದಿಯ ಅವಶ್ಯಕತೆ ಮುಂತಾದ ಆಡಳಿತಾತ್ಮಕ ದೃಷ್ಟಿಯಿಂದ ಹೊಸ ಅಬಕಾರಿ ಕಟ್ಟಡ ಸಬ್‍ಜೈಲಿಗೆ ಸೂಕ್ತವಾದ ಸ್ಥಳವೆಂದು ಹೇಳಿದ್ದಾರೆ.
ಹಿಂದೆಯೂ 8 ವರ್ಷ ಬಂದ್: ಈ ಹಿಂದೆಯೂ 2006 ರಿಂದ 14 ರವರೆಗೆ ಶಿರಸಿ ಸಬ್‍ಜೈಲ್ ಸೂಕ್ತ ಬದ್ರತೆಗಳ ಕಟ್ಟಡಗಳ ಕೊರತೆಯಿಂದ ಬಂದಾಗಿದ್ದು ಶಿರಸಿ ವಕೀಲ ಸಂಘವು ಕರ್ನಾಟಕ ಉಚ್ಛ ನ್ಯಾಯಾಲಯ ಸಂಚಾರಿಪೀಠ ದಾರವಾಡದಲ್ಲಿ ರಿಟ್‍ಪೀಟಿಷನ್ ದಾಖಲಿಸಿದ ಹಿನ್ನೆಲೆಯಲ್ಲಿ ಶಿರಸಿ ಸಬ್‍ಜೈಲ್ 8 ವರ್ಷಗಳ ನಂತರ ಪುನರ್ ಕಾರ್ಯ ಪ್ರಾರಂಭಿಸಿತ್ತು ಎಂಬುದನ್ನು ಸ್ಪಷ್ಟನೆ ಹೊಂದಿರುವುದನ್ನು ನೆನಪಿಸಿಕೊಳ್ಳಬಹುದಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.
Be the first to comment