ರಾಜ್ಯ ಸುದ್ದಿಗಳು
ಮುದ್ದೇಬಿಹಾಳ ನ.21:
ಕಳೆದ ೪೦ ವರ್ಷಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಪ್ರಪ್ರಥಮ ಬಾರಿಗೆ ಮತಕ್ಷೇತ್ರ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷದ ಎ.ಎಸ್.ಪಾಟೀಲ ನಡಹಳ್ಳಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರಕಾರಕ್ಕೆ ಬೇಡಿಕೆಯನ್ನಿಟ್ಟಿದ್ದ ೨ ಸಾವಿರ ಕೋಟಿಯಲ್ಲಿ ೬೦೦ ಕೋಟಿ ಅನುದಾನ ಮಂಜೂರಾಗಿದ್ದು ಕ್ಷೇತ್ರದಲ್ಲಿ ಬಹಳ ವರ್ಷದಿಂದ ಬೇಡಿಕೆಗಳನ್ನಿಟ್ಟ ಕ್ಷೇತ್ರದ ಜನರಿಗೆ ತೃಪ್ತಿದಾಯಕವಾಗಿದೆ.
ಹೌದು, ಕಳೆದ ೪೦ ವರ್ಷಗಳಿಂದ ಮುದ್ದೇಬಿಹಾಳ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಬೇಕಿತ್ತು. ಆದರೆ ಕೆಲ ರಾಜಕಾರಣಿ ಹಾಗೂ ಹಂಬಾಲಕರಿAದ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಆದರೆ ಸದ್ಯಕ್ಕೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನೀರು, ವಿದ್ಯುತ್, ರಸ್ತೆ, ಸಮುದಾಯ ಭವನ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ತಾಣವಾಗುತ್ತಿದೆ.
೩೦೬೨ ಲಕ್ಷ ಅಭಿವೃದ್ಧಿ ಕಾಮಗಾರಿಗೆ ಚಾಲನೆ:
ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಅಗಸಬಾಳ ಕ್ರಾಸ್ ಸೇರಿದಂತೆ ಒಟ್ಟು ೩೦೬೨ ಲಕ್ಷದ ವಿವಿಧ ಗ್ರಾಮೀಣ ಪ್ರದೇಶ ರಸ್ತೆ ಸುದಾರಣೆ ಕಾಮಗಾರಿಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಭೂಮಿ ಪೂಜೆಗೆ ಆಗಮಿಸಲಿದ್ದಾರೆ.
ಅಭಿವೃದ್ಧಿ ಪಡಿಸುವಲ್ಲಿ ಛಲಗಾರರಾದ ಎ.ಎಸ್.ಪಾಟೀಲ ನಡಹಳ್ಳಿ:
ಮುದ್ದೇಬಿಹಾಳ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಪಡಿಸುವುದೇ ಮುಖ್ಯದ್ಯೇಯ ಎಂದು ಚುನಾವಣೆಯ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ವಚನ ನೀಡಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಕ್ಷೇತ್ರದ ಅಭಿವ್ಧೃ ವಿಷಯಲ್ಲಿ ಯಾವುದೇ ಒತ್ತಡಕ್ಕೂ ಮಣಿಯದೇ ಸರಕಾರದ ಎದುರಿಗೆ ಅನುದಾನದ ಬೇಡಿಕೆಯನ್ನಿಟ್ಟು ಅನುದಾನ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಹಲವು ದಶಕದ ನಂತರ ಒಬ್ಬ ಸೂಕ್ತ ಛಲಗಾರ ಸಕ್ಕಿದ್ದಾರೆ ಎಂದು ಸ್ಥಳೀಯ ಜನರ ಮಾತಾಗಿದೆ.
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಸಾಕಷ್ಟು ಜನರು ಹಲವಾರು ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತರಾಗುತ್ತಾ ಬಂದಿದ್ದಾರೆ. ಸದ್ಯಕ್ಕೆ ಶಾಸಕರಾಗಿ ಆಯ್ಕೆಯಾಗಿರುವ ಎ.ಎಸ್.ಪಾಟೀಲ ನಡಹಳ್ಳಿ ಅವರು ಮುದ್ದೇಬಿಹಾಳ ಕ್ಷೇತ್ರವನ್ನು ಸಿಲಿಕಾನ್ ಸಿಟಿ ಮಾದರಿಯಲ್ಲಿ ರೂಪಿಸುವ ಯೋಜನೆಗಳನ್ನು ಹಾಕಿಕೊಂಡಿದ್ದು ಕಲವೇ ವರ್ಷಗಳಲ್ಲಿ ಮುದ್ದೇಬಿಹಾಳ ಅಭಿವೃದ್ಧಿಯಿಂದ ಕಂಗೊಳಿಸಲಿದೆ. ಈಗಾಗಲೇ ರೈತರಿಗೆ ಸಮರ್ಪಕ ವಿದ್ಯುತ್ ಒದಗಿಸಲು ೧೧೦ಕೆವಿ ನಾಲ್ಕು ಹಾಗೂ ೨೨೦ಕೆವಿ ಒಂದು ವಿದ್ಯುತ್ ಕೇಂದ್ರಗಳನ್ನು ನಿರ್ಮಿಸಲಾಗಿದೆ ಇನ್ನೂ ನೀರು, ಸುಸಜ್ಜಿತ ರಸ್ತೆ, ಚರಂಡಿಗಾಗಿ ಕಾಮಗಾರಿಗಳು ಚಾಲನೆಯಲ್ಲಿವೆ.
-ಶಾಂತಗೌಡ ಪಾಟೀಲ ನಡಹಳ್ಳಿ, ಸಮಾಜ ಸೇವಕರು, ಮುದ್ದೇಬಿಹಾಳ.
Be the first to comment