ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಯರಝರಿ ಗ್ರಾಮದಲ್ಲಿ ಬುಧವಾರ ನಡೆಯಬೇಕಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನ ಚುನಾವಣೆಯು ಚುನಾವಣಾಧಿಕಾರಿ ಸಂತೋಷ ಇಲಕಲ್ಲ ಅವರು ಸಾರ್ವಜನಿಕವಾಗಿ ಯಾವುದೇ ಮಾಹಿತಿಯನ್ನು ನೀಡದೇ ಅಧ್ಯಕ್ಷ ಸ್ಥಾನದ ಚುನಾವನೆಯನ್ನು ಮುಂದೋಡಿಸಿದ ಘಟನೆ ಬೆಳಕಿಗೆ ಬಂದಿದೆ.
ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆ:
ಸಂಘದ ಒಟ್ಟು 11ಜನ ಸದಸ್ಯರಲ್ಲಿ ಸಾಹೇಬಪಟೇಲ ಪೀರಪಟೇಲ ಮೋಕಾಶಿ, ಬಸನಗೌಡ ಮಹಾಂತಗೌಡ ಪಾಟೀಲ, ಸಿದ್ದಪ್ಪ ಗುಂಡಪ್ಪ ಗೌಡರ, ಪರಮಣ್ಣ ಭೀಮಪ್ಪ ಹುಲ್ಲೂರ, ಸೋಮಶೇಖರ ಬಸವರಾಜ ದೇಶಮುಖ, ಮಹಾದೇವಿ ಅಶೋಕ ಪೂಜಾರಿ ಸೇರಿ 6 ಜನ ಚುನಾಯಿತ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರೀಯೆಯಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಸೋಮಶೇಖರ ಬಸವರಾಜ ದೇಶಮುಖ ಅವರೊಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಬೇಜವಾಬ್ದಾರಿತ ಕಾಲಹರಣ ಮಾಡಿದ ಚನಾವಣಾಧಿಕಾರಿ: ಮುದ್ದೇಬಿಹಾಳ ಪಿಕೆಪಿಎಸ್ ಬ್ಯಾಂಕನಲ್ಲಿ ವಿಶ್ರಾಂತಿ
ಪಿಕೆಪಿಎಸ್ ಬ್ಯಾಂಕ್ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದ ಸಂತೋಷ ಇಲಕಲ್ಲ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಕೊನೆಯ ಸಮಯದವರೆಗೂ ಕೇಂದ್ರ ಸ್ಥಾನದಲ್ಲಿದ್ದರು. ಆದರೆ ಏಕಾಏಕಿ ಮಧ್ಯಾಹ್ನ 1 ಗಂಟೆಗೆ ಕೇಂದ್ರ ಸ್ಥಾನದಿಂದ ಪಲಾಯನ ಬೆಳೆಸಿ ಮುದ್ದೇಬಿಹಾಳ ಎಪಿಎಂಸಿಯಲ್ಲಿನ ಪಿಕೆಪಿಎಸ್ ಬ್ಯಾಂಕನಲ್ಲಿ ವಿಶ್ರಾಂತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗೂ ಮಾಹಿತಿ ನೀಡದ ಅಧಿಕಾರಿ:
ಬುಧವಾರ ನಡೆದ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಗ್ರಾಮದ ಸೋಮಶೇಕರ ಬಸವರಾಜ ದೇಶಮುಖ ಅವರಿಗೂ ಚುನಾವಣೆಯ ಬಗ್ಗೆ ನಿಖರ ಮಾಹಿತಿ ನೀಡದ ಚುನಾವಣಾಧಿಕಾರಿಗಳು ಏಕಾಏಕಿ ಕೇಂದ್ರ ಸ್ಥಾನದಿಂದ ಹೊರ ನಡೆದಿದ್ದು ಎಲ್ಲರಿಗೂ ಅಚ್ಚರಿಯಾಗಿದೆ.
ನಿರಾಸೆಯಲ್ಲಿಯೇ ಕಾಲ್ಕಿತ್ತಿದ ಅಧ್ಯಕ್ಷ ಆಕಾಂಶಿ ಹಾಗೂ ಬೆಂಬಲಿಗರು:
ಯರಝರಿ ಗ್ರಾಮದ ಸೋಮಶೇಖರ ಬಸವರಾಜ ದೇಶಮುಖ ಅವರನ್ನು ಬ್ಯಾಂಕ್ ಅಧ್ಯಕ್ಷರನ್ನಾಗಿಸಬೇಕೆಂದು 5 ಬ್ಯಾಂಕ್ ಸದಸ್ಯರು ಹಾಗೂ ಬೆಂಬಲಿಗರು ಬೆಳಿಗ್ಗೆಯಿಂದಲೇ ಪಿಕೆಪಿಎಸ್ ಬ್ಯಾಂಕ್ ಎದುರಿಗೆ ಜಮವಾಗಿದ್ದರು. ಆದರೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸ್ವೀಕರಿಸಿದ ಚುನಾವಣಾಧಿಕಾರಿಗಳು ಏಕಾಏಕಿ ಕೇಂದ್ರದಿಂದ ಪಲಾಯನ ಮಾಡಿದ್ದು ಎಲ್ಲರಲ್ಲಿಯೂ ನಿರಾಸೆಯನ್ನುಂಟು ಮಾಡಿತು.
ಒತ್ತಡಕ್ಕೆ ಮಣಿದರು ಚುನಾವಣಾಧಿಕಾರಿ…?
ಬುಧವಾರ ಬೆಳಿಗ್ಗೆಯಿಂದಲೇ ಯರಝರಿ ಪಿಕೆಪಿಎಸ್ ಬ್ಯಾಂಕಿಗೆ ಆಗಮಿಸಿದ ಚುನಾವಣಾಧಿಕಾರಿ ಸಂತೋಷ ಇಲಕಲ್ಲ ಅವರು ಅಧ್ಯಕ್ಷ ಸ್ಥಾನಕ್ಕೆ ಒಂದು ನಾಮಪತ್ರ ಸ್ವೀಕರಿಸಿದರು. ನಂತರ ಅಧ್ಯಕ್ಷರ ಘೋಷಣೆ ಮಾಡುವ ಸಮಯದಲ್ಲಿ ಏಕಾಏಕಿ ಚುನಾವಣಾ ಪ್ರಕ್ರೀಯೆಯನ್ನು ಮೊಟಕುಗೊಳಿಸಿದ್ದು ಚುನಾವಣಾಧಿಕಾರಿಗಳು ಯಾರದೊ ಒತ್ತಡಕ್ಕೆ ಮಣಿದಿದ್ದಾರೆ ಎನ್ನುವ ಮಾತುಗಳು ಬ್ಯಾಂಕ್ ಎದುರಿಗೆ ಕೇಳಿಬಂದವು.
Be the first to comment