ಕೊವಿಡ್-19 ಎರಡನೇ ಅಲೆ ತಡೆಗೆ ಕೈಗೊಳ್ಳ ಬಹುದಾದ ಮುಂಜಾಗ್ರತಾ ಕ್ರಮಗಳ ಸಭೆ: ಪ.ಪಂ ಕಮತಗಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೊಟೆ:

ಮಾರಕ ಕೊರೊನಾ ವೈರಸ್ ಎರಡನೇ ಅಲೆಗೆ ರಾಜ್ಯ ತತ್ತರಿಸಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನು ಕಂಡು ಜನತೆ ಬೆಚ್ಚಿ ಬೀಳುವಂತಾಗಿದೆ.ಇಂಥಹ ಮಹಾಮಾರಿ ಕಮತಗಿ ಪಟ್ಟಣದಲ್ಲಿ ಹರಡುವುದನ್ನು ತಡೆಗಟ್ಟಲು ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಇಂದು ಕಮತಗಿ ಪಟ್ಟಣ ಪಂಚಾಯತಿಯಲ್ಲಿ ಸಭೆ ಜರುಗಿತು.

ಹೆಚ್ಚಿನ ಜನಸಂಖ್ಯೆ ಹೊಂದಿದ ನಮ್ಮ ಕಮತಗಿ ಪಟ್ಟಣವು ಈ ಮಹಾಮಾರಿಯಿಂದ ದೂರ ಉಳಿಯಲು ನಾವು ಸರ್ಕಾರದ ನೀತಿ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಕಮತಗಿ ಪಟ್ಟಣ ಪಂಚಾಯತಿಯ ಅದಿಕಾರಿಯಾದ ಪ್ರಭು ಹುಲಿಮನಿಗೌಡರ ತಿಳಿಸಿದರು.ಅದರಂತೆ ಬೇರೆ ಜಿಲ್ಲೆಯಿಂದ ಬಂದವರನ್ನು ಪತ್ತೆ ಹಚ್ಚಿ ಅವರ ಮನೆ ಮನೆ ಸಮೀಕ್ಷೆ ಕಾರ್ಯ ಕೈಗೊಂಡು ಅವರಿಗಾಗಿ ಪ್ರತ್ಯೇಕ ವಹಿ ತಯಾರಿಸಿ ನಾಲ್ಕೈದು ದಿನಗಳವರೆಗೆ ಮನೆಯಲ್ಲೆ ಇರಲು ಸೂಚಿಸಿ ತದನಂತರದಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬರದಿದ್ದರೆ ಇತರರಂತೆ ಓಡಾಡಲು ಅವಕಾಶ ಕೊಡುವುದು ಎಂದು ಈ ಸಬೆಯನ್ನು ಉದ್ದೇಶಿಸಿ ಗ್ರಾಮ ಲೆಕ್ಕಾಧಿಕಾರಿಯಾದ ಧರ್ಮಣ್ಣ ಯತ್ನಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು,ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು,ಪಟ್ಟಣ ಪಂಚಾಯತಿಯ ಸಿಬ್ಬಂದಿಯವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*