ಲಿಂಗಸುಗೂರು.13 ಮಾಧ್ಯಮ , ಸಾಹಿತ್ಯ , ಶಿಕ್ಷಣ ನಾಟಕ , ಸಿನೆಮಾ ಹೀಗೆ ಹಲವು ಕ್ಷೇತ್ರಗಳಲ್ಲಿ ಯುವಕರಿಗೆ ಪ್ರೇರಣಾತ್ಮಕ ಶಕ್ತಿಯಾಗಿದ್ದ ಹಿರಿಯ ಪತ್ರಕರ್ತ ರವಿಬೆಳೆಗೆಯವರ ಅಗಲಿಕೆ ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶ್ರೀ ಉಮಾಮಹೇಶ್ವರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ವಿನಯಕುಮಾರ ಗಣಾಚಾರಿ ವಿಷಾದ ವ್ಯಕ್ತಪಡಿಸಿದರು . ತಮ್ಮ ಸಂಸ್ಥೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿಕ್ಕಂದಿನಿಂದ ಬೆಳಗೆರೆಯವರ ಹಾಯ್ ಬೆಂಗಳೂರು
ವಾರಪತ್ರಿಕೆಯನ್ನು ಓದುತ್ತಲೇ ಬೆಳೆದ ನಾವುಗಳು , ಅವರು ಬರೆದಿರುವ ಮಾಂಡೋವಿ , ಹೇಳಿ ಹೋಗು ಕಾರಣ , ಗಾಡ್ ಫಾದರ್ , ಹಿಮಾಲಯನ್ ಬ್ಲಂಡರ್ , ಹಿಮಾಗ್ನಿ , ಇಂದಿರೆಯ ಮಗ ಸಂಜಯ , ಅನಿಲ್‌ಲಾಡ್ ಮತ್ತು ನಲವತ್ತು ಕಳ್ಳರು , ಪಾ ಗಳ ಲೋಕದಲ್ಲಿ , ಭೀಮಾ ತೀರದ ಹಂತಕರು , ಖಾಸ್‌ಬಾತ್ , ಕಾಮರಾಜ ಮಾರ್ಗ , ಸರ್ಪ ಸಂಬಂಧ , ಮಾಟಗಾತಿ , ಹಿಂಗ ನೋಡಬ್ಯಾಡ ನನ್ನ , ರಾಜ ರಹಸ್ಯ , ರಾಜ್ ಲೀಲಾ ವಿನೋದ ನೀನಾ ನಾನ ಪಾಪಿ ಪಾಕಿಸ್ತಾನ , ಸೇರಿ 50 ಕ್ಕೂ ಹೆಚ್ಚು ಕೃತಿಗಳನ್ನು ಅಕ್ಷರ ಲೋಕಕ್ಕೆ ಕೊಡುಗೆಯಾಗಿ ನೀಡಿ , ಯುವಕರನ್ನು ಸಾಹಿತ್ಯದೆಡೆಗೆ ಸೆಳೆದ
ಜಾಹೀರಾತು
ಮಾಂತ್ರಿಕ ರವಿ ಬೆಳಗೆರೆಯವರ ಅಗಲಿಕೆ ಸಾಹಿತ್ಯ , ಮಾಧ್ಯಮ ಲೋಕಕ್ಕೆ ತುಂಬದ ನಷ್ಟವಾಗಿದೆ . ದೇವರು ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ ನೀಡಲೆಂದು ಪ್ರಾರ್ಥಿಸಿದ ವಿನಯ್ , ಇಂಥಹ ಸಕಲಕಲಾ ವಲ್ಲಭನ ಅಗಲಿಕೆ ತೀವ್ರ ಆಘಾತ ತಂದಿದೆ ಎಂದು ಗದ್ಧತಿರದಾರು . ಮಾಧ್ಯಮ ರಂಗಕ್ಕೆ ಕಾಲಿಡುವ ಯುವಕರಿಗೆ ಪ್ರೇರಣೆಯಾಗಿದ್ದ ರವಿಬೆಳಗೆರೆಯವರ ಅಗಲಿಕೆ ಅರಗಿಸಿಕೊಳ್ಳಲಿಕ್ಕಾಗದ ನೋವನ್ನುಂಟು ಮಾಡಿದೆ . ಜಾತ್ಯಾತೀತ ಮನೋಭಾವನೆ ಹೊಂದಿದ್ದ ಬೆಳಗೆರೆಯವರ ಶಾಲೆಯ ಅರ್ಜಿ ಫಾರಂನಲ್ಲಿ ಜಾತಿಯ ಕಾಲಂ ಇಲ್ಲದೇ ಇರುವುದು ಅವರ ಅವರ ಮೇರು ವ್ಯಕ್ತಿತ್ವವನ್ನು ಪರಿಚಯಿಸುತ್ತದೆ ವಿನಯಕುಮಾರ ಬೆಳಗೆರೆಯವರ ಬಗ್ಗೆ ಮಾತನಾಡಿದರು.
Be the first to comment