ರಾಜ್ಯ ಸುದ್ದಿಗಳು
ಮುದ್ದೇಬಿಹಾಳ ಡಿ.6:
ಕಳೆದ ೨೦೧೫ರಲ್ಲಿ ನಡೆದಂತಹ ಗ್ರಮ ಪಂಚಾಯತ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿ ಸಿಬ್ಬಂದಿಗಳು ಅಂದಿನ ಮಾಹಿತಿ ಪತ್ರಗಳನ್ನು ಇಂದಿನ ಚುನಾವಣಾ ಸಿಬ್ಬಂದಿಗಳಿಗೆ ಹಸ್ತಾಂತರಿಸದ ಕಾರಣ 2020ರಲ್ಲಿ ಕಾರ್ಯನಿರ್ವಹಿಸುತ್ತಿರುವ ಚುನಾವಣಾ ವಿಭಾಗದ ಸಿಬ್ಬಂದಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನೂ ಸಿಬ್ಬಂದಿಗಳ ನೇಮಿಸುವಲ್ಲಿ ತಹಸೀಲ್ದಾರರೂ ಯಾವುದೇ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದು ಸಿಬ್ಬಂದಿಗಳ ವರ್ತನೆಯಿಂದಲೇ ತಿಳಿದು ಬರುತ್ತಿದೆ.
ಪಂಚಾಯತಿ ಚುನಾವಣೆಗೆ ಸಾರ್ವಜನಿಕರಿಗೆ ಒದಗಿಸಬೇಕಾದ ಮಾಹಿತಿಗಳನ್ನು ನೀಡಲು ಸೂಕ್ತ ಸಿಬ್ಬಂದಿಗಳನ್ನು ನೇಮಿಸಬೇಕಾಗುತ್ತದೆ. ಆದರೆ ಮುದ್ದೇಬಿಹಾಳ ತಾಲೂಕಿನಲ್ಲಿ ಚುನಾವಣೆಯ ಬಗ್ಗೆಯ ಯಾವುದೇ ಮಾಹಿತಿ ಇರದ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಇದರ ಬಗ್ಗೆ ಸ್ಥಳೀಯ ಶಿರಸ್ತೆದಾರರಲ್ಲಿಯೇ ಅಸಮಾಧಾನದ ಉತ್ತರ ಬರುತ್ತಿದ್ದು ಸಾರ್ವಜನಿಕರು ಸಿಬ್ಬಂದಿಗಳನ್ನು ನೇಮಿಸಿರುವ ತಹಸೀಲ್ದಾರರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಪಂ ಚುನಾವಣೆಗೆ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿ:
ವಿವಿಧ ಗ್ರಾಮ ಪಂಚಾಯತಿ ಚುನಾವಣೆಗೆ ಮತದಾರರ ಪಟ್ಟಿಯನ್ನು ಕೇಳಿಕೊಂಡು ತಹಸೀಲ್ದಾರ ಕಛೇರಿಗೆ ಆಗಮಿಸುವ ಜನರಿಗೆ ಚುನಾವಣಾ ವಿಭಾಗದ ಸಿಬ್ಬಂದಿಗಳು ಹಿಂದೆ ನಡೆದ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯನ್ನು ನೀಡುತ್ತಿದ್ದಾರೆ. ಇದರಿಂದ ಕೆಲವೊಂದು ಗ್ರಾಮಗಳಲ್ಲಿ ಗಲಭೆಯಾಗುವ ಸಂಭವವೂ ಇರುತ್ತದೆ.
Be the first to comment