ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ನ.19:
ಮುದ್ದೇಬಿಹಾಳ ಪಟ್ಟಣದ ಡಾ.ಅಂಬೇಡ್ಕರ್ ಭವನ, ಮುದ್ದೇಬಿಹಾಳ ಹಾಗೂ ತಾಳಿಕೋಟಿ ಎಪಿಎಂಸಿ ಮಳಿಗೆ ಹಾಗೂ ಕಾರ್ಯಾಲಯ ಕಟ್ಟಡಗಳ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಸಚಿವ ಸಿ.ಎಸ್.ನಾಡಗೌಡ ಅವರನ್ನು ಕೈಬಿಟ್ಟಿದ್ದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ, ಮುದ್ದೇಬಿಹಾಳ ಕ್ಷೇತ್ರಕ್ಕೆ ಸಜ್ಜನಶೀಲ ರಾಜಕಾರಣಿ ನಾಡಗೌಡರು. ಅವರ ಅವಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಆದರೆ ಅವುಗಳನ್ನು ಪ್ರಚಾರ ಮಾಡವ ಗೂಜಿಗೆ ನಾಡಗೌಡ ಅವರು ಹೋಗಿಲ್ಲ. ಆದರೆ ಅವರ ಅವಯಲ್ಲಿ ನಿರ್ಮಾಣವಾಗಿರುವ ಕಾಮಗಾರಿಗಳ ಉದ್ಘಾಟನೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆಗಮಿಸುತ್ತಿದ್ದು ಇಂತಹ ಕಾರ್ಯಕ್ರಮದಲ್ಲಿ ಮಾಜಿ ಸಚಿವರ ಹೆಸರನ್ನು ಕೈಬಿಟ್ಟಿರುವ ತಾಲೂಕಾ ಆಡಳಿತದ ಕಾರ್ಯಕ್ಕೆ ಬೇಸರವಾಗಿದೆ ಎಂದು ಹೇಳಿದರು.
ಕಾರಜೋಳ ಅವರಿಗೆ ಸ್ವಾಗತಿಸಿದ ಕಾಂಗ್ರೆಸ್:
ವಿಜಯಪುರ ಜಿಲ್ಲೆಯಲ್ಲಿಯೆ ಅತ್ಯುತ್ತಮ ಸೌಕರ್ಯ ಉಳ್ಳ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಮುದ್ದೇಬಿಹಾಳ ಪಟ್ಟಣದಲ್ಲಿ ನಿರ್ಮಿಸಿದ ಶ್ರೇಯಸ್ಸು ಸಿ.ಎಸ್.ನಾಡಗೌಡರಿಗೆ ಸಲ್ಲುತ್ತದೆ. ಹಿಂದಿನ ಅವದಿಯಲ್ಲಾದ ಕಾಮಗಾರಿಗಳನ್ನು ಉಧ್ಗಾಟಿಸುತ್ತಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಸ್ವಾಗತ ಕೋರುತ್ತೆವೆ ಎಂದು ಕಾಂಗ್ರೇಸ್ ಪಕ್ಷದ ಮುಖಂಡರು ತಿಳಿಸಿದರು.
ಎಪಿಎಂಸಿಗೆ ೫ ಕೋಟಿ ಅನುದಾನ ಒದಗಿಸಿ:ಮಾಜಿ ಅಧ್ಯಕ್ಷ ತಾರನಾಳ ಮನವಿ
ರಾಜ್ಯದಲ್ಲಿ ಎಪಿಎಂಸಿಗಳಿAದ ರಾಜ್ಯ ಸರಕಾರಕ್ಕೆ ಸಾಕಷ್ಟು ಲಾಭವಾಗುತ್ತಿತ್ತು. ಆದರೆ ಎಪಿಎಂಸಿ ಕಾಯ್ದೆ ತಿದ್ದುಪಡೆಯಿಂದ ಸದ್ಯಕ್ಕೆ ಕಡಿಮೆ ಲಾಭವಾಗುತ್ತಿದೆ. ಇದರಿಂದ ಈಗಾಗಲೇ ಎಪಿಎಂಸಿ ಆವರಣದಲ್ಲಿ ಆಗಬೇಕಾದ ಮೂಲಭೂತ ಸೌಕರ್ಯಗಳಲ್ಲಿ ಸಾಕಷ್ಟು ಕಾಮಗಾರಿಗಳಾಗುವುದು ಬಾಕಿ ಇದ್ದು ಅವುಗಳನ್ನು ಸಂಪೂರ್ಣ ಮಾಡಲು ಎಪಿಎಂಸಿಗೆ ಕನಿಷ್ಠ ೫ ಕೋಟಿ ಅನುದಾನವನ್ನು ನಿಮ್ಮ ಅಕಾರದ ಅವಯಲ್ಲಿ ಒದಗಿಸಬೇಕೆಂದು ಮಾಜಿ ಎಪಿಎಂಸಿ ಅಧ್ಯಕ್ಷ ಗುರುಣ್ಣ ತಾರನಾಳ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮೆಹಬೂಬ ಗೋಳಸಂಗಿ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಮಲ್ಲನಗೌಡ ಯಾದಗಿರಿ ಇದ್ದರು.
Be the first to comment