ತಹಸೀಲ್ದಾರ ಕಛೇರಿಯಲ್ಲಿ ಅಧಿಕಾರಿಗಳಿಂದ ನಡೆಯುತ್ತಿರುವ ತಾರತಮ್ಯದ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಜೆಡಿಎಸ್ ಕಾರ್ಯಕರ್ತರು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ನ.19:

ಪಟ್ಟಣದ ತಹಸೀಲ್ದಾರ ಕಛೇರಿಯಲ್ಲಿ ಕೆಲ ಅಧಿಕಾರಿಗಳು ಸಾಮಾನ್ಯ ಜನರಿಗೆ ಒದಗಿಸಬೇಕಾದ ಸೇವೆಯಲ್ಲಿ ತಾರತಮ್ಯ ಮಾಡುತ್ತಿದ್ದು ಕೂಡಲೇ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿ ಗುರುವಾರ ತಾಲೂಕಾ ಜೆಡಿಎಸ್ ಪಕ್ಷದ ಕಾರ್ಯಕರ್ತರು ತಹಸೀಲ್ದಾರ ಜಿ.ಎಸ್.ಮಳಗಿ ಅವರಿಗೆ ಮನವಿ ಸಲ್ಲಿಸಿದರು.



ಬೇರೆ ಬೇರೆ ಕೆಲಸಗಳನ್ನಿಟ್ಟು ಗ್ರಾಮೀಣ ಪ್ರದೇಶದಿಂದ ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ ತಛೇರಿಗೆ ದಿನನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ಕೆಲ ಅಧಿಕಾರಿಗಳು ಜನರಿಗೆ ಬರಳು ತಿಳಿಸಿದ ವೇಳೆಯಲ್ಲಿ ತಾವು ಕಛೇರಿಯಲ್ಲಿ ಸರಿಯಾಗಿ ಕುಳಿತುಕೊಳ್ಳದೇ ಬಂದ ಜನರನ್ನು ಸತಾಯಿಸುತ್ತಾರೆ. ಇದಕ್ಕಾಗಿದೆ. ಇನ್ನೂ ಅನೇಕ ಕೆಲಸಗಳಿಗೆ ಆಗಮಿಸಿದ ಗ್ರಾಮೀಣ ಜನರು ಬರ‍್ಯಾವುದೆ ಕೆಲಸ ಮಾಡೇ ತಹಸೀಲ್ದಾರ ಕಛೇರಿಯಲ್ಲಿ ಸಂಜೆಯವರೆಗೂ ಕುಳೀಕೊಳ್ಳುವ ದುಸ್ಥಿತಿ ಎದುರಾಗುತ್ತಿದೆ. ಇನ್ನೂ ಸಂಜೆ ಆಗಮಿಸುವ ಅಧಿಕಾರಿಗಳು ಮತ್ತೇ ನಾಳೆ ಆಗಮಿಸುವಂತೆ ಜನರಿಗೆ ತಿಳಿಸುತ್ತಾರೆ. ಇದರಿಂದ ಗ್ರಾಮೀಣ ಜನರಿಗೆ ಸಾಕಷ್ಟು ತೊಂದರೆಯಾಗಿದ್ದು ಕೂಡಲೇ ಇದರ ಬಗ್ಗೆ ಸ್ಥಳೀಯ ತಹಸೀಲ್ದಾರರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.


ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲಮಜೀದ ಮಕಾನದಾರ, ಫರ್ವೇಜಾಲಂ ಪಠಾಣ, ಫಯಾಜಹ್ಮದ ತಂಬದ, ಅರ್ಷಪ ಹಿರೇಮನಿ, ಇಸಾಕಷಾ ಮಕಾನದಾರ, ಸಲಾಂ ಮುಲ್ಲಾ, ನಾಗಪ್ಪ ಹಡಲಗೇರಿ ಇದ್ದರು.

Be the first to comment

Leave a Reply

Your email address will not be published.


*