ಜಿಲ್ಲಾ ಸುದ್ದಿಗಳು
ವಿಜಯನಗರ:
ಜಿಲ್ಲೆಯ ಕೂಡ್ಲಿಗಿ ತಾಲೂಕು ಖಾಹೊಸಹಳ್ಳಿ,ಅತಿಹೆಚ್ಚು ವ್ಯವಹಾರ ವಹಿವಾಟು ಜರುಗುವ ಹೋಬಳಿ ಕೇಂದ್ರವೆನಿಸಿದೆ.ಆದರೆ ಸ್ಥಳೀಯ ಆಡಳಿತ ಮಾತ್ರ ಸಾರ್ವಜನಿಕರಿಗೆ ಕನಿಷ್ಠ ಸೌಕರ್ಯಗಳನ್ನು ಒದಗಿಸಿಲ್ಲ, ಪರಿಣಾಮ ಬೇರೆಡೆಯಿಂದ ಬಂದಿರುವ ಗ್ರಾಮಸ್ಥರು ತಮ್ಮ ಪ್ರಕೃತಿ ತುರ್ತು ಕರೆಗಳನ್ನ ನಿರ್ವಹಿಸುವಂತಾಗಿದೆ.
ಸ್ಥಳೀಯ ಆಡಳಿತದ ನಾಚಿಕೆಗೇಡಿ ಹಾಗೂ ಹೊಣೆಗೆಡಿತನಕ್ಕೆ ಮತ್ತೊಂದು ಸಾಕ್ಷಿ ಬೇಕಾ.!? ಎನ್ನುತ್ತಾರೆ ಪ್ರಜ್ಞಾವಂತರು, ವಾಣಿಜ್ಯಮಳಿಗೆಗೆಗಳಿಂದ ಹಾಗೂ ವ್ಯವಹಾರ ಕೇಂದ್ರಗಳಿಂದ ಸಾರ್ವಜನಿಕರಿಂದ,ಕರ ವಸೂಲಿ ಮಾಡೋ ಸ್ಥಳೀಯ ಆಡಳಿತ ಅದೇ ಸಾರ್ವಜನಿಕರಿಗೆ ಕನಿಷ್ಠ ಸೌಕರ್ಯಗಳನ್ನ ಒದಗಿಸುತ್ತಿಲ್ಲ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಕರ್ಥವ್ಯ ನಿಷ್ಠೆ ಹಾಗೂ ಜನ ಪ್ರತಿನಿಧಿಗಳ ಜನಪರ ಕಾಳಜಿ ಮೆಚ್ಚಬೇಕಾದ್ದೆ.!? ಎಲ್ಲೆಂದರಲ್ಲಿ ಕಂಡ ಕಂಡ ಸಂದು ಗೊಂದುಗಳಲ್ಲಿ ಸಾರ್ವಜನಿಕರು ತಮ್ಮ ಪ್ರಕೃತಿ ಕರೆಗಾಗಿ ಅಗತ್ಯ ಸ್ಥಳಕ್ಕಾಗಿ ಪರದಾಡುವಂತಾಗಿದೆ, ಮಹಿಳೆಯರ ಪಾಡು ಹೇಳತೀರದಾಗಿದೆ ಮಹಿಳಾ ಜನಪ್ರತಿನಿಧಿಗಳಿಗೆ ಇದರ ಕನಿಷ್ಠ ಪರಿಕಲ್ಪನೆ ಇಲ್ಲವೇ.!?
ಜಿಲ್ಲಾಪಂಚಾಯ್ತಿ ತಾಲೂಕು ಪಂಚಾಯ್ತಿ ಗ್ರಾಮಂ ಪಂಚಾಯ್ತಿಗಳಲ್ಲಿನ ಮಹಿಳಾ ಜನಪ್ರತಿನಿಧಿಗಳಿಗೆ,ಗ್ರಾಮಗಳಿಂದ ಬರುವ ಗ್ರಾಮೀಣ ಮಹಿಳೆಯರ ಅನುಸಂಕಟ ಅರ್ಥಮಾಡಿಕೊಳ್ಳಲಾಗದಷ್ಟು ಕಠೋರವಂತರಾಗಿದ್ದಾರಾ..ಆ ದೇವರೇ ಬಲ್ಲ.
