ಪ್ರೌಢಶಾಲಾ ಶಿಕ್ಷಕರ ರಜಾ ಅವಧಿಯನ್ನು ಪರಿಶೀಲಿಸಲು ಶಿಕ್ಷಣ ಸಚಿವರಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಒತ್ತಾಯ.

ರಾಜ್ಯ ಸುದ್ದಿಗಳು

ಬೆಂಗಳೂರು:ಪ್ರೌಢ ಶಾಲಾ ಶಿಕ್ಷಕರಿಗೆ ದಿನಾಂಕ: 15-06-2021 ರಿಂದ 14-07-2021 ರವರೆಗೆ ಬೇಸಿಗೆ ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಇಂದು ಆದೇಶ ಹೊರಡಿಸಿದೆ.

ಈ ಮಧ್ಯದಲ್ಲಿ 21-06-2021ರಿಂದ 05-07-2021ರ ವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯುತ್ತಿದ್ದು ತದನಂತರದಲ್ಲಿ ಮೌಲ್ಯಮಾಪನ ಕಾರ್ಯ ನಡೆಯುತ್ತದೆ.ಅಂದರೆ ರಜೆ ಎಂದು ಘೋಷಿಸಿರುವ ಅವಧಿಯಲ್ಲಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯದಲ್ಲಿಯೇ ಕಳೆಯುತ್ತದೆ. ಆದಕಾರಣ ಪ್ರೌಢಶಾಲಾ ಶಿಕ್ಷಕರ ರಜಾ ಅವಧಿಯನ್ನು ಪರಿಶೀಲಿಸಬೇಕೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಶಿಕ್ಷಣ ಸಚಿವರಾದ ಸುರೇಶ ಕುಮಾರಾವರಿಗೆ ಒತ್ತಾಯಿಸಿದೆ.

Be the first to comment

Leave a Reply

Your email address will not be published.


*