ಮರಾಠಾ ನಿಗಮ ಸ್ಥಾಪನೆ ಖಂಡನೀಯ: ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕಾಶಿನಕುಂಟಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ನ.19:

ಕರ್ನಾಟಕ ರಾಜ್ಯದಲ್ಲಿ ಮರಾಠ ನಿಗಮ ಸ್ಥಾಪನೆಗೆ ಮುಂದಾಗಿರುವ ಸಿಎಂ ಯಡಿಯೂರಪ್ಪನವರ ಸರಕಾರ ರಾಜ್ಯದ ಕನ್ನಡಿಗರಿಗೆ ಅಪಮಾನ ಮಾಡಿದಂತಾಗಿದ್ದು ರಾಜ್ಯ ಸರಕಾರದ ನಿರ್ಧಾರ ಖಂಡನೀಯವಾಗಿದೆ ಎಂದು ಜೆಡಿಎಸ್ ಜಿಲ್ಲಾ ಪ್ರ.ಕಾರ್ಯದರ್ಶಿ ಅರವಿಂದ ಕಾಶಿನಕುಂಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 


ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಮರಾಠಿ ವಾಸಿಸರಿಗೆ ಸರಕಾರದಿಂದ ವಿವಿಧ ಸೌಲತ್ತು ನೀಡುವುದು ಸೂಕ್ತವಾಗುತ್ತದೆ. ಆದರೆ ಈಗಾಗಲೇ ಸಾಕಷ್ಟು ವರ್ಷಗಳ ಹಿಂದಯೇ ರಾಜ್ಯದ ವಿವಿಧ ಸಮುದಾಯ ಜನರು ನಿಗಮ ಸ್ಥಾಪನೆಗೆ ಸರಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದಾರೆ. ರಾಜ್ಯದ ಮೂಲ ವಾಸಿಗರ ಮನವಿಯನ್ನು ಬಿಟ್ಟು ಉಪ ಚುನಾವಣೆಯಲ್ಲಿ ಬೆಳಗಾವಿಯ ಮರಾಠಿಗರ ಮತಗಳನ್ನು ಪಡೆಯಲು ಮರಾಠಾ ನಿಗಮ ಸ್ಥಾಪನೆಗೆ ಮುಂದಾಗಿರುವ ಸಿಎಂ ಅವರು ಇಂತಹ ಕಳೆಮಟ್ಟದ ಸರಕಾರ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 

Be the first to comment

Leave a Reply

Your email address will not be published.


*