ಅಖಿಲ ಕರ್ನಾಟಕ ಹೆಳವ ಸಮಾಜದಿಂದ ಕನ್ನಡ ರಾಜ್ಯೋತ್ಸವ ಆಚರಣೆ..

ಬೆಂಗಳೂರಿನ ಬಿದರೆ ಅಗ್ರಹಾರದಲ್ಲಿರುವ
ಚಿನ್ನಾಗೇನ ಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಮೊದಲಿಗೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ನಂತರ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಾದ್ಯಗೋಷ್ಠಿ ಮತ್ತು ಹೂವಿನ ಪಲ್ಲಕ್ಕಿ ಯೊಂದಿಗೆ ಬಿದರೆ ಅಗ್ರಹಾರದ ಚಿನ್ನಾಗೇನಹಳ್ಳಿಯ
ಗ್ರಾಮದ ರಾಜಬೀದಿಗಳಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಯನ್ನು ಮಾಡಲಾಯಿತು.

ಹಾಗೂ ಸರ್ವೆ ನಂಬರ್ 30 ರಲ್ಲಿ 1 ಎಕರೆ 30ಗುಂಟೆ ವಿಸ್ತೀರ್ಣದ ದೇಶದಲ್ಲಿ ನಿರ್ಮಿಸಿರುವ ಹೆಳವ ಸಮಾಜದ ಸಮುದಾಯ ಭವನವನ್ನು ಉದ್ಘಾಟಿಸುವ ಮೂಲಕ ಭವನದಲ್ಲಿ ಕನ್ನಡ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು.

ಕೋಡಿಹಳ್ಳಿ ಮಠದ ಹೆಳವ ಸಮಾಜದ ಪೀಠಾಧಿಪತಿಗಳಾದ ಶ್ರೀ ಬಸವಭೃಂಗೇಶ್ವರ ಸ್ವಾಮೀಜಿಯವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಮಾಜದ ಪ್ರಮುಖರು ಸಮಾಜದಲ್ಲಿನ ಆಗು ಹೊಗುಗಳ ಕುರಿತು ಮತ್ತು ಅಲೆಮಾರಿ ಜನಾಂಗದಲ್ಲಿರುವ ಅತೀ ಹಿಂದುಳಿದ ಹೆಳವ ಸಮಾಜವನ್ನು ST ಗೆ ಸೇರ್ಪಡೆಗೊಳಿಸುವ ಕುರಿತು ಮುಕ್ತವಾಗಿ ಸಮಾಲೋಚನೆ ನಡೆಸಿದರು.

ಇದೆ ಸಂದರ್ಭದಲ್ಲಿ ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯಾಧ್ಯಕ್ಷರಾದ ಎಂ ನಾಗರಾಜ್ ಗುರೂಜಿ, ಬಸವ ಟಿವಿಯ ಮುಖ್ಯಸ್ಥರಾದ ಈ ಕೃಷ್ಣಪ್ಪ, ಗೆದ್ದಲಹಳ್ಳಿ ಮಂಜಣ್ಣ, ಎನ್ ವಿ ಶ್ರೀನಿವಾಸ್, ರಾಮು ಕೆಎಚ್ ಪಿ ಬೊಮ್ಮನಹಳ್ಳಿ, ಶ್ರೀನಿವಾಸ, ಶಿವಶರಣಪ್ಪ ಕೆಲೂರ, ಯಾದಗಿರಿ ಜಿಲ್ಲಾಧ್ಯಕ್ಷರಾದ ಡಾ: ಹನುಮಂತ ಹೆಳವರ ಮುನಿರಾಜು, ಅಂಜನಪ್ಪ,ಮಂಜುನಾಥ, ಮುನಿಗುರಪ್ಪ, ನಾರಾಯಣಸ್ವಾಮಿ, ವೆಂಕಟೇಶಪ್ಪ, ದಿನೇಶ್, ಮಂಜು, ವೆಂಕಟಪ್ಪ, ರಾಮಚಂದ್ರ, ತಿಮ್ಮರಾಯಪ್ಪ, ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ ಸಮಾಜದ ಬಂಧುಗಳು ಹಾಗೂ ಚಿನ್ನಾಗೇನಹಳ್ಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*