ಬಾಗಲಕೋಟೆ: ಹೊಸ ಮಾರ್ಗಸೂಚಿ ಕ್ರಮದಂತೆ ಮದುವೆಗೆ 50 ಜನರಿಗೆ, ಅಂತ್ಯಕ್ರಿಯೆಗೆ 20 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಎಲ್ಲಾ ಇ ಕಾಮರ್ಸ್ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಸಿನಿಮಾ ಹಾಲ್, ಸ್ವಿಮ್ಮಿಂಗ್ ಫೂಲ್, ಮಾರ್ಕೆಟ್ ಬಂದ್ ಮಾಡಲಾಗುತ್ತಿದೆ. ಶಾಲಾ-ಕಾಲೇಜು ಮುಚ್ಚಲಾಗುತ್ತಿದೆ. ರಾತ್ರಿ ಪಾಳಿಯಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ.
ರಾತ್ರಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಸ್ ನಲ್ಲಿ ತೆರಳೋರು ಟಿಕೆಟ್ ತೋರಿಸಿ ಸಾಗಬೇಕು. ರಾಜ್ಯಾಧ್ಯಂತ ಧಾರ್ಮಿಕ ಕ್ಷೇತ್ರಗಳು ಬಂದ್ ಮಾಡಲಾಗುತ್ತಿದೆ. ಭಕ್ತರಿಗೆ ಅವಕಾಶವಿಲ್ಲ. ಸಲೂನ್, ಬ್ಯೂಟಿ ಪಾರ್ಲರ್ ಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ಜನರಿಗೆ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ.
ಇದಲ್ಲದೇ ಅಗತ್ಯ ಸೇವೆ ಒದಗಿಸುವಂತ ಸೇವೆಯ ಶಾಪ್ ಗಳು ಹೊರತಾಗಿ, ರಾಜ್ಯಾಧ್ಯಂತ ಇತರೆ ಶಾಪ್ ಗಳನ್ನು ಬಂದ್ ಮಾಡುವಂತೆ ಇದೀಗ ನೂತನ ಮಾರ್ಗಸೂಚಿ ಆದೇಶದಲ್ಲಿ ತಿಳಿಸಲಾಗಿದೆ. ಈ ಮೂಲಕ ನಿನ್ನೆಯಿಂದಲೇ ಅನ್ವಯವಾಗುವಂತೆ ಪರಿಷ್ಕೃತ ಮಾರ್ಗಸೂಚಿ ಆದೇಶದಲ್ಲಿ ಅಗತ್ಯಸೇವೆ ಹೊರತಾಗಿ ಉಳಿದ ಎಲ್ಲಾ ಶಾಪ್ ಬಂದ್ ಗೆ ಸೂಚಿಸಲಾಗಿದೆ. ಹೀಗಾಗಿ ಪೊಲೀಸರು ಫೀಲ್ಡಿಗೆ ಇಳಿದಿದ್ದು, ಅಗತ್ಯ ಸೇವೆ ಒದಗಿಸುವಂತೆ ಹಾಲು, ಇ-ಕಾಮರ್ಸ್ ಸೇರಿದಂತೆ ಇತರೆ ಶಾಪ್ ಹೊರತಾಗಿ, ಇತರೆ ಅಂಗಡಿ ಮುಂಗಟ್ಟುಗಳನ್ನು ಕ್ಲೋಸ್ ಮಾಡುತ್ತಿದ್ದಾರೆ.
ಈ ಲಾಕ್ ನಮಗಲ್ಲ ಅನ್ನೋ ರೀತಿಯಲ್ಲಿರುವ ಗ್ರಾಮೀಣ ಜನರು
ಜಿಲ್ಲೆಯಲ್ಲಿ ಇಂದು ಬಾಗಲಕೋಟೆ 45 ಬಾದಾಮಿ 8, ಜಮಖಂಡಿ 40, ಹುನಗುಂದ 23, ಮುಧೋಳ 15, ಬೀಳಗಿ 4 ಒಟ್ಟು 135 ಜನರಲ್ಲಿ ಸೋಂಕು ದೃಡಪರು,ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ತಡೆಗೆ ಏನೇ ಜನಜಾಗೃತಿ ಕಾರ್ಯಕ್ರಮ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ.ಕೊರೋನಾ ವೈರಸ್‌ನ ಪರಿಣಾಮ ಬಗ್ಗೆ ಎಷ್ಟು ಅರಿವು ಮೂಡಿಸಲಾಗುತ್ತಿದೆ. ರಾಜ್ಯದಲ್ಲೂ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೊರಗೆ ಬರಬೇಡಿ ಮನೆಯಲ್ಲೇ ಸುರಕ್ಷಿತವಾಗಿರಿ. ಹೊರಗೆ ಬಂದರೆ ಬದುಕು ದುಸ್ತರವಾಗಲಿದೆ ಎಂದರೂ ಗ್ರಾಮೀಣ ಭಾಗದ ಜನರು ಕೇಳುತ್ತಿಲ್ಲ.
Be the first to comment