BIG BREAKING NEWS : ಪರೀಕ್ಷೆ ಇಲ್ಲದೆ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪಾಸ್: ಮೇ-1 ರಿಂದ ಬೇಸಿಗೆ ರಜೆ ಘೋಷಣೆ :ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ.

ರಾಜ್ಯ ಸುದ್ದಿಗಳು

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ 1 ರಿಂದ 9ನೇ ತರಗತಿ ಪರೀಕ್ಷೆ ನಡೆಸೋದು ಕಷ್ಟ ಎಂಬುದಾಗಿ ತಜ್ಞರು ಅಭಿಪ್ರಯಾ ಪಟ್ಟ ಹಿನ್ನಲೆಯಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆ, 1 ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡುವುದಾಗಿ ತಿಳಿಸಿ ಆದೇಶಿಸಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಅಬ್ಬರ ಹೆಚ್ಚಾಗುತ್ತಿದೆ. ಇದರ ನಡುವೆ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಸೋಂಕು ತಗುಲುವು ಭೀತಿ ಹೆಚ್ಚಿದೆ. ತಜ್ಞರು ಕೂಡ ಇದನ್ನೇ ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ರಾಜ್ಯದಲ್ಲಿನ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೇ ಈ ವರ್ಷ ಪಾಸ್ ಮಾಡಲಾಗುತ್ತಿದೆ ಎಂಬುದಾಗಿ ತಿಳಿಸಿದೆ.

2020-21 ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22 ಶೈಕ್ಷಣಿಕ ಅವಧಿ ನಿಗದಿ ಕುರಿತು

ಪ್ರಾಥಮಿಕ ಶಾಲೆಗಳಿಗೆ
1 ರಿಂದ 7/8 ತರಗತಿ ಇರುವ ಶಾಲೆಗಳಿಗೆ 01-05-2021 ರಿಂದ 14-06-2021 ರ ವರೆಗೆ ಬೇಸಿಗೆ ರಜೆ.15-06-2021 ರಿಂದ ಶೈಕ್ಷಣಿಕ ಅವಧಿ ಪ್ರಾರಂಭ

ಪ್ರೌಢ ಶಾಲೆಗಳಿಗೆ
8 ಮತ್ತು 9 ನೇ ತರಗತಿ ಹೊಂದಿರುವ ಪ್ರೌಡಶಾಲೆಗಳಿಗೆ 01-05-2021 ರಿಂದ 14-07-2021 ರವರಿಗೆ ಬೇಸಿಗೆ ರಜೆ.ಪ್ರೌಢಶಾಲಾ ಶಿಕ್ಷಕರಿಗೆ 15-06-2021 ರಿಂದ 14-07-2021 ರವರಿಗೆ ಬೇಸಿಗೆ ರಜೆ.21-06-2021 ರಿಂದ 05-07-2021 ರವರಿಗೆ SSLC ಪರೀಕ್ಷೆಗಳು ನಡೆಯಲಿದೆ.15-07-2021 ರಿಂದ 2021-22 ನೇ ಶೈಕ್ಷಣಿಕ ವರ್ಷ ಪ್ರಾರಂಭ.

Be the first to comment

Leave a Reply

Your email address will not be published.


*