ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಅವರಿಗೆ ಮಂಗಳವಾರ ಕೊವಿಡ್-19ರ ಸೋಂಕು ದೃಢಪಟ್ಟಿದ್ದು ಸದ್ಯಕ್ಕೆ ಶಾಸಕರು ಹೋ ಐಸೋಲೇಶನಲ್ಲಿದ್ದಾರೆ. ಇತ್ತಿಚಿಗಷ್ಟೇ ಕೊರೊನಾ ಲಸಿಕೆಯನ್ನು ಪಡೆದಿದ್ದ ಶಾಸಕರಿಗೆ ಸೋಂಕು ತಗುಲಿದ್ದು ಎಲ್ಲರಿಗೂ ಅಚ್ಚರಿಗೆ ಒಳಪಟ್ಟಿದ್ದಾರೆ.
ಹೌದು, ಕೊರೊನಾ ಮೊದಲನೇ ಅಲೇಯಲ್ಲಿ ಜನರ ಹಿತಕ್ಕಾಗಿ ಕೊರೊನಾ ಹೆಮ್ಮಾರಿಯಿಂದ ಹಿಂಜರಿಯದ ಶಾಸಕ ನಡಹಳ್ಳಿ ಅವರು ಮತಕ್ಷೇತ್ರ ಸೇರಿದಂತೆ ಗೊವಾ ರಾಜ್ಯಗಳಿಗೂ ತೆರಲಿ ಅಲ್ಲಿದ್ದ ಕ್ಷೇತ್ರದ ಜನರ ರಕ್ಷಣೆಗೆ ಮುಂದಾಗಿದ್ದಾಗಲೂ ಅಂಟಿಕೊಳ್ಳದ ಕೊರೊನಾ ಹೆಮ್ಮಾರಿ ಎರಡನೇ ಅಲೆಯಲ್ಲಿ ಸೋಂಕು ತಗುಲಿದೆ. ಮಂಗಳವಾರ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಗಂಟಲ ದ್ರವದ ಮಾದರಿ ಪರೀಕ್ಷೆಗೆ ಒಳ ಪಡಿಸಿದಾಗ ಸೋಂಕು ತಗುಲಿಕೆ ಬಗ್ಗೆ ದೃಢಪಟ್ಟಿದೆ.
ತಂದೆಗೂ ಕೊರೊನಾ ಪಾಜಿಟಿವ್:
ಇದಲ್ಲದೇ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ತಂದೆ ಸಂಗನಗೌಡ ಪಾಟೀಲ ಅವರ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೂ ಸೋಂಕು ತಗುಲಿದ್ದು ಬೆಳಕಿಗೆ ಬಂದಿದೆ. ಆದರೆ ರೋಗದ ಲಕ್ಷಣಗಳು ಇಲ್ಲದ ಕಾರಣ ಅವರನ್ನೂ ಆರೋಗ್ಯ ಇಲಾಖೆ ಅಧಿಕಾರಿಗಳು ಹೋಂ ಐಸೋಲೇಶನಗೆ ಒಳಪಡಿಸಿದ್ದಾರೆ.
ಮಸ್ಕಿ ಕ್ಷೇತ್ರದಿಂದ ಬಂತಾ ಕೊರೊನಾ ಪಾಸಿಟಿವ್:
ಇತ್ತಿಚಿಗಷ್ಟೇ ನಡೆದ ಮಸ್ಕಿ ವಿಧಾನ ಸಭಾ ಕ್ಷೇತ್ರದ ಚುನಾವಣೆ ಪ್ರಚಾರವನ್ನು ಕೈಗೊಂಡ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಮಸ್ಕಿ ಕ್ಷೇತ್ರದಿಂದಲೇ ಕೊರೊನಾ ಪಾಸಿಟಿವ್ ಅಂಟಿಕೊಂಡಿತಾ ಎಂಬ ಪ್ರಶ್ನೆ ಕ್ಷೇತ್ರದ ಜನತೆಯಲ್ಲಿ ಮೂಡಿದೆ. ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಗೌಡ ಪಾಟೀಲ ಅವರಿಗೂ ಕೊರೊನಾ ಪಾಜಿಟಿವ್ ದೃಢಪಟ್ಟಿತ್ತು. ಇದರಿಂದಲೇ ಶಾಸಕ ನಡಹಳ್ಳಿ ಅವರಿಗೂ ಸೋಂಕು ಅಂಟಿಕೊಂಡಿತಾ ಎನ್ನುವುದು ಸ್ಥಳೀಯ ಜನರ ಪ್ರಶ್ನೆಯಾಗಿದೆ.
ಶಾಸಕರ ಮನವಿ:
ಕಳೆದ 4-5 ದಿನಗಳಲ್ಲಿ ತಮ್ಮ ಸಂಪರ್ಕದಲ್ಲಿ ಬಂದವರೆಲ್ಲರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವುದರ ಜೊತೆಗೆ ಸ್ವಯಂ ಪ್ರೇರಿತ ಹೋಂ ಐಸೋಲೇಶನ್‌ಗೆ ಒಳಗಾಗಬೇಕು. ಸಾರ್ವಜನಿಕರು ಆದಷ್ಟು ಮನೆಯಲ್ಲೇ ಇರುವುದು ಒಳ್ಳೇಯದು. ಹೊರಗೆ ಬಂದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಆಗಾಗ ಹ್ಯಾಂಡ್ ಸ್ಯಾನಿಟೈಜ್ ಮಾಡಿಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸಂಪೂರ್ಣ ನೆಗೆಟಿವ್ ವರದಿ ಬರುವತನಕ 15 ದಿನಗಳ ಕಾಲ ಯಾರನ್ನೂ ಭೇಟಿ ಮಾಡದಿರಲು ಶಾಸಕರು ನಿರ್ಧರಿಸಿದ್ದು ಅವರ ಗೃಹ ಕಚೇರಿ ಸಂಪೂರ್ಣ ಬಂದ್ ಆಗಲಿದೆ ಎಂದು ತಿಳಿದು ಬಂದಿದೆ.
Be the first to comment