ಗುರು ಮಂಟೇಶ್ವರ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗಾಗಿ ವಿಷಯ ಸಂಪನ್ಮೂಲ ಶಿಕ್ಷಕರಿಂದ ವಿಶೇಷ ಪಾಠ ಬೋಧನೆ:ಮಕ್ಕಳಿಗೆ ಖುಷಿಕೊಟ್ಟ ಈ ಯೋಜನೆ.

ವರದಿ: ಶರಣಪ್ಪ ಬಾಗಲಕೋಟೆ

ಬಾಗಲಕೋಟೆ:ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆ ಕೆಲೂರನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಎಸ್.ಎಸ್.ಎಲ್.ಸಿ ಮಕ್ಕಳಿಗಾಗಿ ಪ್ರತಿ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವನಿಸಿ ಮಕ್ಕಳಿಗೆ ಜ್ಞಾನ ದಾಸೋಹ ಉಣಬಡಿಸಲಾಯಿತು. ಇಂದು ಇಂಗ್ಲಿಷ್ ವಿಷಯದೊಂದಿಗೆ ಇದರ ಸಮಾರೋಪ ಸಮಾರಂಭ ಮಾಡಲಾಯಿತು.

ಎಪ್ರಿಲ್ 05 ರಂದು SSLC ಮಕ್ಕಳಿಗಾಗಿ ವ್ಯಾಖ್ಯಾನಮಾಲೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಸಮಾಜ ವಿಜ್ಞಾನ ವಿಷಯದಲ್ಲಿ ‘ಆಶಾ ಕಿರಣ’ ಎಂಬ ಸಾಹಿತ್ಯವನ್ನು ಹುನಗುಂದ ಇಲಕಲ್ಲ ತಾಲೂಕಿನ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಯಾದ ಸಿದ್ದು ಪಾಟೀಲ್ ರಿಂದ ಬಿಡುಗಡೆ ಮಾಡಲಾಯಿತು.

ಕನ್ನಡ ವಿಷಯಕ್ಕೆ ಶಿಕ್ಷಕರಾದ ಮಲ್ಲು ಮನಹಳ್ಳಿ,ಹಿಂದಿ ವಿಷಯಕ್ಕೆ ಮಹಮ್ಮದ ಇರ್ಫಾನ ಕಲ್ಬುರ್ಗಿ,ಗಣಿತ ವಿಷಯಕ್ಕೆ ಪಿ.ಬಿ.ಪಾಟೀಲ್, ವಿಜ್ಞಾನ ವಿಷಯಕ್ಕೆ ರಾಘವೇಂದ್ರ ಬಡಿಗೇರ, ಸಮಾಜ ವಿಜ್ಞಾನ ವಿಷಯಕ್ಕೆ ಬಿ.ಡಿ.ನದಾಫ್, ಇಂಗ್ಲಿಷ್ ವಿಷಯಕ್ಕೆ ಮೊಹನ ದೇಶಪಾಂಡೆ ಹೀಗೆ ಆರು ವಿಷಯದಲ್ಲಿ ಪರಿಣಿತರನ್ನ ಆಹ್ವಾನಿಸಿ ಮಕ್ಕಳ ಕಲಿಕೆ ಸರಳವಾಗುವಂತೆ ಅವಕಾಶ ಕಲ್ಪಿಸಲಾಯಿತು.

ಸಮಾರೋಪ ಸಮಾರಂಭದ ಅತಿಥಿಗಳಾಗಿ ಆಗಮಿಸಿದ ಶ್ರೀ ಮೊಹನ ದೇಶಪಾಂಡೆಯವರು ಮಕ್ಕಳನ್ನು ಕುರಿತು ನಾನು ನೆಪ ಮಾತ್ರ ಪ್ರಮುಖವಾಗಿ ಈ ಶಾಲೆಯಲ್ಲಿರುವ ಪ್ರತಿಯೊಬ್ಬ ಶಿಕ್ಷಕರು ಪ್ರತಿ ನಿತ್ಯ ಜ್ಞಾನದ ದಾಸೋಹ ಬಡಿಸುತ್ತಿರುತ್ತಾರೆ ಅದರಿಂದ ನೀವು ನಿಮ್ಮ ಭವಿಷ್ಯದ ಬುತ್ತಿಯನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಕಾಂತ ದಾಸರ ಮಕ್ಕಳಿಗೆ ನಾವು ವರ್ಷದುದ್ದಕ್ಕೂ ಕಲಿಸಿದ ಕಲಿಕೆ ಇನ್ನು ಸುಲಭವಾಗಬೇಕಾದರೆ ಇಂತಹ ಕಾರ್ಯಕ್ರಮ ನಿರಂತರವಾಗಿ ಸಾಗಬೇಕು ಎಂದರು.
ಶಿಕ್ಷಕರಾದ ಎಸ್.ಬಿ.ಯಾವಗಲ್ಲಮಠ ನಿರೂಪಿಸಿದರು, ಎಸ್.ಬಿ.ಹೆಳವರ ಸ್ವಾಗತಿಸಿದರು, ವಾಯ್.ಎಸ್.ವಾಲಿಕಾರ ವಂದಿಸಿದರು ಸಿದ್ದರಾಜ ಕೆಂದುಳ್ಳಿ,ಬಿ.ಎಸ್.ಕಮತರ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*