ದೇವನಹಳ್ಳಿ: ಸೋಂಕಿತರಿಗೆ ಉಚಿತ ಊಟದ ವ್ಯವಸ್ಥೆ: ಬಿಜೆಪಿ ಮುಖಂಡ ಎ.ಕೆ.ಪಿ.ನಾಗೇಶ್…!

ವರದಿ: ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು

ಬೆಂಗಳೂರು ಗ್ರಾಮೀಣ(ದೇವನಹಳ್ಳಿ): 

CHETAN KENDULI

ದೇವನಹಳ್ಳಿ ಪಟ್ಟಣದ ಗಾರೆರವಿ ಲೇಔಟ್ ನಲ್ಲಿರುವ ಬಿಜೆಪಿ ಮುಖಂಡ ಎ.ಕೆ.ಪಿ.ನಾಗೇಶ್ ರವರ ನಿವಾಸದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರಿಗೆ ಸಂಜೆ ಲಘು ಉಪಾಹಾರ ಮತ್ತು ಆಸ್ಪತ್ರೆಯ ಹೊರಗಡೆ ಇರುವ ರೋಗಿಗಳ ಸಂಭಂದಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲು ಇಂದು ಚಾಲನೆ ನೀಡಲಾಯಿತು.

ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್ ಖರೀದಿಸಲು ಚೆಕ್ ಮೂಲಕ ಹಣ ನೀಡಲು ಹೋದ ವೇಳೆ ಅಲ್ಲಿನ ಸ್ಥಿತಿಗತಿಗಳನ್ನು ಗಮನಿಸಿ ನಂತರ ಮನೆಯಲ್ಲಿ ಚರ್ಚಿಸಿದಾಗ ನಮ್ಮ ತಂದೆಯವರಾದ ಎ.ಕೃಷ್ಣಪ್ಪನವರು ಮತ್ತು ಮಾರ್ಗದರ್ಶಕರಾದ ಸತೀಶ್ ಪೈ ರವರ ಊಟ ನೀಡುವ ಸಲಹೆ ನೀಡಿದ್ದರಿಂದ ಇಂದಿನಿಂದ ಲಾಕ್ ಡೌನ್ ಮುಗಿಯುವವರೆಗೆ ಕೊರೋನಾ ಸೊಂಕಿತರಿಗೆ ಸಂಜೆ ಕಷಾಯ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಆಸ್ಪತ್ರೆಯ ಆವರಣದಲ್ಲಿರುವ ರೋಗಿಗಳ ಸಂಬಂಧಿಕರಿಗೆ ಇಂದಿನಿಂದ ಮದ್ಯಾಹ್ನದ ಊಟ ನೀಡಲು ಪ್ರಾರಂಭಿಸಿದ್ದೇವೆ. ಜನರು ಕಷ್ಟದಲ್ಲಿದ್ದಾಗ ಅವರ ಜೊತೆಯಲ್ಲಿ ನಿಂತು ಧೈರ್ಯ ಹೇಳಬೇಕು ಪ್ರಪಂಚವನ್ನೆ ತಲ್ಲಣಗೊಳಿಸಿ ಜನರ ಎದೆಯಲ್ಲಿ ನಡುಕ ಹುಟ್ಟಿಸಿದ ಮಹಾಮಾರಿ ಕೋವಿಡ್ ಆದಷ್ಟು ಬೇಗ ನಿರ್ನಾಮವಾಗಿ ಜನಜೀವನ ಮಾಮೂಲಿನಂತೆ ಆಗಲಿ ಎಂದು ಹಾರೈಸುತ್ತೇನೆ ಮತ್ತು ಸರ್ಕಾರದ ಸೂಚನೆಗಳನ್ನು ಜನತೆ ಪಾಲಿಸಬೇಕು ಆಗ ಮಾತ್ರ ಸೊಂಕಿತರ ಸಂಖ್ಯೆ ಇಳಿಮುಖವಾಗಲು ಸಾಧ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಕ್ಕೆ ಕೊರತೆಯಾದರೆ ನಮ್ಮನ್ನು ಸಂಪರ್ಕಿಸಿದರೆ ಅದರ ವ್ಯವಸ್ಥೆ ಮಾಡಿಸುವುದಾಗಿ ತಿಳಿಸಿದ್ದೇವೆ ಜೊತೆಯಲ್ಲಿ ಇವೆಲ್ಲಾ ಅನುಕೂಲಗಳು ನಮ್ಮ ತಾಲ್ಲೂಕಿನ ಜನತೆಗೆ ದೊರೆಯಲಿ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಖಜಾಂಚಿ ಎ.ಕೆ.ಪಿ.ನಾಗೇಶ್ ಆಶಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶ್ರೇಯಸ್, ಗಣೇಶ್ ಬಾಬು, ಮಧು ಇನ್ನು ಹಲವರು ಇದ್ದರು.

Be the first to comment

Leave a Reply

Your email address will not be published.


*