ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ನ.19:
ಕಳೆದ 35 ವರ್ಷದ ಇತಿಹಾಸವನ್ನೆ ಮುಂದುವರೆಸಿರುವ ಮುದ್ದೇಬಿಹಾಳ ಪಟ್ಟಣದ ಟಿಎಪಿಎಂ ಸೊಸೈಟಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯು ನೂತನ ಅಧ್ಯಕ್ಷರಾಗಿ ಮನೋಹರ ಮೇಟಿ ಹಾಗೂ ಉಪಾಧ್ಯಕ್ಷರನ್ನಾಗಿ ಗುರಣ್ಣ ಹತ್ತೂರ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನ.೧೩ರಂದು ನಡೆಯಬೇಕಿದ್ದ ಸೊಸೈಟಿಯ ನೂತನ ನಿರ್ದೇಶಕರ ಚುನಾವಣೆ ಪ್ರಕ್ರೀಯೆಯಲ್ಲಿ ಅ ವರ್ಗದ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗದ ಕಾರಣ ಬ ವರ್ಗದ ೮ ಸ್ಥಾನಗಳಿಗೆ ನಿರ್ದೇಶಕರನ್ನು ಅವಿರೋಧವಾಗಿಯೇ ಆಯ್ಕೆಯಾಗಿತ್ತು. ಇದರಲ್ಲಿ ಸದ್ಯಕ್ಕೆ ಅಧ್ಯಕ್ಷ ಸ್ಥಾನಕ್ಕೇರಿರುವ ಮೇಟಿ ಅವರು ಸೇರಿ ೫ ನಿರ್ದೇಶಕರು ಶಾಸಕ ನಡಹಳ್ಳಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರ ಆಪ್ತರಾಗಿದ್ದು ಟಿಎಪಿಎಂಸಿ ಸೊಸೈಟಿಯಲ್ಲಿ ಬಿಜೆಪಿ ಬೆಂಬಲಿತ ಆಡಳಿತ ನಿರ್ದೇಶಕರ ಒಳಗಾಗಿದೆ.
ಮುದ್ದೇಬಿಹಾಳ ಕ್ಷೇತ್ರದಲ್ಲಿ ಬಿಜೆಪಿಯ ಅಲೆ:
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮುದ್ದೇಬಿಹಾಳ ಮತಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಪಕ್ಷದಿಂದ ಅಧಿಕಾರಕ್ಕೆ ಬಂದ ಎ.ಎಸ್.ಪಾಟೀಲ ನಡಹಳ್ಳಿ ಅವರು ಕ್ಷೇತ್ರದ ಎಪಿಎಂಸಿ, ತಾಲೂಕ ಪಂಚಾಯತ, ಟಿಎಪಿಎಂ ಸೊಸೈಟಿ, ನಾಲತವಾಡ ಪಟ್ಟಣ ಪಂಚಾಯತಿ ಆಡಳಿತ ಅಧಿಕಾರದಲ್ಲಿ ಬಿಜೆಪಿ ಬೆಂಬಲಿತ ಅಧಿಕಾರ ಚಲಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ಕುತುಲಹಕಾರಿ ಸಂಗತಿಯಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಬಸವರಾಜ ಗುಳಬಾಳ, ಶರಣು ಬೂದಿಹಾಳಮಠ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕಾಶಿನಕುಂಟಿ, ಚಿದಾನಂದ ಸಿತಿಮನಿ, ಮುತ್ತಣ್ಣ ಮತ್ತಣ್ಣವರ, ಪ್ರಭು ಯಾಳವಾರ ಇತರರಿದ್ದರು.
Be the first to comment