ಕೂಡ್ಲಿಗಿ:ಅಧಿಕಾರಿಗಳಿಂದ ಬೀದಿ ಬೀದಿಗಳಲ್ಲಿ ಜನ ಜಾಗೃತಿ

ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜಿಲ್ಲಾ ಸುದ್ದಿಗಳು

ವಿಜಯನಗರ:

CHETAN KENDULI

ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ,ಮಾಸ್ಕ್ ಹಾಕದವರಿಗೆ ದಂಡ ಹಾಕೋ ಅಧಿಕಾರಿಗಳು ಬೀದಿ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.

ಮಾಸ್ಕ್ ಹಾಕಿಕೊಳ್ಳಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಜನತೆಗೆ ತಿಳಿಹೇಳಿ ಜಾಗೃತಿ ಮೂಡಿಸುವ ಕಾರ್ಯವನ್ನ, ತಹಶಿಲ್ದಾರರ ನೇತೃತ್ವದಲ್ಲಿ ಸಿಪಿಐ ವಸಂತ ಅಸೋದೆ ಹಾಗೂ ಪಿಎಸ್ಐ ಡಿ.ಸುರೇಶ ಇತರೆ ಪೊಲೀಸ್ ಅದೀಕಾರಿಗಳು ಮಾಡಿದರು.

ಕರೋನಾ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ, ಮಾಸ್ಕ್ ಧರಿಸಿ,ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ಆಗಾಗ್ಗೆ ಕೈತೊಳೆಯುವ ಮೂಲಕ ಇದರ ನಿಯಂತ್ರಣ ಸಾಧ್ಯವಾಗಲಿದೆ ಎಂದು ತಹಶಿಲ್ದಾರರು ಜನತೆಗೆ ತಿಳಿ ಹೇಳಿದರು. 

ಸರ್ಕಾರ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಓಡಾಡುವಂತೆ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮಾಹಿತಿ ತಿಳಿಸುತಿದ್ದು,ಜನರು ಸಾರ್ವಜನಿಕ ಸ್ಥಳದಲ್ಲಿ ಓಡಾಡುವಾಗ ತಪ್ಪದೆ ಮಾಸ್ಕ್ ಹಾಕಿಕೊಳ್ಳುವಂತೆ ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ ಬೀದಿಗಿಳಿದು ಅರಿವು ಮೂಡಿಸಿದರು.

ಸಿಪಿಐ ವಸಂತ ವಿ ಅಸೋದೆ ಮತ್ತು ಮಾತನಾಡಿ,ಸರ್ಕಾರವು ಕೋವಿಡ್ ನಿಯಮ ಪಾಲಿಸದ ಹಾಗೂ ಮಾಸ್ಕ್ ಹಾಕದೆ ಓಡಾಡುವವರಿಗೆ ದಂಡ ವಿಧಿಸುವುದು ಸ್ವಾರ್ಥಕ್ಕಲ್ಲ. ಮಾಸ್ಕ್ ಹಾಕಿಕೊಂಡು ಓಡಾಡಿದರೆ ಕೊರೋನಾ ವೈರೆಸ್ ಗಳು ಹರಡದೆ ಉತ್ತಮ ಆರೋಗ್ಯ ಹೊಂದಬಹುದಾಗಿದೆ. ದಂಡ ಕಟ್ಟುವುದಕ್ಕಿಂದ ನಿಮ್ಮ ಆರೋಗ್ಯದ ಕಡೆ ಕಾಳಜಿವಹಿಸಿಕೊಂಡು ಮಾಸ್ಕ್ ಹಾಕಿಕೊಳ್ಳಿ,ನಿಯಮ ಪಾಲನೆಗೆ ಸರ್ಕಾರದ ಕಟ್ಟುನಿಟ್ಟಿನ ಕ್ರಮ ಜರುಗಿಸಿರುವುದು, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಎಂದು ಎಲ್ಲರೂ ಅರಿತುಕೊಳ್ಳಬೇಕು ಎಂದ ದರು. ಸಾರಿಗೆ ಸಂಸ್ಥೆ ಘಟಕದ ಸಂಚಾರಿ ನಿರೀಕ್ಷಕ ಉಮಾಮಹೇಶ, ಪ್ರೋಭೇಷನರಿ ಪಿಎಸ್ಐ ಮಣಿಕಂಠ ಹಾಗೂ ಕೂಡ್ಲಿಗಿ ಪೊಲೀಸ್ ಠಾಣಾ ಸಿಬ್ಬಂದಿ ಹಾಜರಿದ್ದರು.

 

Be the first to comment

Leave a Reply

Your email address will not be published.


*