ಖಾನಾಹೊಸಹಳ್ಳಿ ಗ್ರಾಮದ ಉಜ್ಜಿನಿ ರಸ್ತೆಯಲ್ಲಿ ಇರುವ ಖಾಲಿ ಜಾಗ ಸದ್ಯ ಬಯಲು ಶೌಚದಂತಹ ದುಸ್ತಿಯಲ್ಲಿದೆ,ಇಲ್ಲಿ ಸಾರ್ವಜನಿಕರು ತ್ಯಾಜ್ಯ ವಸ್ತುಗಳನ್ನ ಹಾಗೂ ಪೇಪರ್ ಪ್ಲಾಸ್ಟಿಕ್ ಗಳನ್ನು ಗುಡ್ಡೆ ಹಾಕಿದ್ದಾರೆ. ಬಹುತೇಕರು ಇಲ್ಲಿಯೇ ತಮ್ಮ ಪ್ರಕೃತಿ ಕರೆಗಳ ನಿರ್ವಹಣೆ ಮಾಡುತ್ತಿದ್ದಾರೆ, ಪರಿಣಾಮ ಸುತ್ತ ಮುತ್ತ ದುರ್ವಾಸನೆ ಹರಡಿದ್ದು ನೆರೆ ಹೊರೆಯ ವಾಸಿಗಳು ನಿತ್ಯ ನರಕ ಅನಿಭವಿಸುವಂತಾಗಿದೆ.ಹೊಂದುಕೊಂಡಿರುವ ಅಂಗಡಿ ವ್ಯಾಪಾರಿ ಕೇಂದ್ರದಲ್ಲಿರುವವರು ಸಾಂಕ್ರಮಿಕ ರೋಗಗಳಿಗೆ ತುತ್ತಾಗಿದ್ದಾರೆ. ಖಾನಾಹೊಸಹಳ್ಳಿಯ ಪ್ರಮುಖ ಬೀದಿ ಬದಿಯ ಖಾಲಿ ನಿವೇಶನಗಳು ಬಯಲು ಶೌಚಗಳಾಗಿದ್ದು ಸಾಂಕ್ರಾಮಿಕ ರೋಗ ಹರಡುವ ತಾಣಗಳಾಗಿವೆ.
ಕಾರಣ ಸಂಬಂಧಿಸಿದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪರಿಶೀಲಿಸಿ ನೈರ್ಮಲ್ಯತೆ ಕಾಪಾಡಬೇಕಿದೆ, ಪ್ರಮುಖ ಬೀದಿ ಬದಿಯ ಖಾಲಿ ನಿವೇಶನಗಳಲ್ಲಿಯ ಘನತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಬೇಕಿದೆ. ಖಾನಹೊಸಹಳ್ಳಿ ಗ್ರಾಮವು ಹೋಬಳಿ ಕೇಂದ್ರವಾಗಿದ್ದು,ಈ ಕೇಂದ್ರಕ್ಕೆ ಸಂಬಂಧಪಟ್ಟ ಎಲ್ಲಾ ಹಳ್ಳಿಯ ಜನರು ನಾಡಕಚೇರಿಗೆ ಸಾವಿರಾರು ಸಂಖ್ಯೆಯಲ್ಲಿ ಕೆಲಸದ ನಿಮಿತ್ಯ ಬಂದು ಹೋಗುತ್ತಾರೆ. ಬ್ಯಾಂಕುಗಳಿಗೆ,ಕಿರಾಣಿ ಅಂಗಡಿಗಳಿಗೆ,ತರಕಾರಿಗಳಿಗೆ,ಇನ್ನು ಮುಂತಾದ ಸಾಮಗ್ರಿಗಳನ್ನು ಕೊಳ್ಳಲು ಖಾನಾಹೊಸಹಳ್ಳಿಯ ಗ್ರಾಮಕ್ಕೆ ಸುಮಾರು ಜನ ಬಂದು ಹೋಗುತ್ತಿದ್ದಾರೆ.ಹೀಗಿದ್ದೂ ಪ್ರಮುಖವಾಗಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ, ಇದರಿಂದ ಹಳ್ಳಿಗಳಿಂದ ಬಂದ ಮಹಿಳೆಯರಿಗೆ ಹಾಗೂ ಪುರುಷರಿಗೆ, ಸಾರ್ವಜನಿಕರಿಗೆ ಬಹಳ ತೊಂದರೆ ಯಾಗಿರುತ್ತದೆ.ಕಾರಣ ಖಾನಾ ಹೊಸಹಳ್ಳಿ ಗ್ರಾಮದ ಮಧ್ಯಭಾಗದ ಸಾರ್ವಜನಿಕ ಸ್ಥಳದಲ್ಲಿ,ಶೀಘ್ರವೇ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡಿ ಕೊಡಬೇಕಾಗಿದೆ ಎಂದು ದಲಿತ ಮುಖಂಡರಾದ ಟಿ.ಗಂಗಾಧರ ಬಸವರಾಜ ದಲಿತ ಮುಖಂಡ ಹಾಗೂ ಪತ್ರಕರ್ತರಾದ ಸಿದ್ದಾಪುರದ ಡಿ.ಎಂ.ಈಶ್ವರಪ್ಪ,ತುಂಬರಗುದ್ದಿ ದುರುಗೇಶ,ಕಾನಾಮಡಗು ದುರ್ಗೇಶ,ಹೇಮಂತಕುಮಾರ್ ಈ ಮೂಲಕ ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ವಿವಿದ ಗ್ರಾಮಗಳ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಇದ್ದರು.
Be the first to comment