ಗುಡೂರ ಮೊದಲ ದಿನ ಸ್ವಯಂ ಘೋಷಿತ ಲಾಕ್‌ ಡೌನ್ ಬಹುತೇಕ ಯಶಸ್ವಿ : ಮನೆಯಿಂದ ಹೊರ ಬಾರದ ಜನ..!

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ(ಗುಡೂರ):

ಮೊದಲ ದಿನ ಸ್ವಯಂ ಘೋಷಿತ ಲಾಕ್‌ ಡೌನ್ ಬಹುತೇಕ ಯಶಸ್ವಿಯಾಗಿದ್ದು ಮನೆಯಿಂದ ಯಾರು ಅನಗತ್ಯವಾಗಿ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ.

CHETAN KENDULI

ಕೊರೊನಾ ಸೋಂಕು ಹರಡುವಿಕೆಗೆ ತಡೆ ಹಾಕಲು ಇಂದಿನಿಂದ ಮೇ-31 ರವರೆಗೆ ಇಳಕಲ್ಲ ತಾಲೂಕಿನ ಗುಡೂರ ಗ್ರಾಮ ದಲ್ಲಿ ಸ್ವಯಂ ಘೋಷಿತ ಲಾಕ್ ಡೌನ್ ಜಾರಿಯಲ್ಲಿದ್ದು ಅಗತ್ಯ ವಸ್ತುಗಳ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ನಿಷೇಧಿಸಲಾಗಿದೆ.

ಅಗತ್ಯ ವಸ್ತುಗಳ ಖರೀದಿಗಾಗಿ ಸೋಮವಾರ ಮತ್ತು ಗುರುವಾರ ವಾರದಲ್ಲಿ ಎರಡು ದಿನ ಮಾತ್ರ ಬೆಳಿಗ್ಗೆ 6 ರಿಂದ 10 ರ ವರೆಗೆ ಸಮಯಾವಕಾಶವನ್ನು ನೀಡಲಾಗಿದ್ದು ಆ ಬಳಿಕ ಸಂಪೂರ್ಣ ಬಂದ್ ಆಗಿತ್ತು.ಸ್ವಯಂ ಘೋಷಿತ ಲಾಕ್ ಡೌನ ನ ಮೊದಲ ದಿನವಾದ ಇಂದು ಗುಡೂರನಲ್ಲಿ ಜನರ ಸಂಖ್ಯೆ ಅತ್ಯಂತ ವಿರಳವಾಗಿರುವುದು ಕಂಡು ಬಂದಿದೆ.

ಪೆಟ್ರೋಲ್ ಬಂಕ್, ಮೆಡಿಕಲ್, ಹಾಲು ಹಾಗೂ ಪೇಪರ್ ಸ್ಟಾಲ್ ಗಳು ಎಂದಿನಂತೆ ಕಾರ್ಯಾಚರಿಸಲು ಅವಕಾಶವನ್ನು ನೀಡಲಾಗಿತ್ತು. ಬೆಳಿಗ್ಗೆ 10 ರ ವರೆಗೆ ಅಂಗಡಿ ತೆರೆಯಲು ಅವಕಾಶವಿದ್ದರೂ, ಕೆಲವರು ಮಾತ್ರ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿರುವುದು ಬಹುತೇಕ ಕಡೆಗಳಲ್ಲಿ ಕಂಡು ಬಂದಿದೆ.

ಈ ಸಂಬಂಧ ಆಯಕಟ್ಟಿನ ಸ್ಥಳಗಳಲ್ಲಿ ಪೋಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿ ಅನಗತ್ಯ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.ಗ್ರಾಮ ಪಂಚಾಯತಿ ಸಿಬ್ಬಂದಿಯವರು ಗ್ರಾಮದಾದ್ಯಂತ ಸ್ಯಾನಿಟೈಸರ್ ಸಿಂಪಡಿಸಿದರು.

Be the first to comment

Leave a Reply

Your email address will not be published.


*