ಜಿಲ್ಲಾ ಸುದ್ದಿಗಳು
ಕೊರೋನಾ 2ನೇ ಅಲೆ ಆರ್ಭಟ ಹೆಚ್ಚಾಗುತ್ತಿದ್ದಂತೆ ಲಸಿಕೆ ಹಂಚಿಕೆ ಅಭಿಯಾನ ಜೋರಾಗಿದೆ. ಇಲ್ಲಿಯವರೆಗೆ ಕೊರೋನಾ ವಾರಿಯರ್, ಸೀನಿಯರ್ ಸಿಟಿಜನ್ ಲಸಿಕೆ ಪಡೆಯುತ್ತಿದ್ದರು ಈಗ 45 ವರ್ಷ ಮೇಲ್ಪಟ್ಟವರು ಕೊರೋನಾ ಲಸಿಕೆ ಪಡೆಯಲು ಅವಕಾಶ ದೊರೆತಿದ್ದು, ಇದರ ಸದುಪಯೋಗ ಪಡೆಯಲು ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಜನತೆ ಮುಂದಾಗಿದ್ದಾರೆ.ಆದ್ಯತೆ ಮೇರೆಗೆ ಮೊದಲು ಕೊರೊನಾ ವಾರಿಯರ್, ಸೀನಿಯರ್ ಸಿಟಿಜನ್ ಗೆ ಲಸಿಕೆ ನೀಡಲಾಗಿತ್ತು.ಇದೀಗ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಂಚಿಕೆ ಅಭಿಯಾನ ಶುರುವಾಗಿದೆ.
ಬಾಗಲಕೋಟೆ:(ಕೆಲೂರ) ಇಲಕಲ್ಲ ತಾಲೂಕಿನ ಕೆಲೂರ ಗ್ರಾಮ ಪಂಚಾಯತಿ ಮಟ್ಟದಲ್ಲಿ ಇಂದು ಕೊವಿಡ್ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಕೊವಿಡ್ ಲಸಿಕೆ ಅಭಿಯಾನದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲು ಆದ್ಯತೆ ನೀಡಲಾಗಿದೆ. ನಂತರ 45 ವರ್ಷದವರಿಗೆ ಮೊದಲನೇ ಡೋಸ್ ನೀಡಲಾಗುತ್ತಿದೆ.ಲಸಿಕೆ ನೀಡಲು ಪ್ರಾಥಮಿಕ ಆರೋಗ್ಯಕೇಂದ್ರದ ಸಿಬ್ಬಂದಿಯವರು ಆಗಮಿಸಿದ್ದು ಜನರು ಆಸಕ್ತಿಯಿಂದ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ, ಗ್ರಾಮ ಲೆಕ್ಕಾಧಿಕಾರಿ ಧರ್ಮಣ್ಣ ಯತ್ನಟ್ಟಿ, ವೈಧ್ಯರಾದ ಪಾಟೀಲ್,ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ ಕೊಪ್ಪದ, ಗ್ರಾಮದ ಹಿರಿಯರಾದ ಮಹಾಬಳೇಶ್ವರಗೌಡ ನಾಡಗೌಡರ,ಬಾಬು ಸಿಮಿಕೇರಿ,ಆರೋಗ್ಯ ಸಹಾಯಕಿಯರಾದ ಶ್ರೀಮತಿ ಕುಸುಮಾ ಮಡಿವಾಳರ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.
Be the first to comment