ಹೊಸ ವರ್ಷದ ಹೊಸ್ತಿಲಲ್ಲೆ ಕರ್ನಾಟಕ್ಕೆ ಕಾದಿದೆಯಾ ಭಯಾನಕ ಶಾಕ್?ರೂಪಾಂತರಿ ಕೊರೊನಾ ತಡೆಗೆ ಸರ್ಕಾರ ಮತ್ತೆ ಜಾರಿಗೆ ತರುತ್ತಾ ಟಪ್ ರೂಲ್ಸ್?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಲೆ ದಿನೆ ದಿನೆ ಕಡಿಮೆಯಾಗುತ್ತಾ ಬಂದಿದ್ದು ಎಲ್ಲರು ಹೊಸ ವರ್ಷದ ಆಚರಣೆಯತ್ತ ದಾಪುಗಾಲು ಇಡುತ್ತಿದ್ದಂತೆ ಹೊಸ ವರ್ಷಕ್ಕೂ ಮೊದಲೆ ರಾಜ್ಯದಲ್ಲಿ ಭಯಾನಕವಾದ ರೂಪಾಂತರ ಕೊರಾನಾ ವೈರಸ್ ನ ಭೀತಿ ಹರಡುತ್ತಿದೆ.

ಈಗಾಗಲೆ ಬ್ರಿಟನ್‌ ದೇಶದಿಂದ ರಾಜ್ಯಕ್ಕೆ 2127 ಜನ ಬಂದಿದ್ದು ಇವರ್ಯಾರು ಕೊರೊನಾ ಪರೀಕ್ಷೆ ಮಾಡಿಸಿಲ್ಲ ಇವರ್ಯಾರ ಬಳಿ ನೆಗಟಿವ್ ರಿಪೋರ್ಟ್ ಇಲ್ಲ.ಈಗಾಗಿ ಇವರು ರಾಜ್ಯದಲ್ಲಿ ಎಲ್ಲೆಲ್ಲಿ ಯಾವ ಯಾವ ಸ್ಥಳದಲ್ಲಿ ಓಡಾಡಿದ್ದಾರೆ ಎಂಬುದನ್ನು ಪತ್ತೆ ಹಚ್ವುವುದು ಆರೋಗ್ಯ ಇಲಾಖೆಗೆ ದೊಡ್ಡ ತಲೆ ನೋವಾಗಿದೆ.ಆದರು ಕೂಡಾ ಆರೋಗ್ಯ ಇಲಾಖೆಯವರು ಈಗಾಗಲೆ 2127 ರನ್ನು ಪತ್ತೆ ಹಚ್ವಲಾಗಿದ್ದು ಇದರಲ್ಲಿ 200 ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.ಕೆಲವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಇದು ಹೊಸ ತಳಿನಾ ಅಥಾವಾ ಹಳೆ ತಳಿನಾ ಎಂಬುದನ್ನು ಪತ್ತೆಹಚ್ಚಲು ಪುಣೆಗೆ ಸ್ಯಾಂಪಲ್ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ.

ಈ ಭಯಾನಕ ಬ್ರಿಟನ್ ವೈರಸ್ ನ ತಡೆಗೆ ಮಹಾರಾಷ್ಟ್ರ ರಾಜ್ಯದಲ್ಲಿ ಈಗಾಗಲೆ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ.ಇವತ್ತು ಈ ರೂಪಾಂತರ ಕೊರೊನಾ ವೈರಸ್ ನ ತಡೆಯ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಹಿರಿಯ ಅಧಿಕಾರಿಗಳು,ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದು ಯಾವ ಯಾವ ನಿಯಮಗಳ ಪಾಲನೆಗೆ ಸರ್ಕಾರ ನಿರ್ಧರಿಸುತ್ತೋ ಕಾದು ನೋಡಬೇಕಿದೆ.

Be the first to comment

Leave a Reply

Your email address will not be published.


*