ತಾಲೂಕಾ ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಕೊವಿಡ್ ಅರಿವು ಕಾರ್ಯಕ್ರಮ….! ಕೊವಿಡ್-೧೯ ಮುನ್ನೆಚ್ಚರಿಕೆ ಅಗತ್ಯ: ಚಿಂತಾ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಕೊವಿಡ್-೧೯ ರೋಗವು ಇತರರಿಗೆ ಹರಡದಂತೆ ತಡೆಗಟ್ಟಲು ನಾವೆಲ್ಲ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದು ಅತ್ಯವಶ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಕೆ.ಜಿ.ಚಿಂತಾ ಹೇಳಿದರು.



ಅವರು ನ್ಯಾಯಾಲಯದ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ನಡೆದ ಕೊವಿಡ್ -೧೯ ಜನ ಜಾಗೃತಿ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ರೋಗದ ನಿಯಂತ್ರಣಕ್ಕೆ ಎಲ್ಲ ರೀತಿಯ ಸಂಶೋಧನೆಗಳು ನಡೆಯುತ್ತಿವೆ. ಕೊವಿಡ್ ರೋಗಕ್ಕೆ ಲಸಿಕೆ ಸಿಗುವವರೆಗೆ ನಾವೆಲ್ಲ ಸಂಯಮದಿAದ ಇರಬೇಕು. ಸರಕಾರದ ನಿಯಮಗಳು ಈಗಾಗಲೇ ಎಲ್ಲರಿಗೂ ತಿಳಿದಿವೆ. ಅವುಗಳ ಪಾಲನೆ ನಿರಂತರ ಇರಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ ಸಲ್ಲದು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪುರಸಭೆಯ ಮುಖ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಈ ನಿಟ್ಟಿನಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಇದಕ್ಕೆ ಅವರು ಅಭಿನಂದನಾರ್ಹರು ಎಂದವರು ಹೇಳಿದರು.
ಸಭೆಯನ್ನುದ್ದೇಶಿಸಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಸುರೇಶ ಸವದಿ, ವಕೀಲರ ಸಂಘದ ಉಪಾಧ್ಯಕ್ಷ ಪಿ.ಬಿ.ಜಾಧವ, ತಹಶೀಲ್ದಾರ್ ಜಿ.ಎಸ್.ಮಳಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ತಾಲ್ಲೂಕು ಪಂಚಾಯಿತಿ ಇ.ಓ. ಶಶಿಕಾಂತ ಶಿವಪೂರೆ, ಸಿಪಿಐ ಆನಂದ ವಾಘಮೋಡೆ ಮಾತನಾಡಿದರು.


ಕಾರ್ಯಕ್ರಮಕ್ಕೂ ಮುನ್ನ ಎಲ್ಲ ಅಧಿಕಾರಿಗಳು ನ್ಯಾಯಾಲಯದ ಆವರಣದಿಂದ ಕಿತ್ತೂರು ಚನ್ನಮ್ಮ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಹಳೆಯ ತಹಶೀಲ್ದಾರ್ ಕಚೇರಿಯ ವರೆಗೆ ಪಾದಯಾತ್ರೆ ನಡೆಸಿ, ಜನರಲ್ಲಿ ಮಾಸ್ಕ್ ಧರಿಸುವ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವ ಕುರಿತು ಜಾಗೃತಿ ಮೂಡಿಸಿದರು. ಸಲಾಂ ಭಾರತ ಟ್ರಸ್ಟ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಯು.ಐ.ಧರಿಕಾರ, ಸಲಾಂ ಭಾರತ ಟ್ರಸ್ಟ ಅಧ್ಯಕ್ಷ ಕುತ್ಬುದ್ದೀನ ಮುಲ್ಲಾ ಮತ್ತಿತರರು ಇದ್ದರು.
ವಕೀಲ ಎನ್.ಆರ್.ಮೊಖಾಶಿ ಸ್ವಾಗತಿಸಿ, ನಿರೂಪಿಸಿದರು. ವಕೀಲ ಎನ್.ಬಿ.ಮುದ್ನಾಳ ವಂದಿಸಿದರು.

Be the first to comment

Leave a Reply

Your email address will not be published.


*