ಲಿಂಗಸಗೂರು: ಮೇ18:ಕೊರೊನಾದ ಆರ್ಭಟ ಜಿಲ್ಲೆಯಾದ್ಯಂತ ರಣೋತ್ಸಾಹ ಮೆರೆದಿರುವಾಗಲೆ ಮತ್ತೊಂದು ಆಘಾತದ ಸುದ್ದಿ ಜಿಲ್ಲೆಗೆ ಬ್ಲಾಕ್ ಫಂಗಸ್ ಕಾಲಿಡುತಿದೆ ಎನ್ನುತಿದೆ ವೈದ್ಯಕೀಯ ಲೋಕ
ರಾಯಚೂರು ಜಿಲ್ಲೆಯ ಲಿಂಗಸಗೂರು ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯವರ ತುರ್ತುಸಭೆಯಲ್ಲಿ ನಡೆದ ಚರ್ಚೆಯಲ್ಲಿ ಜಿಲ್ಲೆಯಲ್ಲಿ ಬ್ಲಾಕ್ ಫೊಂಗಸ್ ಕಂಡು ಬಂದಿದೆಯಾ ಎನ್ನುವ ಪ್ರಶ್ನೆಗೆ ಜಿಲ್ಲಾ ವೈದ್ಯಾಧಿಕಾರಿಗಳು ಉತ್ತರಿಸಿ ಹೌದು ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳು ಕಂಡು ಬಂದಿವೆ ಎಂದು ಮಾಹಿತಿಯನ್ನು ನೀಡಿದ್ದಾರೆ ಅಲ್ಲದೆ ಅವರಿಗೆ ಚಿಕಿತ್ಸೆ ಯನ್ನು ನೀಡಲಾಗುತ್ತದೆ ಎನ್ನುವುದನ್ನು ವಿವರಿಸಿದ್ದಾರೆ
ರಾಯಚೂರಿನಲ್ಲಿ ಯೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಮಾಹಿತಿ ನೀಡುವಾಗ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ಮಾತನಾಡಿ ಇಬ್ಬರನ್ನು ಹೈದರಾಬಾದ್ ಗೆ ಕಳುಗಿಸಲಾಗಿದೆ ಇನ್ನು ಇಬ್ಬರು ಮಣಿಪಾಲ್ ಆಸ್ಪತ್ರೆ ಗೆ ಕಳುಹಿಸಲಾಗಿದೆ ಎಂದು ವಿವರಿಸಿದರು
ಮೆಲ್ಲಗೆ ಬ್ಲಾಕ್ ಫಂಗಸ್ ಕಾಲಿಡುತಿದ್ದು ಜನತೆ ಆದಷ್ಟು ಜಾಗೃತಿ ವಹಿಸುವುದು ಅಷ್ಟೆ ಅಗತ್ಯವಾಗಿದೆ ತಾಗುವುದಕ್ಕೆ ಮುನ್ನ ಭಾಗುವುದೆ ಲೇಸು ಎನ್ನುವಂತೆ ಬಾರದಂತೆ ನೋಡಿಕೊಳುವುದರಲ್ಲಿಯೆ ಹೆಚ್ಚು ಸೂಕ್ತವಲ್ಲವೆ..?
Be the first to comment