ಎಚ್ಚೆತ್ತ ಜನತೆ : ಲಸಿಕೆ ಹಾಕಿಸಿಕೊಳ್ಳಲು ಜಿಲ್ಲಾ ಆಸ್ಪತ್ರೆಗೆ ಲಗ್ಗೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :

ಕಳೆದ ಹಲವಾರು ದಿನಗಳಿಂದ ಕರೆದರೂ ಬಾರದ ಸಾರ್ವಜನಿಕರು ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಈಗಾಗಲೇ 6 ಸಾವಿರಕ್ಕಿಂತ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ಕಳೆದ ಹಲವಾರು ದಿನಗಳಿಂದ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ರತಿದಿನ 200 ಕ್ಕಿಂತಲೂ ಹೆಚ್ಚು ಜನರು ಜಿಲ್ಲಾ ಆಸ್ಪತ್ರೆಗೆ ಲಗ್ಗೆ ಇಡುತ್ತಿದ್ದಾರೆ.
ಜಿಲ್ಲೆಯಲ್ಲಿ ಕೋವಿಶಿಲ್ಡ್, ಕೋವ್ಯಾಕ್ಸಿನ ಲಸಿಕೆಗಳನ್ನು ಹಾಕಲಾಗುತ್ತಿದೆ. ಜನೇವರಿ 16 ರಿಂದ ಲಸಿಕೆ ಆಂದೋಲನ ಆರಂಭವಾಗಿದ್ದು, ಆಗ ಜನರಲ್ಲಿ ಹಿಂಜರಿಕೆ ಕಂಡು ಬಂದ್ದಿತ್ತು, ಈಗ ಜನರು ಎಚ್ಚೆತ್ತುಕೊಂಡಿದ್ದಾರೆ.ನಗರದ ಜಿಲ್ಲಾ ಆಸ್ಪತ್ರೆಯಲ್ಲಿ 2 ಬೂತಗಳು ಮತ್ತು ನಗರದ 50 ಹಾಸಿಗೆಯ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿದೆ.

ಸಾರ್ವಜನಿಕರು ಲಸಿಕೆ ಪಡೆದುಕೊಳ್ಳಲು ನೊಂದಣಿಗೆ ಆಧಾರ ಕಾರ್ಡ, ಮೊಬೈಲ್ ತರಬೇಕು, ಒಂದು ವಾಯಿಲ್ ಲಸಿಗೆಯಲ್ಲಿ 10 ಜನರಿಗೆ ನೀಡಲಾಗುತ್ತಿದೆ. ಹಾಗಾಗಿ 10 ಜನರಿಗೆ ಒಮ್ಮೆಯೇ ಲಸಿಕೆ ಕೊಡಲಾಗುವುದು. ಇಲ್ಲವಾದಲ್ಲಿ ಉಳಿದ ಲಸಿಕೆಗಳು ಹಾಳಾಗುತ್ತದೆ. ಕೆಲ ಸಾರ್ವಜನಿಕರು ಗಡಿಬಿಡಿ, ಅಸಹಕಾರ ತೋರಿಸುತ್ತಿದ್ದಾರೆ. ಸಂಜೆ ವೇಳೆ ಇಬ್ಬರು ಬಂದು ಲಸಿಕೆ ಹಾಕಲೇಬೇಕು ಎಂದು ಗದ್ದಲ ಮಾಡುತ್ತಿದ್ದಾರೆ ಎಂದು ಲಸಿಕೆ ಹಾಕುತ್ತಿರುವ ನರ್ಸಿಂಗ ಅಧಿಕಾರಿ ಅಶೋಕ ಕೋಟಿ, ವೈದ್ಯರಾದ ಡಾ.ವಿಶಾಲಾಕ್ಷಿ ಪಾಟೀಲ ಹೇಳುತ್ತಾರೆ.ಹಾಗಾಗಿ ಸಾರ್ವಜನಿಕರ ಗದ್ದಲ ಬೈಗುಳಗಳ ನಡುವೆಯೂ ಆರೋಗ್ಯ ಕಾರ್ಯಕರ್ತರು ಶಾಂತರೀತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಈ ಹಿಂದೆ ಲಸಿಕೆ ನೀಡಲು ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿರುವ ಜನರನ್ನು ಆಸ್ಪತ್ರೆಗೆ ಕರೆತರುವ ಕೆಲಸ ಮಾಡಿದ್ದಾರೆ. ಕೆಲವೊಂದು ಏರಿಯಾಗಳಿಗೆ ಹೋಗಿ ಅಲ್ಲಿಯೇ ಲಸಿಕೆ ನೀಡುವ ಕಾರ್ಯ ಮಾಡಿದ್ದಾರೆ.

Be the first to comment

Leave a Reply

Your email address will not be published.


*