ರಾಜ್ಯ ಸುದ್ದಿಗಳು
ಮುದ್ದೇಬಿಹಾಳ ಡಿ.7:
ತಾಲೂಕಿನ ಯರಗಲ್ಲ-ಮದರಿ ಗ್ರಾಮದ ಶ್ರೀಬಾಲಾಜಿ ಶುಗರ್ಸ ಸಕ್ಕರೆ ಕಾರ್ಖಾನೆಯಿಂದ ಮದರಿ ಗ್ರಾಮದ ಹಳ್ಳಕ್ಕೆ ಕುಲಷಿತ ನೀರು ಬಿಡುತ್ತಿದ್ದು ಗ್ರಾಮದ ದನಕರುಗಳಿಗೆ ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆ ಸೋಮವಾರ ರೈತರು ಬೆಳಿಗ್ಗೆಯಿಂದ ರಸ್ತೆತಡೆ ನಡೆಸಿ ಪ್ರತಿಭಟಿಸಿದ ಘಟನೆ ನೆಡೆದಿದೆ.
ಸಕ್ಕರೆ ಕಾರ್ಖಾನೆಯಿಂದ ಕಳೆದ ಹಲವು ವರ್ಷಗಳಿಂದಲೂ ಕುಲಷಿತ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ. ಇದನ್ನು ಬಂದ್ ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಿ ಎಂದು ಗ್ರಾಮಸ್ಥರು ಎಷ್ಟೇ ಮನವಿ ಮಾಡಿದರೂ ಕಾರ್ಖಾನೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ಹಳ್ಳಕ್ಕೆ ಕಲಷಿತ ನೀರು ಕೂಡುವುದರಿಂದ ಗ್ರಾಮಸ್ಥರ ಸಾಕು ಪ್ರಾಣಿಗಳಿಗೆ ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಇದರ ಬಗ್ಗೆ ಕಾರ್ಖಾನೆಯ ಎಂಡಿ ಅವರಿಗೆ ತಿಳಿಸಿದರೆ ರೈತರ ಮಾತಿಗೆ ಕಿಮ್ಮತ್ತು ಕೊಡದೇ ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ. ಆದ್ದರಿಂದ ಪ್ರತಿಭಟನೆ ಮಾಡುವುದು ಅನಿವಾರ್ಯವಾಯಿತು ಎಂದು ಪ್ರತಿಭಟನಾ ನಿರತು ತಮ್ಮ ಅಳಲನ್ನು ತೋಡಿಕೊಂಡರು.
ರೈತರ ಗಾಯದ ಮೇಲೆ ಬರೆ ಎಳೆದ ಕಾರ್ಖಾನೆ:
ಈಗಾಗಲೇ ಜಮೀನಿನಲ್ಲಿ ಬಿತ್ತನೆ ಮಾಡಿದ ರೈತರಿಗೆ ಅತೀವೃಷ್ಠಿಯಿಂದ ರೈತರು ಕಂಗಾಲಾಗಿ ಬೆಳೆಗಳು ನಾಶದ ಹಂತಕ್ಕೆ ಬಂದಿವೆ. ಇದರೊಂದಿಗೆ ಕಾರ್ಖಾನೆಯವರೂ ಹಳ್ಳದ ನೀರಿಗೆ ಕಾರ್ಖಾನೆಗೆ ಕುಲಷಿತ ನೀರನ್ನು ಬಿಡುತ್ತಿದ್ದು ಹಳ್ಳದ ನೀರನ್ನು ಜಮೀನಿಗೆ ಉಪಯೋಗಿಸುತ್ತಿದ್ದ ರೈತರು ತಾವು ಬೆಳೆದ ಬೆಳೆಗಳನ್ನು ಸಂಪೂರ್ಣವಾಗಿ ನಾಶಗೊಂಡು ಸಂಪೂರ್ಣವಾಗಿ ಕಂಗಾಲಾಗದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ನೀರು ಸೇವಿಸಿ ಮರಣಹೊಂದಿ ಪಕ್ಷಿಗಳು:
ಕಾರ್ಖಾನೆಯಿಂದ ಹಳ್ಳಕ್ಕೆ ಬಿಡುವ ಕಲಷಿತ ನೀರನ್ನು ಪಕ್ಷಿಗಳು ಕುಡಿದು ಸ್ಥಳದಲ್ಲಿಯೇ ಸಾವಿಗೀಡಾಗಿವೆ. ಅಲ್ಲದೇ ಇದನ್ನು ಸೇವಿಸಿದ ಸಾಕಷ್ಟು ಮೇಕೆ ಹಾಗೂ ಆಡುಗಳು ಸೇರಿದಂತೆ ಇನ್ನಿತರ ಪ್ರಾಣಿಗಳೂ ಸತ್ತು ಹೋಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕಿದ ಗ್ರಾಮದ ಮಹಿಳೆಯರು:
ಕಾರ್ಖಾನೆಯ ಕಲಷಿತ ನೀರನ್ನು ಯಾವುದೇ ಕಾರಣಕ್ಕೂ ಹಳ್ಳಕ್ಕೆ ಹಾಗೂ ಸಾರ್ವಜನಿಕರ ಸ್ಥಳಗಳಿಗೆ ಬಿಡಲು ಅವಕಾಶವಿಲ್ಲದಿದ್ದರೂ ಬಾಲಾಜಿ ಸಕ್ಕರೆ ಕಾರ್ಖಾನೆಯವರು ಗ್ರಾಮದ ಹಳ್ಳಕ್ಕೆ ಕುಲಷಿತ ನೀರನ್ನು ಬಿಡುತ್ತಿದ್ದಾರೆ. ಇದನ್ನೂ ತಿಳಿದರೂ ಅಧಿಕಾರಿಗಳು ಮಾತ್ರ ಕಾರ್ಖಾನೆಯವರಿಗೆ ನೋಟಿಸು ನೀಡಲು ಮುಂದೆ ಬರುತ್ತಿಲ್ಲ. ಕಾರ್ಖಾನೆಯವರಿಂದ ಅಧಿಕಾರಿಗಳು ಮಾಮೂಲು ಪಡೆದು ಮುಖರಾಗಿದ್ದಾರೆ ಎಂದು ಗ್ರಾಮದ ಮಹಿಳೆಯರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು.
ಕೂಡಲೇ ಹಳ್ಳಕ್ಕೆ ಬೀಡುವ ಕಲಷಿತ ನೀರನ್ನು ನಿಲ್ಲಿಸಿ ರೈತರಿಗೆ ಹಾಗೂ ಪ್ರಾಣಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ರೈತರ ಆಗ್ರಹವಾಗಿದೆ. ಸಂಜೆಯಾದರೂ ಪೊಲೀಸ ಇಲಾಖೆ ಬಿಟ್ಟರೆ ಬರ‍್ಯಾವ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡದ ಕಾರಣ ರೈತರು ಕತ್ತಲಾಗುತ್ತಾ ಬಂದರೂ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾಜಿ ಗ್ರಾಪಂ ಸದಸ್ಯರ ಯಮನಪ್ಪ ವಡ್ಡರ, ಶಿವು ಕನೊಳ್ಳಿ ಸೇರಿದಂತೆ ವಿವಿಧ ಸಂಘಟನೆ ಪದಾಧಿಕಾರಿಗಳು ಮಹಿಳೆಯರು ಇದ್ದರು.
Be the first to comment